ಸಾಧಕರಿಗೆ `ಪುನೀತ್ ಯುವ ಕಣ್ಮಣಿ’ ಪ್ರಶಸ್ತಿ ಪ್ರದಾನ

ಮೈಸೂರು, ನ.21(ಎಸ್‍ಪಿಎನ್)- `ಕರ್ನಾಟಕ ರತ್ನ’ ದಿವಂಗತ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ `ಪುನೀತ್ ಯುವ ಕಣ್ಮಣಿ ಪ್ರಶಸ್ತಿ’ಯನ್ನು ಭಾನುವಾರ ಪ್ರದಾನ ಮಾಡಲಾಯಿತು.

ಮೈಸೂರು ಪುರಭವನದ ಸಭಾಂ ಗಣದಲ್ಲಿ ವಿಶ್ವಮಾನವ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ವತಿ ಯಿಂದ ಆಯೋಜಿಸಿದ್ದ ವಿವಿಧ ಸಾಧಕ ರಿಗೆ ಸನ್ಮಾನ ಹಾಗೂ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಪುನೀತ್ ಯುವ ಕಣ್ಮಣಿ ಪ್ರಶಸ್ತಿಯನ್ನು ಪೊಲೀಸ್ ಇಲಾಖೆಯ ಎಂ.ಶಿವಶಂಕರ್, ರಂಗಭೂಮಿ ಕ್ಷೇತ್ರದ ಕೆರೆಹಳ್ಳಿ ಮಹದೇವಸ್ವಾಮಿ, ಸೋನಳ್ಳಿ ಎಸ್.ಶಿವಣ್ಣ, ಶಿಲ್ಪಿ ಅರುಣ್ ಯೋಗಿ ರಾಜ್, ಸಮಾಜ ಸೇವಕ ಪೃಥ್ವಿ ಸಿಂಗ್, ರಕ್ಷಣಾ ಕ್ಷೇತ್ರದ ರವಿನಾಯಕ್, ಸಮಾಜ ಸೇವಕ ವಿಕ್ರಂ ಅಯ್ಯಂಗಾರ್ ಅವರಿಗೆ ಕರ್ನಾ ಟಕ ದಸರಾ ವಸ್ತು ಪ್ರದರ್ಶನ ಪ್ರಾಧಿ ಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರ ಸಾಧನೆಯನ್ನು ಪರಿಗಣಿಸಿ ಮರಣೋತ್ತರ ವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಸಮಂಜಸವಾಗಿದೆ ಎಂದು ತಿಳಿಸಿದರು.
ಪುನೀತ್ ರಾಜ್‍ಕುಮಾರ್ ಕೇವಲ ಸಿನಿಮಾ ಕ್ಷೇತ್ರವಲ್ಲದೆ, ಸಾಮಾಜಿಕ ಕ್ಷೇತ್ರದಲ್ಲೂ ಯಾರಿಗೂ ತಿಳಿಯದ ಹಾಗೆ ಕೆಲಸ ಮಾಡಿ ದ್ದಾರೆ. ಆ ಕೆಲಸಗಳು ಅವರ ಮರಣದ ನಂತರ ಬೆಳಕಿಗೆ ಬಂದಿದೆ. ಇದು ಇಂದಿನ ಯುವಕರಿಗೆ ಮಾದರಿ ಎಂದರು.

ನಂತರ ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಗಾಯಕ ಬಿ.ಪಿ.ಮಂಜುನಾಥ್ ಹಾಗೂ ಇತರೆ ಗಾಯಕರು ಡಾ.ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಚಿತ್ರದ ಹಾಡುಗಳನ್ನು ಪ್ರಸ್ತುತ ಪಡಿಸಿ ಅಗಲಿದ ನಟನಿಗೆ `ಗೀತ ನಮನ’ ಸಲ್ಲಿಸಿದರು.
ಈ ವೇಳೆ ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ಡಿಸಿ ಶ್ರೀನಿವಾಸ್, ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಸಮಾಜ ಸೇವಕ ತಮ್ಮಯ್ಯ, ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್‍ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಾಜ್ಯ ನಿರ್ದೇ ಶಕಿ ರೇಣುಕಾ ಆರಾಧ್ಯ, ಎನ್.ಆರ್.ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಿ. ರೋಹಿತ್, ವಿಶ್ವಮಾನವ ಡಾ.ರಾಜ್‍ಕುಮಾರ್ ಅಭಿಮಾನಿ ಬಳಗದ ಸುಚೀಂದ್ರ ಇದ್ದರು.