ಜ್ಞಾನವೃದ್ಧಿಗೆ ಮೊಬೈಲ್ ಬಳಕೆಯಾಗುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಿ

ಮೈಸೂರು,ಜ.4(ವೈಡಿಎಸ್)-ಇಂದಿನ ಮಕ್ಕಳು ಮೊಬೈಲ್ ಬಳಕೆಯನ್ನು ಹವ್ಯಾಸ ವಾಗಿ ಮಾಡಿಕೊಳ್ಳುತ್ತಿರುವುದು ಆತಂಕ ಕಾರಿ ಬೆಳವಣಿಗೆ. ಮೊಬೈಲ್ ಅನ್ನು ಕೇವಲ ಗೇಮ್ ಆಡಲು ಬಳಸದೆ ಜ್ಞಾನ ವೃದ್ಧಿಗೆ ಬಳಸುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಮಂಡ್ಯ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾ ಪಕಿ ಡಾ.ಪ್ರಿಯಾ ಉತ್ತಯ್ಯ ಇಟ್ಟಿರಾ ಪೋಷಕರಿಗೆ ಸಲಹೆ ನೀಡಿದರು.

ಸಾತಗಳ್ಳಿ ವಿದ್ಯಾಶಂಕರ ಬಡಾವಣೆಯಲ್ಲಿ ರುವ ಕೊಡಗು ಮಾಡೆಲ್ ಸ್ಕೂಲ್‍ನ 11ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕೊಡಗು ಮಾಡೆಲ್ ಸ್ಕೂಲ್ ಕಳೆದ ಒಂದು ದಶಕದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದಕ್ಕಾಗಿ ಆಡಳಿತ ಮಂಡಳಿ, ಪೆÇೀಷಕರು, ಶೈಕ್ಷಣಿಕ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಈ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.

ಶಾಲೆಗಳಿಗೆ ನಮ್ಮ ಜೀವನದಲ್ಲಿ ವಿಶೇಷ ಸ್ಥಾನವಿದೆ. ಕಾರಣ, ಶಾಲಾ ದಿನಗಳಲ್ಲಿ ಶಿಕ್ಷ ಕರು ನಮ್ಮ ಮೇಲೆ ಗಾಢ ಪ್ರಭಾವ ಬೀರಿ ರುತ್ತಾರೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಹಾಗಾಗಿ ಶಿಕ್ಷ ಕರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಮಕ್ಕಳಿಗೆ ಜ್ಞಾನವನ್ನು ಸರಿಯಾಗಿ ಕಲಿಸ ಬೇಕಾದುದು ಶಿಕ್ಷಕರ ಕರ್ತವ್ಯ. ಆದ್ದರಿಂದ ತರಗತಿಗೆ ಪಾಠ ಮಾಡಲು ಹೋಗುವ ಮುನ್ನ ಸೂಕ್ತ ತಯಾರಿ ನಡೆಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ನಮ್ಮ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಸುವುದರಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳ ಮನೋಬಲ ಕುಗ್ಗಿಸುವ ಮಾತುಗಳನ್ನಾಡದೆ ಪೆÇ್ರೀತ್ಸಾಹಿ ಸುವ ಕೆಲಸ ಮಾಡಬೇಕು. ಮಕ್ಕಳು ಪರೀಕ್ಷೆ ಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಮುಖ್ಯ. ಆದರೆ ಅಂಕಗಳಿಸುವತ್ತ ಮಾತ್ರ ಗಮನಹರಿ ಸದೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಚೆನ್ನಾಗಿ ಓದಿ ಉನ್ನತ ಹುದ್ದೆ ಗಳನ್ನು ಪಡೆಯಬೇಕು. ಶಾಲೆಯಲ್ಲಿ ಸ್ವಚ್ಛತೆ, ನೀರು ಮತ್ತು ವಿದ್ಯುತ್ ಸಮಸ್ಯೆಯಿದ್ದರೆ ಸ್ಪಂದಿಸುವುದಾಗಿ ತಿಳಿಸಿದರು.

ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಅಧ್ಯಕ್ಷ ಕೆ.ಡಿ.ಪೊನ್ನಪ್ಪ ಮಾತನಾಡಿ, 11 ವರ್ಷದ ಹಿಂದೆ 7 ಮಕ್ಕಳಿಂದ ಆರಂಭ ವಾದ ಕೊಡಗು ಮಾಡೆಲ್ ಸ್ಕೂಲ್, ಶಿಕ್ಷ ಕರ ಪರಿಶ್ರಮದಿಂದ ಇಂದು ಎತ್ತರಕ್ಕೆ ಬೆಳೆ ದಿದೆ. ಇದನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ನಮ್ಮ ಸಂಸ್ಥೆಯ ಹಿರಿ ಯರು ಶ್ರಮಿಸುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಓದಿ ಉತ್ತಮ ಹುದ್ದೆಗಳನ್ನು ಅಲಂಕರಿ ಸುವಂತಾಗಲಿ ಎಂದು ಹಾರೈಸಿದರು.

ಚಿನ್ನದ ಪದಕ ವಿಜೇತರು: ರಾಷ್ಟ್ರೀಯ ಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ 3ನೇ ತರಗತಿ ಎಂ.ಮನಿಶಾ 4ನೇ ಸ್ಥಾನ, 6ನೇ ತರಗತಿಯ ಡಿ.ಕೆ.ಯಶ್ವಂತ್ 11ನೇ ಸ್ಥಾನ ಹಾಗೂ ರಾಜ್ಯಮಟ್ಟದ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ 1ನೇ ತರಗತಿಯ ಎಸ್.ಎನ್. ಜಯಶ್ರೀ 2ನೇ ಸ್ಥಾನ, 7ನೇ ತರಗತಿಯ ಎಂ.ಪಿ.ನಿವೇದ 3ನೇ ಸ್ಥಾನ ಹಾಗೂ 6ನೇ ತರಗತಿಯ ಐಶ್ವರ್ಯ ಎಸ್.ಗೌಡ 6ನೇ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗಳಿಸಿದ್ದ ವಿದ್ಯಾರ್ಥಿಗಳನ್ನು ಗೌರವಿಸಲಾ ಯಿತು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದ ಪ್ಲೇ ಸ್ಕೂಲ್‍ನ ಎಂ.ಮೋಹಿತ್, ಎಂ.ಶರತ್, ಎಂ.ಎಸ್.ಹರಿಟ, ಎಸ್.ಇಂಚರ. ಎಲ್‍ಕೆಜಿ ವಿಭಾಗದ ಕೆ.ಎಸ್.ಧಾರ್ಮಿಕ್, 2ನೇ ತರಗತಿಯ ಆರ್.ಯಶ್ವಂತ್, ಟಿ.ಆರ್. ಸಮೀಕ್ಷಾ. 3ನೇ ತರಗತಿಯ ಜಿ.ಐಶ್ವರ್ಯ ಲಕ್ಷ್ಮಿ. 4ನೇ ತರಗತಿಯ ಎಂ.ಎಸ್.ನಿಶ್ಚಿತ್ ಸುಬ್ರಹ್ಮಣ್ಯ. 6ನೇ ತರಗತಿಯ ಭಕ್ತಿ, ಅಲ್ಫಿಯಾ. 7ನೇ ತರಗತಿಯ ಎಂ.ಪಿ. ನಿವೇದಾ. 9ನೇ ತರಗತಿಯ ಆರ್.ಮಂಜು ನಾಥ್ ಮತ್ತು ಆರ್.ನರಹರಿ ಅವರಿಗೆ ಬಹುಮಾನ ವಿತರಿಸಲಾಯಿತು.