ಹತ್ತು ದಿನಗಳ `ನಂದಿನಿ ಸಿಹಿ ಉತ್ಸವ’ಕ್ಕೆ ಚಾಲನೆ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ

ಮೈಸೂರು, ಡಿ.24(ಆರ್‍ಕೆಬಿ)- ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ 10 ದಿನಗಳ ಸಿಹಿ ಉತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು. ಮೈಸೂರಿನ ಕೆಆರ್‍ಎಸ್ ರಸ್ತೆಯ ಇಎಸ್‍ಐ ಆಸ್ಪತ್ರೆ ಮುಂಭಾಗದ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರದಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇ ಶಕರಾದ ಡಾ.ಎಂ.ಎಸ್.ವಿಜಯಕುಮಾರ್ ಮೈಸೂರು ಹಾಲು ಒಕ್ಕೂಟ ಹೊಸದಾಗಿ ಆವಿಷ್ಕರಿಸಿರುವ `ನಂದಿನಿ ಚಕ್ಕಿ ಲಾಡು’ ಬಿಡುಗಡೆ ಮಾಡುವ ಮೂಲಕ ಸಿಹಿ ಉತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮೂರು ವರ್ಷದಿಂದ ಒಕ್ಕೂಟದ ವತಿಯಿಂದ `ಸಿಹಿ ಉತ್ಸವ’ ಏರ್ಪಡಿಸುತ್ತಾ ಬರ ಲಾಗಿದ್ದು, ಪ್ರತಿ ಬಾರಿಯೂ ನಂದಿನಿಯ ಹೊಸ ವಿಶೇಷ ಹಾಲಿನ ಉತ್ಪನ್ನ ಬಿಡುಗಡೆ ಮಾಡಲಾಗುತ್ತಿದೆ. ಅಂತೆಯೇ ಈ ಬಾರಿ ನಂದಿನಿ ಚಕ್ಕಿ ಲಾಡು ವಿಶೇಷ ಎಂದರು.

ಈಗಾಗಲೇ 56 ಬಗೆಯ ಸಿತಿ ತಿನಿಸುಗಳನ್ನು ಪರಿಚಯಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಈ ಬಾರಿಯ ಸಿಹಿ ಉತ್ಸವದಲ್ಲಿ ಗೋಧಿಯಿಂದ ತಯಾರಿ ಸಿದ ಲಾಡು ಪರಿಚಯಿಸಲಾಗಿದೆ. ಅಲ್ಲದೆ ಜ.2ರವರೆಗೆ ನಡೆ ಯುವ ಈ ಬಾರಿಯ ಸಿಹಿ ಉತ್ಸವದಲ್ಲಿ ಗ್ರಾಹಕರಿಗೆ ಶೇ.10 ರಷ್ಟು ಹಾಗೂ ಹಾಲಿನಿಂದ ತಯಾರಿಸಿದ ಚೀಜ್‍ಗಳ ಮೇಲೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರಾದ ಕೆ.ಸಿ. ಬಲರಾಂ, ಎ.ಟಿ.ಸೋಮಶೇಖರ್, ಕೆ.ಎಸ್.ಕುಮಾರ್, ದ್ರಾಕ್ಷಾಯಿಣಿ ಬಸವರಾಜು, ಲೀಲಾ ನಾಗರಾಜು, ತಾಂತ್ರಿಕ ವ್ಯವಸ್ಥಾಪಕ ರಘು ಇನ್ನಿತರರು ಉಪಸ್ಥಿತರಿದ್ದರು.