ಸಮಾನತೆಯ ಹರಿಕಾರ ಬಸವಣ್ಣ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 12ನೇ ಶತಮಾನದ ಲಿಂಗಾಯತ ತತ್ವಜ್ಞಾನಿ, ವಚನಕಾರ ಬಸವಣ್ಣನವರನ್ನು ಸಮಾನತೆಯ ಹರಿಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ. ಬಸವಣ್ಣ ಒಬ್ಬ ತತ್ವಜ್ಞಾನಿಯಾಗಿದ್ದು ಅವರಿಗೆ ಸಾಮಾಜಿಕ ನ್ಯಾಯ ಮುಖ್ಯವಾಗಿತ್ತು. ಸಮಾನತೆಯ ಹರಿಕಾರರಾಗಿದ್ದರು. ಸಮಾಜದಲ್ಲಿ ಕ್ರಾಂತಿಯನ್ನು ತರಲು ಅವರು ಯಾವಾಗಲೂ ಹಂಬಲಿಸುತ್ತಿದ್ದರು ಎಂದರು.

ಬಸವ ಜಯಂತಿ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಸವ ಮೂರ್ತಿಗೆ ಹಾರ ಹಾಕಲು ಬಿಡಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದರು. ಬಸವ ಜಯಂತಿಯನ್ನು ಆಚರಿಸುವ ನೈತಿಕ ಹಕ್ಕು ಸಿದ್ದರಾಮಯ್ಯನವರಿಗಿಲ್ಲ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದರು.