ಜಿಲ್ಲಾದ್ಯಂತ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

ಯುವಸಮೂಹ ವಿಜ್ಞಾನದ ಜತೆಗೆ ಆಧ್ಯಾತ್ಮ ಕೊಂಡೊಯ್ಯಿರಿ: ಕೆ.ಯಾಲಕ್ಕಿಗೌಡ ಅಭಿಮತ ಸ್ಫೂರ್ತಿಯ ಸೆಲೆ ಸ್ವಾಮಿ ವಿವೇಕಾನಂದ: ಕೆ.ಟಿ.ಹನುಮಂತು
ಮಂಡ್ಯ, ಜ.12(ನಾಗಯ್ಯ)- ಜಿಲ್ಲಾ ದ್ಯಂತ ಸ್ವಾಮಿ ವಿವೇಕಾನಂದ ಜಯಂತಿ ಯನ್ನು ಭಾನುವಾರ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.

ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಸೇರಿದಂತೆ ವಿವಿಧೆಡೆ ವಿವೇಕಾ ನಂದ ಜಯಂತೋತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ಜಿಲ್ಲಾಡಳಿತ, ಜಿಪಂ, ನಗರ ಸಭೆ, ಕಾಲೇಜು ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಮಹಿಳಾ ಸರ್ಕಾರಿ ಕಾಲೇಜು, ಕಲಾತಪಸ್ವಿ ಟ್ರಸ್ಟ್, ರೋಟರಿ ಸಕ್ಕರೆ ನಾಡು ಸಂಸ್ಥೆ, ಯುವ ಕಾಂಗ್ರೆಸ್ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ನಗರದ ಮಹಿಳಾ ಸರ್ಕಾರಿಕಾಲೇಜು (ಸ್ವಾಯತ್ತ)ನ ವನರಂಗದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಯುವಸಬಲೀಕರಣ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಓ ಕೆ.ಯಾಲಕ್ಕಿಗೌಡ, ಸ್ವಾಮಿ ವಿವೇಕಾ ನಂದರು ಹೇಳಿರುವಂತೆ ಆಧ್ಯಾತ್ಮದಲ್ಲಿ ಜಗದ ಹಿತ ಅಡಗಿದೆ. ಹೀಗಾಗಿ ಯುವ ಸಮೂಹ ವಿಜ್ಞಾನದ ಜೊತೆಗೆ ಆಧ್ಯಾತ್ಮ ವನ್ನು ಕೊಂಡಯ್ಯಬೇಕು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣ ಮಾಡುವುದಕ್ಕೂ ಮೊದಲು ನಮ್ಮ ಭಾರತವನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆಯಾಗಿತ್ತು. ಆದರೆ ಚಿಕಾಗೋ ಭಾಷಣ ಜರುಗಿದ ಮೇಲೆ ನಮ್ಮ ದೇಶವನ್ನು ನೋಡುವ ದೃಷ್ಟಿಯೇ ವಿಭಿನ್ನವಾಗಿದೆ. ವಿವೇಕಾ ನಂದರು ನೀಡಿದ ಚಿಂತನೆ, ಆಧ್ಯಾತ್ಮ ಹಾಗೂ ಅವರು ಕೊಟ್ಟ ಸಂದೇಶವನ್ನು ಇಂದಿಗೂ ಕೂಡ ನಮ್ಮ ಯುವಕರು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ವ್ಯಕ್ತಿತ್ವ ಅಭಿವೃದ್ಧಿ ತರಬೇತುದಾರ ಎಸ್.ಬಿ.ಲೀಲಾರಾಣಿ ಮಾತನಾಡಿ, ವೀರ ಸನ್ಯಾಸಿ ಇದ್ದ ಕಡೆ ಯುವ ಚೈತನ್ಯ ಇದ್ದೇ ಇರುತ್ತದೆ. ವಿವೇಕಾನಂದರು ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಹಾಗೂ ಒಂದು ಮಹಾನ್ ಶಕ್ತಿಯಾದ ಅವರು ನಮ್ಮೆಲ್ಲರಿಗೂ ಯುವ ಚೈತನ್ಯರಾಗಿದ್ದಾರೆ. ರಾಷ್ಟ್ರದ ಯುವಶಕ್ತಿ ಗಳನ್ನು ಒಂದು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದರು.

ವಿವೇಕಾನಂದರು ಶಿಕ್ಷಣದ ಪರಿಕಲ್ಪನೆ ಕಟ್ಟಿಕೊಡುವ ಮೂಲಕ ನಮ್ಮ ಸಮಾಜ ದಲ್ಲಿರುವ ಎಲ್ಲಾ ಕೆಡಕುಗಳನ್ನು ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಆದರೆ ಇಂದು ಶಿಕ್ಷಣ ಸಿಗುತ್ತಿ ದ್ದರೂ, ಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ, ಮೂಡನಂಭಿಕೆ ಯಾಕೆ ದೂರವಾಗಿಲ್ಲ ಎಂದರೆ ವಿವೇಕಾನಂದರು ಹಾಕಿಕೊಟ್ಟ ಶಿಕ್ಷಣದ ಪರಿಕಲ್ಪನೆಯಲ್ಲಿ ನಾವು ಸಾಗುತ್ತಿಲ್ಲ. ಹೀಗಾಗಿ ನಮ್ಮ ಸಮಾಜದಲ್ಲಿ ಕೆಡಕುಗಳು ಇನ್ನು ಇವೆ ಎಂದು ಮರುಗಿದರು.

ವ್ಯಕ್ತಿತ್ವ ನಿರ್ಮಾಣ ಮಾಡದ ಶಿಕ್ಷಣ ಶಿಕ್ಷಣವೇ ಅಲ್ಲ. ಶಿಕ್ಷಣ ಎಂಬುದು ನೈತಿಕತೆ, ಉತ್ತಮವಾದ ಮೌಲ್ಯ ಹಾಗೂ ಆಧ್ಯಾತ್ಮ ವನ್ನು ಬೆಳೆಸಿಕೊಡುವುದೇ ಶಿಕ್ಷಣ. ಹೀಗಾಗಿ ಕೇವಲ ಅಂಕಗಳಿಗೋಸ್ಕರ ಓದದೇ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ಪಡೆ ಯಿರಿ. ಕಲಿಕಾ ಹಂಬಲ ಹಾಗೂ ದಾಹ ವಿದ್ಯಾರ್ಥಿಗಳಲ್ಲಿ ಇರಬೇಕು. ನಿಮ್ಮ ಅಭಿವೃದ್ಧಿ ಗಾಗಿ ನೀವು ಓದಬೇಕು. ಯುವಕರು ಸ್ವಾಮಿ ಅವರು ಹೇಳಿದ ನೆಲಗಟ್ಟಿನಲ್ಲಿ ಸಾಗಬೇಕೆ ವಿನಃ ದುಶ್ಚಟಗಳಿಗೆ ದಾಸರಾಗಿ ನಿಮ್ಮ ಅಮೂಲ್ಯ ವಾದ ಬದುಕನ್ನು ನಾಶ ಮಾಡಿಕೊಳ್ಳ ಬೇಡಿ ಎಂದು ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮಹಿಳಾ ಸರ್ಕಾರಿ ಕಾಲೇಜಿನವರೆಗೆ ಹೊರಟ ಮೆರವಣಿಗೆಗೆ ಜಿಪಂ ಸಿಇಓ ಕೆ.ಯಾಲಕ್ಕಿ ಗೌಡ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಗಳನ್ನು ಸಾರಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಲ್ಯಾಪ್‍ಟಾಪ್ ಅನ್ನು ಶಾಸಕ ಎಂ.ಶ್ರೀನಿವಾಸ್ ವಿತರಿಸಿದರು.

ಶಾಸಕ ಎಂ.ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಹೆಚ್.ಎಸ್.ಶಿವಕುಮಾರಿ, ತಹಶೀಲ್ದಾರ್ ನಾಗೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಗೀತಾ, ಜಿಲ್ಲಾ ಲೀಡ್ ಕಾಲೇಜು ಪ್ರಾಂಶುಪಾಲರು ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಪೆÇ್ರ.ಸಿ.ನಟರಾಜ್, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶು ಪಾಲ ಕೆ.ಬಿ.ನಾರಾಯಣ್, ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ಫೂರ್ತಿಯ ಸೆಲೆ ಸ್ವಾಮಿ ವಿವೇಕಾನಂದ: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ರೋಟರಿ ಸಕ್ಕರೆ ನಾಡು ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕ ಲಯನ್ಸ್ ಸಂಸ್ಥೆ ಪ್ರಧಾನ ಪೋಷಕ ಕೆ.ಟಿ.ಹುನುಮಂತು, ಯುವಜನತೆಯ ಸ್ಫೂರ್ತಿಯ ಸೆಲೆಯಾಗಿರುವ ಸ್ವಾಮಿ ವಿವೇಕಾನಂದರು ಸೂರ್ಯಚಂದ್ರರಿರುವ ತನಕ ಜೀವಂತವಾಗಿರುತ್ತಾರೆ ಎಂದರು.

ಈ ವೇಳೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ನೃತ್ಯ ವಿದುಷಿ ಸುನೀತ ನಂದಕುಮಾರ್ ಮತ್ತು ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ದೊಡ್ಡಚಾರಿ ಅವರನ್ನು ಗಣ್ಯರು ಅಭಿನಂದಿಸಿ ಗೌರವಿಸಿದರು.

ಬಳಿಕ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ರಾಜ್ಯಮಟ್ಟದ ಚಿತ್ರ ಕಲಾವಿದರು, ಸ್ವಾಮಿ ವಿವೇಕಾನಂದರ ಭಾವಚಿತ್ರ, ಕಡಲ ತೀರದಲ್ಲಿ ನಿಂತ ಸನ್ಯಾಸಿ ವಿವೇಕಾನಂದರ ಚಿತ್ರ, ಪ್ರಕೃತಿಯ ಸೊಬಗು, ಹಸಿರು-ಉಸಿರು ಪ್ರತಿಬಿಂಬ, ವಿವಿಧ ಪ್ರಾಣಿ, ಪಕ್ಷಿಗಳ ಹಾರಾ ಟದ ಗುಂಪು, ಅರಣ್ಯ ವಿನಾಶ, ಭೂಗೋಳ ದಲ್ಲಿ ಶಾಂತಿ ಸಂದೇಶದ ಪಾರಿವಾಳ, ಸೂರ್ಯೋದಯದ ರಮಣೀಯ ಚಿತ್ರ, ಐತಿಹ್ಯ ಕಟ್ಟಡಗಳ ಕಲರವ ಸೇರಿದಂತೆ ವಿವಿಧ ಚಿತ್ರಗಳನ್ನು ಕುಂಚದ ಮೂಲಕ ಚಿತ್ರಿಸಿರುವುದನ್ನು ಸಾರ್ವಜನಿಕರು ನೋಡಿ ಕಣ್ಮನ ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ ಚಂದ್ರಕುಮಾರ್, ಟ್ರಸ್ಟ್‍ನ ಕಾರ್ಯದರ್ಶಿ ಅನಿಲ್‍ಕುಮಾರ್ ಮತ್ತು ಕಲಾವಿದ ವಿನೋದ್‍ಕುಮಾರ್ ಹಾಗೂ ಚಿತ್ರಕಲಾವಿದ ತಂಡ ಹಾಜರಿದ್ದರು.