ಮೈಸೂರು ಜಿಲ್ಲೆಯಲ್ಲಿ ಕ್ಷಯರೋಗದಿಂದ 3 ನಿಮಿಷಕ್ಕೆ 1 ಸಾವು: ರೋಹಿಣಿ ಸಿಂಧೂರಿ

ಮೈಸೂರು, ಮಾ.24- ಕ್ಷಯರೋಗಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಪ್ರತಿ 3 ನಿಮಿಷಕ್ಕೆ 1 ಸಾವು ಸಂಭವಿಸುತ್ತಿದೆ ಎಂದು ಮೈಸೂರು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರದಂದು ವೈದ್ಯರ ಭವನದಲ್ಲಿ ಕ್ಷಯರೋಗದ ನಿರ್ಮೂ ಲನೆಗೆ ಕಾಲ ಘಟಿಸುತ್ತಿದೆ ಘೋಷಣೆ ಯೊಂದಿಗೆ ನಡೆದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದರು.

ಕ್ಷಯರೋಗ ಒಂದು ಸೈಲೆಂಟ್ ಕಿಲ್ಲರ್ ಆಗಿದ್ದು, ಕೊರೊನಾಗಿಂತ ಭಯಾನಕವಾಗಿದೆ. ಆದ್ದರಿಂದ ಇದನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಜಿಲ್ಲೆಯಲ್ಲಿ ಕ್ಷಯರೋಗ ಜಾಗೃತಿ ಜಾಥಾ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾ ಗಿಲ್ಲ. ಜಿಲ್ಲೆಯಾದ್ಯಂತ ಜನರಲ್ಲಿ ನಾವು ಈ ಕ್ಷಯರೋಗದ ಕುರಿತು ಅರಿವು ಮೂಡಿ ಸುವ ಅವಶ್ಯಕತೆಯಿದೆ ಎಂದು ಹೇಳಿದರು.

ವಿಶ್ವ ಕ್ಷಯರೋಗ ದಿನವು ರಾಜಕೀಯ ಮತ್ತು ಸಾಮಾಜಿಕ ಬದ್ಧತೆಯನ್ನು ಹೆಚ್ಚು ಗೊಳಿಸುವ ಒಂದು ಸುಸಂದರ್ಭವಾಗಿದೆ. ಈ ವರ್ಷದ ವಿಶ್ವ ಕ್ಷಯರೋಗ ದಿನವನ್ನು ಗುರುತಿಸಲು ಮತ್ತು ಕ್ಷಯ ಮುಕ್ತ ಕರ್ನಾ ಟಕವನ್ನಾಗಿ ಮಾಡಲು ನಮ್ಮ ಪ್ರಯತ್ನ ಗಳನ್ನು ನಾವು ಮಾಡಬೇಕಿದೆ. ಟಿ.ಬಿಯ ಹಾನಿಕಾರಕ ಪರಿಣಾಮಗಳ ಕುರಿತು ಜನರ ಗಮನ ಸೆಳೆಯಲು ನಾವು ಇಂದು ಪ್ರಮುಖ ಸ್ಮಾರಕಗಳಲ್ಲಿ ಡಿಸಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೆಂಪು ದೀಪ ಬೆಳಗಿಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವಿಭಾಗೀಯ ಜಂಟಿ ನಿರ್ದೇ ಶಕ ಡಾ.ಉದಯ್‍ಕುಮಾರ್ ಮಾತನಾಡಿ, ರಾಜರ ಕಾಲದಿಂದಲೂ ಕ್ಷಯರೋಗವಿತ್ತು. ಆದರೆ ಕಾರಣ ತಿಳಿದು ಬಂದಿರಲಿಲ್ಲ. ಜಿಲ್ಲೆ ಯಲ್ಲಿ ಕ್ಷಯರೋಗ ಪ್ರಕರಣಗಳು ಕಡಿಮೆ ಯಾಗುತ್ತಿವೆ ವಿನಃ ಕ್ಷೀಣವಾಗುತ್ತಿಲ್ಲ. ಆದ್ದ ರಿಂದ ಕ್ಷಯ ಮುಕ್ತ ಕರ್ನಾಟಕ ಯೋಜ ನೆಯು ಭಾರತ ಸರ್ಕಾರದ ಯೋಜನೆಯಂತೆ 2025ರ ವೇಳೆಗೆ ಭಾರತದಲ್ಲಿ ಟಿ.ಬಿ ಯನ್ನು ಮುಕ್ತಗೊಳಿಸಲು ಪೂರಕ ಕಾರ್ಯತಂತ್ರ ವಾಗಿದೆ. ಇದನ್ನು ಸಾಧಿಸಲು ಎಲ್ಲರ ಸಹ ಕಾರವು ತುರ್ತಾಗಿದ್ದು, ಪಣತೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಲಯನ್ ಸಂಸ್ಥೆಯು ಕ್ಷಯರೋಗಕ್ಕೆ ನೀಡಿದ ಪ್ರೋಫಿಲ್-ಡಿಎಫ್ ಔಷಧಿಯನ್ನು ಡಿಸಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿ ದರು. ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ, ಪಿ.ಕೆ.ಟಿ.ಬಿ ಮತ್ತು ಸಿ.ಡಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವಿರೂ ಪಾಕ್ಷ, ಆಶಾಕಿರಣ ಸಂಸ್ಥೆಯ ಮುಖ್ಯಸ್ಥ ಡಾ.ಸ್ವಾಮಿ, ಲಯನ್ ಸಂಸ್ಥೆಯ ಡಾ.ಡಿ.ಟಿ. ಪ್ರಕಾಶ್, ಕೆ.ಆರ್ ಆಸ್ಪತ್ರೆಯ ಟಿಬಿ ಹೆಚ್‍ವಿಯ ಡಾ.ಸೋಮಶೇಖರ್, ಪಿರಿಯಾ ಪಟ್ಟಣದ ಉಮೇಶ್ ಮತ್ತು ಮಕ್ಕಳ ಕ್ಷಯ ರೋಗದ ರಾಯಭಾರಿಗಳಾದ ರಿಫಾ ತಸ್ಕೀನ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರ್‍ನಾಥ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹಮದ್ ಸಿರಾಜ್ ಅಹಮದ್, ಮೈಸೂರು ವಿಭಾಗದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ್ತಿ ಡಾ.ಸ್ಪೂರ್ತಿ, ಜಿಲ್ಲಾ ತರ ಬೇತಿ ಸಂಸ್ಥೆಯ ಮುಖ್ಯಸ್ಯೆ ಸುಗುಣ ಮತ್ತಿ ತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.