ಆ.29ರಿಂದ ಮೈಸೂರು ರೇಸುಗಳು ಆರಂಭ

ಮೈಸೂರು: ಆಗಸ್ಟ್ 29ರಿಂದ ಅಕ್ಟೋಬರ್ 21ರವರೆಗೆ ಮೈಸೂರು ರೇಸುಗಳು-2018 ನಡೆಯಲಿವೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ರೇಸ್ ಕ್ಲಬ್(ಒಖಅ) ಲಿಮಿಟೆಡ್‍ನಲ್ಲಿ ಇಂದು ಎಂಆರ್‍ಸಿ ಅಧ್ಯಕ್ಷ ಜಿ.ವೆಂಕಟೇಶ ಸುದ್ದಿಗೋಷ್ಠಿಯಲ್ಲಿ ರೇಸುಗಳ ಮಾಹಿತಿ ನೀಡಿದರು.

ಆಗಸ್ಟ್ 30ರಂದು 4 ವರ್ಷ ಮತ್ತು ಮೇಲ್ಪಟ್ಟ ಕುದುರೆಗಳಿಗಾಗಿ ಕೃಷ್ಣರಾಜ ಒಡೆಯರ್ ಮೆಮೋರಿಯಲ್ ಟ್ರೋಫಿ(ಗ್ರೇಡ್-3) ಪಂದ್ಯ, ಸೆಪ್ಟೆಂಬರ್ 3ರಂದು ದಿ ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ 1000 ಗಿನ್ನೀಸ್ ಪಂದ್ಯ, ಸೆಪ್ಟೆಂಬರ್ 13ರಂದು ದಿ ಮಹರಾಜಾಸ್ ಕಪ್, ಸೆಪ್ಟೆಂಬರ್ 27ರಂದು ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಪಂದ್ಯ, ಅಕ್ಟೋಬರ್ 4ರಂದು ದಿ ಕಂಟ್ರಿ ಸ್ಟಡ್ ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್ ಶಿಪ್ ಪಂದ್ಯ, ಅಕ್ಟೋಬರ್ 12ರಂದು ಗವರ್ನರ್ಸ್ ಕಪ್, ಅಕ್ಟೋಬರ್ 21ರಂದು ದಿ ಮೈಸೂರು ಡರ್ಬಿ ಪಂದ್ಯ ನಡೆಯಲಿವೆ.

ರೇಸ್ ಟ್ರ್ಯಾಕ್ ಮತ್ತು ಟ್ರೇನಿಂಗ್ ಟ್ರ್ಯಾಕ್‍ಗಳನ್ನು ಬೇಸಿಗೆ ರೇಸ್‍ಗಳಲ್ಲಿ ಸುಸಜ್ಜಿತವಾಗಿ ನಿರ್ವಹಿಸಿದಂತೆ 2018ರ ಮೈಸೂರು ರೇಸುಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 200 ಜೂಜು ಕಟ್ಟೆ ನಿರ್ವಹಣೆಗೆ ಮಾಟ್ ಸಾಫ್ಟ್‍ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 18×30 ಅಡಿ ಅಳತೆಯ ದೊಡ್ಡ ಪರದೆಯನ್ನು ಗ್ರ್ಯಾಂಡ್ ಸ್ಟ್ಯಾಂಡ್ ಮುಂಭಾಗ ಅಳವಡಿಸಲಾಗಿದೆ.
75 ಮತ್ತು ಮೇಲ್ಪಟ್ಟ ಕುದುರೆ ವರ್ಗಕ್ಕೆ ಒಟ್ಟು 6 ಲಕ್ಷ ರೂ., 60 ಮತ್ತು ಮೇಲ್ಪಟ್ಟ ಕುದುರೆ ವರ್ಗಕ್ಕೆ ಒಟ್ಟು 5.25 ಲಕ್ಷ ರೂ., 40ರಿಂದ 65ರ ಕುದುರೆ ವರ್ಗಕ್ಕೆ 4.5 ಲಕ್ಷ ರೂ., 20ರಿಂದ 45ರ ಕುದುರೆ ವರ್ಗಕ್ಕೆ 3.75 ಲಕ್ಷ ರೂ., ಹಾಗೂ 25ರ ಕುದುರೆಗಳ ವರ್ಗಕ್ಕೆ 3 ಲಕ್ಷ ರೂ.ಗಳ ಬಹುಮಾನಗಳನ್ನು ನಿಗದಿಪಡಿಸಲಾಗಿದೆ ಎಂದು ಜಿ.ವೆಂಕಟೇಶ್ ತಿಳಿಸಿದರು.

ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ‘ದಿ ಮೈಸೂರು 1000 ಗಿನೀಸ್’ ಕುದುರೆ ಪಂದ್ಯ ಪ್ರಾಯೋಜಿಸಲು ಮುಂದೆ ಬಂದಿದ್ದು, ದಿ.ಚಾಮರಾಜ ಸ್ಟಡ್ ಫಾರಂ ಅವರು ರೇಸ್‍ಗೆ ಬೆಂಬಲ ನೀಡಿದ್ದಾರೆ ಎಂದೂ ನುಡಿದರು.

ಮೈಸೂರು ರೇಸ್ ಕ್ಲಬ್ ನಿಯಮಿತ(ಒಖಅ) ಕಾರ್ಯದರ್ಶಿಗಳಾದ ಕೆ.ಜಿ.ಅನಂತರಾಜೇ ಅರಸ್, ಟಿ.ರಾಮನ್, ಉಪಕಾರ್ಯದರ್ಶಿ ಡಾ. ಎಂ.ಆರ್.ಜಗನ್ನಾಥ್, ಸ್ಟೀವರ್ಡ್‍ಗಳಾದ ಬಿಯು ಚಂಗಪ್ಪ, ಡಾ.ಎನ್.ನಿತ್ಯಾನಂದರಾವ್, ವೈ.ಪಿ.ಉದಯಶಂಕರ್, ಮುಖ್ಯ ಪಶು ವೈದ್ಯಾಧಿಖಾರಿ ಡಾ. ಸಿ.ವಿ.ನಿರಂಜನ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.