ಜಂಬೂ ಸವಾರಿಗೆ 10 ಸಾವಿರ ಪೊಲೀಸರ ನಿಯೋಜನೆ

ಮೈಸೂರು, ಅ.6(ಆರ್‍ಕೆ)-ಮಂಗಳವಾರ ನಡೆ ಯಲಿರುವ ವಿಜಯದಶಮಿ ಮೆರವಣಿಗೆಗೆ 10,000 ಪೊಲೀಸರನ್ನು ನಿಯೋಜಿಸಿ ಭಾರೀ ಭದ್ರತೆ ಮಾಡ ಲಾಗಿದೆ. ಆ ಐತಿಹಾಸಿಕ ಮೆರವಣಿಗೆ ನೋಡಲು ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಅಹಿತ ಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಇನ್ನಿಲ್ಲದ ಭದ್ರತೆ ಒದಗಿಸಿ ಮೈಸೂರಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಾನೂನು-ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿ ದ್ದಾರೆ. 14 ಮಂದಿ ಎಸ್ಪಿಗಳು, 54 ಡಿವೈಎಸ್ಪಿ, 153 ಇನ್ಸ್‍ಪೆಕ್ಟರ್, 336 ಸಬ್‍ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿ ಗಳೂ ಸೇರಿದಂತೆ ವಿಜಯದಶಮಿ ಮೆರವಣಿಗೆಗೆ ಒಟ್ಟು ಸುಮಾರು 10,000 ಪೊಲೀಸರನ್ನು ಬಂದೋ ಬಸ್ತ್‍ಗಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ಇಮಿಡಿ ಯೇಟ್ ಬ್ಯಾಕ್ ಆಫ್ ಸಪೋರ್ಟ್ ಕಮಾಂಡೋ ಪಡೆ, 2 ತುಕಡಿ ಸಿಟಿ ಕಮಾಂಡೋ, 3 ರಾಜ್ಯ ವಿಪತ್ತು ನಿವಾರಣಾ ಪಡೆ, 30 ಮೌಂಟೆಡ್ ತುಕಡಿ, 30 ಆಂಟಿ ಸಬೊಟೇಜ್ ಚೆಕ್ ಟೀಂ, 30 ಶ್ವಾನ ದಳ, 3 ಬಾಂಬ್ ಪತ್ತೆ ಮತ್ತು ನಿಗ್ರಹ ತಂಡ, 34 ಕೆಎಸ್ ಆರ್‍ಪಿ ತುಕಡಿ, 20 ಸಿಎಆರ್ ಮತ್ತು ಡಿಎಆರ್ ತುಕಡಿ ಪೊಲೀಸರು ಅಂದು ಕರ್ತವ್ಯನಿರತರಾಗು ತ್ತಾರೆ. ಮೊಬೈಲ್ ಕಮಾಂಡ್ ಸೆಂಟರ್, ಪೊಲೀಸ್ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮರಾ, ರಾಜ ಮಾರ್ಗದ ಸಿಸಿ ಕ್ಯಾಮರಾಗಳ ಮೂಲಕ ದೃಶ್ಯಾವಳಿ ಮೇಲೆ ನಿಗಾ ವಹಿಸುವುದು ಸೇರಿದಂತೆ ಎಲ್ಲೆಡೆ ಎಚ್ಚರ ವಹಿಸಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸರು ನಿಗಾ ವಹಿಸಲು ಸಜ್ಜುಗೊಂಡಿದ್ದಾರೆ.