ವಿಶ್ವ ಯೋಗ ದಿನಾಚರಣೆ

ಮೈಸೂರು: ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ರಾಣಿ ಅವರು, ಯೋಗ ಮಾಡುವುದರಿಂದ ರೋಗ ಮುಕ್ತರಾಗಬಹುದು. ಇಂದಿನ ಆಧುನಿಕ ಯುಗದಲ್ಲಿ ಒತ್ತಡದಿಂದ ತುಂಬಿರುವ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಾನವ ಜನಾಂಗ ಕುಗ್ಗಿ ಹೋಗುತಿದ್ದು, ಯೋಗ ಮತ್ತು ಧ್ಯಾನ ಮಾಡುವುದರಿಂದ ಎಲ್ಲದರಿಂದಲೂ ಮುಕ್ತಿ ಸಿಗುತ್ತದೆ. ಇಂದಿನ ಆಹಾರ ಪದ್ದತಿ ಹಲವು ರೋಗಗಳಿಗೆ ಮೂಲ ವಾಗಿರುವುದರಿಂದ ಯೋಗದಿಂದ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ ಎಂದರು.

ಇಂದಿನ ಮಕ್ಕಳ ಮೇಲೆ ಆಧುನಿಕ ಜಗತ್ತು, ಆಧುನಿಕ ವಸ್ತುಗಳು, ಹೆಚ್ಚು ಪ್ರಭಾವ ಬೀರುತ್ತಿದ್ದು ಮಕ್ಕಳ ಬೌದ್ಧಿಕ ಮಟ್ಟವೇ ಕುಂದುತ್ತಿದೆ. ಆದುದರಿಂದ ಚಿಕ್ಕ ಮಕ್ಕಳಿಂದಲೇ ಯೋಗಭ್ಯಾಸ ಮಾಡಿಸಬೇಕು ಎಂದರು. ನಮ್ಮ ದಿನನಿತ್ಯದ ಇತರ ಚಟುವಟಿಕೆ ಗಳಂತೆಯೆ ಯೋಗವು ಒಂದು ಚಟುವಟಿಕೆಯಾಗಬೇಕೆಂದು ತಿಳಿಸಿದರು. ನಂತರ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಯೋಗ ಪಟುಗಳಾದ ಕು. ಮಹೇಶ್ವರಿ ಡಿ.ವಿ., ಕು.ಮೇಘಶ್ರೀ ಎಚ್.ಡಿ., ಕು.ರಾಧಿಕ ಆರ್., ಕು.ಯಮುನ ಎಚ್.ಎ£.ï ಯೋಗ ಪಟುಗಳು ಯೋಗ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರದೀಪ್, ವಿ.ರಾಜೇಶ್ ಎಂ.ಮಹದೇವಪ್ರಸಾದ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಶ್ರೀಮತಿ ವಿ.ಡಿ. ಸುನೀತಾರಾಣಿ ಉಪಸ್ಥಿತರಿದ್ದರು.