Tag: Mysore Dasara

ನಾಳೆ ವಿಜಯದಶಮಿ ಮೆರವಣಿಗೆ
ಮೈಸೂರು

ನಾಳೆ ವಿಜಯದಶಮಿ ಮೆರವಣಿಗೆ

October 7, 2019

ಮೈಸೂರು, ಅ. 6(ಆರ್‍ಕೆ)- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅಕ್ಟೋಬರ್ 8ರಂದು ಮಂಗಳವಾರ ನಡೆಯಲಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸಿ ಪ್ರಸಿದ್ಧ ಜಂಬೂ ಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲಿದ್ದು, ಈ ಐತಿಹಾಸಿಕ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಅಕ್ಟೋಬರ್ 8ರಂದು ಮಧ್ಯಾಹ್ನ 2.15 ರಿಂದ 2.58 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅರಮನೆ ಬಲ ರಾಮ ದ್ವಾರದ ಶ್ರೀ ಕೋಟೆ…

ಅರಮನೆಯಲ್ಲಿ ಇಂದು ಆಯುಧ ಪೂಜೆ
ಮೈಸೂರು

ಅರಮನೆಯಲ್ಲಿ ಇಂದು ಆಯುಧ ಪೂಜೆ

October 7, 2019

ಮೈಸೂರು, ಅ.6(ಎಂಟಿವೈ) – ಅರಮನೆಯಲ್ಲಿ ನಾಳೆ (ಅ.7) ಬೆಳಿಗ್ಗೆ 6.15ರಿಂದ 9ರವರೆಗೆ ಚಂಡಿ ಹೋಮ, ಆಯುಧ ಪೂಜೆ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ರಾಜವಂಶಸ್ಥ ಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟದ ಕತ್ತಿ ಸೇರಿದಂತೆ ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಕಳೆದ ಎಂಟು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯ ಜರುಗುತ್ತಿದೆ. ಅದರ ಅಂಗವಾಗಿ ನಾಳೆ ಬೆಳಿಗ್ಗೆ 6.15ಕ್ಕೆ ಅರಮನೆಯ ಒಳಾವರಣದಲ್ಲಿ ಚಂಡಿ ಹೋಮ ಆರಂಭವಾಗಲಿದೆ. 6.45ಕ್ಕೆ ಆನೆ ಸವಾರಿ ಬಾಗಿಲಿಗೆ…

ಜಂಬೂ ಸವಾರಿಗೆ 10 ಸಾವಿರ ಪೊಲೀಸರ ನಿಯೋಜನೆ
ಮೈಸೂರು

ಜಂಬೂ ಸವಾರಿಗೆ 10 ಸಾವಿರ ಪೊಲೀಸರ ನಿಯೋಜನೆ

October 7, 2019

ಮೈಸೂರು, ಅ.6(ಆರ್‍ಕೆ)-ಮಂಗಳವಾರ ನಡೆ ಯಲಿರುವ ವಿಜಯದಶಮಿ ಮೆರವಣಿಗೆಗೆ 10,000 ಪೊಲೀಸರನ್ನು ನಿಯೋಜಿಸಿ ಭಾರೀ ಭದ್ರತೆ ಮಾಡ ಲಾಗಿದೆ. ಆ ಐತಿಹಾಸಿಕ ಮೆರವಣಿಗೆ ನೋಡಲು ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಅಹಿತ ಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಇನ್ನಿಲ್ಲದ ಭದ್ರತೆ ಒದಗಿಸಿ ಮೈಸೂರಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಾನೂನು-ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿ ದ್ದಾರೆ. 14 ಮಂದಿ ಎಸ್ಪಿಗಳು, 54 ಡಿವೈಎಸ್ಪಿ, 153 ಇನ್ಸ್‍ಪೆಕ್ಟರ್, 336 ಸಬ್‍ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿ ಗಳೂ…

ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ
ಮೈಸೂರು

ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

October 4, 2019

ಮೈಸೂರು: ನಟಿ, ಗಾಯಕಿ ಮೊಹಾಲಿ ಠಾಕೂರ್ ಸುಮಧುರ ಗಾಯನದ ಮೂಲಕ ಯುವ ದಸರಾದಲ್ಲಿ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು. `ದಸರಾ ಹಬ್ಬದ ಶುಭಾಶಯಗಳು. ನಮಸ್ಕಾರ ಮೈಸೂರು’ ಎಂದು ಕನ್ನಡದಲ್ಲಿ ಹೇಳುವ ಮೂಲಕ ಪ್ರೇಕ್ಷಕರ ಮನಸ್ಸು ತಟ್ಟಿದ ಮೊಹಾಲಿ, ತಮಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ `ದಮ್ ಲಗಾ ಕೆ ಹೈಶಾ’ ಚಿತ್ರದ `ಮೋಹ್ ಮೋಹ್‍ಕೆ ಧಾಗೆ…’ `ರೇಸ್ ಹೈ ಸಾಸೋಂ ಕಿ…’, `ಸವಾರ್ ಲೂನ್…’, `ಖ್ವಾಬ್ ದೇಖೆ ಝೂಟೆ ಮೋಟೆ…’, `ದಮಾ ಧಂ ಮಸ್ತ್ ಖಲಂದರ್…’, `ತುಜುಕೋ ಜೋ ಪಾಯಾ…’,…

ದಸರಾ ಗೋಲ್ಡ್ ಕಾರ್ಡ್‍ಗೆ ಭಾರೀ ಬೇಡಿಕೆ…
ಮೈಸೂರು

ದಸರಾ ಗೋಲ್ಡ್ ಕಾರ್ಡ್‍ಗೆ ಭಾರೀ ಬೇಡಿಕೆ…

October 4, 2019

ಮೈಸೂರು: ದಸರಾ ಗೋಲ್ಡ್‍ಕಾರ್ಡ್, ಟಿಕೆಟ್ ಖರೀದಿಸಲು ಮೈಸೂರಿನ ಡಿಸಿ ಕಚೇರಿ ಬಳಿ ಸಾರ್ವ ಜನಿಕರು ಮುಗಿಬಿದ್ದ ಕಾರಣ ಗುರುವಾರ ಭಾರೀ ನೂಕು-ನುಗ್ಗಲು ಉಂಟಾಯಿತು. ಈ ವೇಳೆ ಕೊಠಡಿಗೆ ನುಗ್ಗಲು ಯತ್ನಿ ಸಿದ ಜನರನ್ನು ನಿಯಂತ್ರಿಸಿ, ಸಾಲುಗಟ್ಟಿ ನಿಲ್ಲಿಸಲು ಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಹರಸಾಹಸಪಡಬೇಕಾ ಯಿತು. ಆದರೂ ಕಡೆಗೆ ಟಿಕೆಟ್ ಸಿಕ್ಕಿದ್ದು ಕೇವಲ 125 ಮಂದಿಗೆ ಮಾತ್ರ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30ರವರೆಗೆ ಕಾದು ನಿಂತಿದ್ದ ಜನರು ಇತ್ತ ಟಿಕೆಟ್ ಸಿಗದಿ ದ್ದಕ್ಕೆ ಆಕ್ರೋಶಗೊಂಡು…

ಈ ಬಾರಿ10 ದಿನ ಮುಂಚಿತವಾಗಿ ಅ.8ಕ್ಕೆ ಜಂಬೂ ಸವಾರಿ
ಮೈಸೂರು

ಈ ಬಾರಿ10 ದಿನ ಮುಂಚಿತವಾಗಿ ಅ.8ಕ್ಕೆ ಜಂಬೂ ಸವಾರಿ

June 9, 2019

ಮೈಸೂರು: 2019ರ ಸಾಲಿನಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 10 ದಿನಗಳು ಮುಂಚಿತವಾಗಿ ಆರಂಭವಾಗಲಿದೆ. ಈ ಬಾರಿ ಅಕ್ಟೋ ಬರ್ 8 ರಂದು ಮಂಗಳವಾರ ವಿಜಯ ದಶಮಿ ಮೆರವಣಿಗೆ ನಡೆಯಲಿದೆ. ಸಾಮಾನ್ಯ ವಾಗಿ ಅಕ್ಟೋಬರ್ 3 ಅಥವಾ ನಾಲ್ಕನೇ ವಾರ ದಸರಾ ಉತ್ಸವ ನಡೆಯುತ್ತಿತ್ತು. ಆದರೆ ಈ ವರ್ಷ 10 ದಿನ ಮುಂಚಿತವಾಗಿ ನಾಡಹಬ್ಬ ಆರಂಭವಾಗಲಿದೆ. ಸೆಪ್ಟೆಂಬರ್ 28 ರಂದು ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ 2019ರ ದಸರಾ ಮಹೋ ತ್ಸವಕ್ಕೆ ಚಾಲನೆ…

ಮೈಸೂರು ದಸರಾಕ್ಕೆ 120 ಕೋಟಿ ವೆಚ್ಚ!
ಮೈಸೂರು

ಮೈಸೂರು ದಸರಾಕ್ಕೆ 120 ಕೋಟಿ ವೆಚ್ಚ!

December 14, 2018

ಬೆಳಗಾವಿ(ಸುವರ್ಣಸೌಧ): ವಿಶ್ವ ವಿಖ್ಯಾತ ಮೈಸೂರು ದಸರಾಗೆ ರಾಜ್ಯ ಸರ್ಕಾರ 120 ಕೋಟಿ ರೂ. ವೆಚ್ಚ ಮಾಡಿದೆಯಂತೆ. ವಿಧಾನಸಭೆಗೆ ಆಯ್ಕೆಗೊಂಡಿರುವ ಶಾಸಕರು ಕಾರು ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ 6,980 ಕೋಟಿ ರೂ.ಗಳ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಮಂಡಿಸಿರುವ ಪೂರಕ ಅಂದಾಜಿನಲ್ಲಿ ದಸರಾ ಮಹೋತ್ಸವದ ವೆಚ್ಚವಲ್ಲದೆ, ಮೈಸೂರು ನಗರದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಇಷ್ಟು ಹಣ ವೆಚ್ಚ ಮಾಡಲಾಗಿದೆ….

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ

October 23, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು. ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ…

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
ಮೈಸೂರು, ಮೈಸೂರು ದಸರಾ

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು

October 21, 2018

ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್‍ನಲ್ಲಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ…

ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ

October 21, 2018

ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ(ವಿಜಯದಶಮಿ)ಯನ್ನು ಅ.22ರಂದು ಅರಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ರಾಜಮನೆತನದವರು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಪೂಜಾ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ…

1 2
Translate »