ಆಡಳಿತ ಮಂಡಳಿ ಉದ್ಧಟತನ ಖಂಡಿಸಿ ಯುಬಿ ಸಂಸ್ಥೆ ನೌಕರರ ಪ್ರತಿಭಟನೆ

ಮೈಸೂರು: ಸೌಲಭ್ಯ ಕೇಳಿದ ಹಿನ್ನೆಲೆಯಲ್ಲಿ ನಿಯಮ ಗಾಳಿಗೆ ತೂರಿ ಮೂವರು ನೌಕರರನ್ನು ಹೊರ ರಾಜ್ಯ ಗಳಲ್ಲಿರುವ ಶಾಖೆಗಳಿಗೆ ವರ್ಗಾವಣೆ ಮಾಡಿ ನೌಕರರ ವಿರುದ್ಧ ಯುನೈಟೆಡ್ ಬ್ರೂವರೀಸ್ ಲಿ.(ಯುಬಿ) ಸಂಸ್ಥೆಯ ಆಡಳಿತ ಮಂಡಳಿ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿ ಕಾರ್ಖಾನೆಯ ಕೆಲ ನೌಕರರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬುಧವಾರ ಮೈಸೂರು ಜಿಲ್ಲಾ ಕೈಗಾ ರಿಕಾ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಯುಬಿ ಕಾರ್ಖಾನೆಯ ನೌಕರರು ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಕಾರ್ಖಾನೆ ವಾರ್ಷಿಕ ಕೋಟ್ಯಾಂತರ ರೂ. ಲಾಭ ಗಳಿ ಸುತ್ತಿದೆ. ಕಳೆದ 7 ವರ್ಷದಿಂದ 100ಕ್ಕೂ ಹೆಚ್ಚು ನೌಕರರು ಸೇವೆ ಸಲ್ಲಿಸುತ್ತಾ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಆದರೆ ನೌಕರರ ಹಿತ ಕಾಪಾಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದ್ದು, ಮೂಲ ಸೌಲಭ್ಯ ಕೇಳಿದ ಏಕೈಕ ಕಾರಣದಿಂದಾಗಿ ಮೂವರು ನೌಕರ ರನ್ನು ನಿಯಮ ಗಾಳಿಗೆ ತೂರಿ ಹೊರ ರಾಜ್ಯ ಗಳಲ್ಲಿರುವ ತಮ್ಮದೇ ಆದ ಸಂಸ್ಥೆಗಳಿಗೆ ವರ್ಗಾವಣೆ ಮಾಡಿದೆ. ಇದು ತಮ್ಮ ಹಕ್ಕು ಗಳನ್ನು ಕೇಳುವ ಕಾರ್ಮಿಕರನ್ನು ಹತ್ತಿಕ್ಕುವ ತಂತ್ರಗಾರಿಕೆಯಾಗಿದೆ ಎಂದು ಪ್ರತಿ ಭಟನಾಕಾರರು ಆರೋಪಿಸಿದರು.

ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಟೆಕ್ನಿ ಕಲ್ ಅಸಿಸ್ಟೆಂಟ್‍ಗಳಿಂದ 16 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತದೆ. ಹೆಚ್ಚುವರಿ ಅವಧಿ ಯಲ್ಲಿ ಕೆಲಸ ಮಾಡಿದ್ದಕ್ಕೆ ವೇತನ ನೀಡದೆ ವಂಚಿಸಲಾಗುತ್ತಿದೆ. ವಾರದ ರಜೆ ಸೌಲಭ್ಯ ವನ್ನೂ ನೀಡದೆ, ರಾಷ್ಟ್ರೀಯ ಹಬ್ಬದ ದಿನ ಗಳಲ್ಲಿಯೂ ಕೆಲಸ ಮಾಡಿಸಿಕೊಳ್ಳಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧÀ್ಯ ಪ್ರವೇಶಿಸಿ ಹೊರ ರಾಜ್ಯಗಳ ಕಾರ್ಖಾನೆ ಗಳಿಗೆ ವರ್ಗಾವಣೆಯಾಗಿರುವ ಮೂವರು ನೌಕರರನ್ನು ಮೈಸೂರಿನಲ್ಲಿಯೇ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಬೇಕು. ಅಲ್ಲದೆ ಲಾಭದಾಯಕ ವಾಗಿದ್ದರೂ ಸೌಲಭ್ಯ ನೀಡದೆ ನೌಕರ ರನ್ನು ಶೋಷಣೆ ಮಾಡುತ್ತಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಚ್ಚು ವರಿ ಅವಧಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ವೇತನ ವೇತನ ನೀಡುವಂತೆ ಆದೇಶಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಕೈಗಾರಿಕಾ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್, ಜಂಟಿ ಕಾರ್ಯದರ್ಶಿ ಧನಂಜಯ, ಪ್ರಧಾನ ಕಾರ್ಯ ದರ್ಶಿ ಹೆಚ್.ಎಸ್.ಜಗದೀಶ್, ಸಂಘಟನಾ ಕಾರ್ಯದರ್ಶಿ ಪಿ.ನಾಗೇಶ್, ವಿದ್ಯಾಧರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.