ಮದ್ದೂರು, ಜ.6- ಪಟ್ಟಣದ ಕೆ.ಗುರು ಶಾಂತಪ್ಪ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ‘ಡಿ’ ಗ್ರೂಪ್ ನೌಕರರನ್ನು ವಜಾ ಮಾಡಿ ರುವ ಕ್ರಮ ಖಂಡಿಸಿ ಹಾಗೂ ಡಿಹೆಚ್‍ಓ ಅಮಾನತಿಗೆ ಆಗ್ರಹಿಸಿ ದಲಿತ ಸಂಘಟನೆ ಗಳ ಸಮ್ವನಯ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಈ ಕೂಡಲೇ ಕೆಲಸದಿಂದ ತೆಗೆದಿರುವ ಡಿ ಗ್ರೂಪ್ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಡಿಹೆಚ್‍ಓ ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಕಬ್ಬಾಳಯ್ಯ ಮಾತನಾಡಿ, ಸರ್ಕಾರಿ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ 6 ಮಂದಿ ಹೊರಗುತ್ತಿಗೆ ಡಿ ಗ್ರೂಪ್ ದಲಿತ ನೌಕರ ರನ್ನು ಏಕಾಏಕಿ ತೆಗೆದಿರುವುದು ಸರಿ ಯಲ್ಲ. ಇದರಿಂದ ಮನನೊಂದು ಕಾರ್ಮಿಕ ಪ್ರಭು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಈ ಘಟನೆಗೆ ಕಾರಣರಾದ ಡಿಹೆಚ್‍ಓ ಅವರನ್ನು ಈ ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಹೇಳಿರುವ ಕಾರಣಕ್ಕೆ ಬಲವಂತವಾಗಿ ಕಾರ್ಮಿಕರನ್ನು ಕೆಲಸ ದಿಂದ ತೆಗೆದಿರುವ ಏಜೆನ್ಸಿ ಕ್ರಮ ಸರಿಯಲ್ಲ ಎಂದ ಅವರು, ಶೀಘ್ರವಾಗಿ ಬೇಡಿಕೆ ಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಡಿಹೆಚ್‍ಓ ಮಂಜೇಗೌಡ ಮಾತನಾಡಿ, ಈ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಕ್ರಮ ಕೈ ಗೊಳ್ಳಲಾಗುವುದು. ಇಲ್ಲಿ ದಲಿತರನ್ನು ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಸುಳ್ಳು. ಇನ್ನೂ ಹಲವು ದಲಿತರು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗು ವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಬೋರಯ್ಯ, ಸಮಿತಿಯ ಅಂದಾನಿ, ಬೋರಯ್ಯ, ಹೊಂಬಯ್ಯ, ಅಂಬರೀಶ್. ಶಂಕರ್, ಮಾದೇಶ್, ಮಹದೇವು, ಕೃಷ್ಣಪ್ಪ, ತಿರುಮಲ್ಲಯ್ಯ, ಯಶವಂತ್ ಕಾರ್ಮಿಕರಾದ ಸಹನ, ಪ್ರಭು, ಇಂದು ಮತಿ, ಗೋವಿಂದರಾಜು, ಶ್ರೀಧರ್, ಉಮೇಶ್ ಇತರರಿದ್ದರು.