ಮಹಿಳೆಯರಿಗೆ ಉದ್ಯೋಗವಕಾಶ: ಬಿಜೆಪಿ ಅಭ್ಯರ್ಥಿ ಎಸ್. ಶಂಕರ್

ತಿ.ನರಸೀಪುರ: ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಬನ್ನೂರು ಪಟ್ಟಣದಲ್ಲಿ ಗಾರ್ಮೆಂಟ್ಸ್ ಆರಂಭಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು.

ತಾಲ್ಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತ ನಾಡಿ, ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ ಆರ್ಥಿಕ ಸದೃಢತೆಯನ್ನು ಸಾಧಿಸುತ್ತಿರುವ ಮಹಿಳೆಯರು ಮತ್ತಷ್ಟು ಸಬಲತೆಯನ್ನು ಸಾಧಿಸಲು ಪೂರಕವಾಗಿ ಬನ್ನೂರು ಪಟ್ಟಣದಲ್ಲಿ ಗಾರ್ಮೇಂಟ್ಸ್ ಆರಂಭಿಸ ಬೇಕೆಂಬ ಚಿಂತನೆಯನ್ನು ನಡೆಸ ಲಾಗಿದೆ ಎಂದರು. ಕಳೆದೊಂದು ದಶಕ ದಿಂದಲೂ ಕ್ಷೇತ್ರದ ಶಾಸಕರಾಗಿದ್ದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬನ್ನೂರು ಭಾಗದ ಜನರನ್ನು ನಿರ್ಲಕ್ಷ್ಯ ಭಾವನೆಯಿಂದ ಕಂಡಿದ್ದಾರೆ. ಮಹಿಳಾ ಸಂಘಗಳಿಗೆ ಸರ್ಕಾರ ಆರ್ಥಿಕ ನೆರವನ್ನು ಸಮರ್ಪಕವಾಗಿಯೇ ಕಲ್ಪಿಸಿಲ್ಲ. ದುಡಿಯುವ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಲ್ಲ. ಅಂತಹವರಿಗೆ ಬಾರಿಯ ಚುನಾವಣೆ ಯಲ್ಲಿ ತಕ್ಕ ಪಾಠವನ್ನು ಕಲಿಸಬೇಕು ಎಂದರು. ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮಾತನಾಡಿ, ತಾನೂ ಕೂಡ ಮಹಿಳೆಯಾಗಿ ಮಹಿಳೆಯರ ಎಲ್ಲಾ ಕಷ್ಟ ಸುಖಗಳನ್ನು ಅರಿತಿದ್ದೇನೆ. ಚುನಾವಣೆ ಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೀಡುವ ಆಮಿಷಗಳಿಗೆ ಮಾರು ಹೋಗಬಾರದು. ಸಾಮಾಜಿಕ ಸೇವೆಯಲ್ಲಿ ಎಸ್.ಶಂಕರ್ ಬದ್ಧತೆ ಇರುವ ರಾಜಕಾರಣಿ ಯಾಗಿದ್ದರಿಂದ ಅವರನ್ನು ಬೆಂಬಲಿಸ ಬೇಕು ಎಂದರು. ಎಪಿಎಂಸಿ ಸದಸ್ಯ ಹೊಂಬಾಳಯ್ಯ, ಪುರಸಭೆ ಮಾಜಿ ಸದಸ್ಯ ಎಸ್.ಸಿದ್ದೇಗೌಡ, ವಕೀಲ ಬಿ.ಎಸ್.ರಂಗನಾಥ್, ಮುಖಂಡರಾದ ಗೌಡ್ರು ಪ್ರಕಾಶ್, ವೀಣಾ ಶಿವಕುಮಾರ್, ಸುರೇಶ್, ಶಿವಕುಮಾರ್ ಸೇರಿದಂತೆ ಸಾವಿರಾರು ಸ್ವ ಸಹಾಯ ಸಂಘಗಳ ಮಹಿಳೆಯರು ಹಾಜರಿದ್ದರು.