ಮೈಸೂರು ದಸರಾಕ್ಕೆ 120 ಕೋಟಿ ವೆಚ್ಚ!
ಮೈಸೂರು

ಮೈಸೂರು ದಸರಾಕ್ಕೆ 120 ಕೋಟಿ ವೆಚ್ಚ!

December 14, 2018

ಬೆಳಗಾವಿ(ಸುವರ್ಣಸೌಧ): ವಿಶ್ವ ವಿಖ್ಯಾತ ಮೈಸೂರು ದಸರಾಗೆ ರಾಜ್ಯ ಸರ್ಕಾರ 120 ಕೋಟಿ ರೂ. ವೆಚ್ಚ ಮಾಡಿದೆಯಂತೆ. ವಿಧಾನಸಭೆಗೆ ಆಯ್ಕೆಗೊಂಡಿರುವ ಶಾಸಕರು ಕಾರು ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ 6,980 ಕೋಟಿ ರೂ.ಗಳ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಮಂಡಿಸಿರುವ ಪೂರಕ ಅಂದಾಜಿನಲ್ಲಿ ದಸರಾ ಮಹೋತ್ಸವದ ವೆಚ್ಚವಲ್ಲದೆ, ಮೈಸೂರು ನಗರದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಇಷ್ಟು ಹಣ ವೆಚ್ಚ ಮಾಡಲಾಗಿದೆ.

ಈ ಬಾರಿ ಹೊಸದಾಗಿ ಆಯ್ಕೆಯಾಗಿ ರುವ ಶಾಸಕರಿಗೆ ಕಾರು ಖರೀದಿಸಲು ಸಾಲ ಮತ್ತು ಕಡಿಮೆ ದರದಲ್ಲಿ ಬಾಡಿಗೆ ಕಾರು ಸೌಲಭ್ಯಕ್ಕಾಗಿ 31ಕೋಟಿ ರೂ. ಸೇರಿದಂತೆ, ಒಟ್ಟು ವೆಚ್ಚ 37.5ಕೋಟಿ ಅಂದಾಜಿಸಲಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಐದು ಕ್ಷೇತ್ರಗಳ ಉಪ ಚುನಾವಣೆ ವೆಚ್ಚ 39 ಕೋಟಿ ರೂ.ನಂತೆ, ಇನ್ನು ಬೆಳ ಗಾವಿಯ ಅಧಿವೇಶನಕ್ಕಾಗಿ 35 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸ ಲಾಗಿದೆ, ಸ್ಮಾರ್ಟ್ ಪೆÇಲೀಸಿಂಗ್‍ಗಾಗಿ 329 ಕೋಟಿ ಒದಗಿಸಲಾಗಿದೆ.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಕುಡಿಯುವ ನೀರಿನ ಯೋಜನೆಯ ಟಾಸ್ಕ್ ಫೋರ್ಸ್ ಕಾಮಗಾರಿಗಾಗಿ 500 ಕೋಟಿ, ಗ್ರಾಮೀಣ ಕುಡಿಯುವ ಯೋಜನೆಗೆ ಒಂದು ಸಾವಿರ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ದುರಸ್ತಿಗೆ 3500 ಕೋಟಿ ಅನುದಾನ ಒದಗಿಸುವುದಾಗಿ ಹೇಳಿದೆ.

84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 60 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸಹಕಾರಿ ಸಂಘಗಳು, ಬ್ಯಾಂಕುಗಳಿಗೆ 8ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡ ಲಾಗಿತ್ತು. ಅದನ್ನು ಅನುದಾನ ಎಂದು ಪರಿಗಣಿಸಲಾಗಿದೆ. ಇದಕ್ಕೆ 18 ಸಾವಿರ ಕೋಟಿ ರೂ.ಗಳನ್ನು ಸೇರಿಸಿ ಒಟ್ಟು 26 ಸಾವಿರ ಕೋಟಿ ರೂ.ಗಳನ್ನು ಸಾಲ ಮನ್ನಾಕ್ಕಾಗಿ ನೀಡುವುದಾಗಿ ತಿಳಿಸಲಾಗಿದೆ. ಒಟ್ಟು ಸಾಲ ಮನ್ನಾಕ್ಕಾಗಿ 40 ಸಾವಿರ ಕೋಟಿ ಅಗತ್ಯವಿದೆ ಎಂದು ಪೂರಕ ಅಂದಾಜಿ ನಲ್ಲಿ ವಿವರಿಸಲಾಗಿದೆ.

ONE COMMENT ON THIS POST To “ಮೈಸೂರು ದಸರಾಕ್ಕೆ 120 ಕೋಟಿ ವೆಚ್ಚ!”

  1. Rajesha B says:

    ಮೈಸೂರಿನ ಟಿ.ಎನ್.ಪುರ ಜಂಕ್ಷನ್ ನಿಂದ ನಂಜನಗೂಡು ಜಂಕ್ಷನ್ ವರೆಗಿನ ಹೊರ ವರ್ತುಲ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿದ್ದು, ಇವುಗಳನ್ನು 20 ರಿಂದ 25 ವಿದ್ಯುತ್ ಕಂಬಗಳಿಗೆ ಒಂದರಂತೆ ನಿಯಂತ್ರಣ (Controlling, Switching) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಲಲಿತಾದ್ರಿಪುರ ಹಾಗೂ ಪೊಲೀಸ್ ಬಡಾವಣೆ 3ನೇ ಹಂತದ ಪಕ್ಕದಲ್ಲಿ ಹಾದು ಹೋಗಿರುವ ಸುಮಾರು 50 ವಿದ್ಯುತ್ ಕಂಬಗಳ ಸರಪಳಿಯಲ್ಲಿ ವಿದ್ಯುತ್ ದೀಪಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ವಿದ್ಯುತ್ ದೀಪಗಳನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ, ಇವುಗಳ ನಿಷ್ಕ್ರಿಯತೆ ಬಗ್ಗೆ ಯಾರನ್ನು ಸಂಪರ್ಕಿಸಿ ದೂರು ಸಲ್ಲಿಸಬೇಕು ಎಂಬುದು ತಿಳಿಯುತ್ತಿಲ್ಲ. ದಯಮಾಡಿ ಸಂಬಂಧಿಸಿದವರು (MUDA, NHAI ಅಥವಾ ಜಿ.ಪಂ., ಇತರೆ) ಈ ವಿದ್ಯುತ್ ದೀಪಗಳು ಕಾರ್ಯ ನಿರ್ವಹಿಸುವಂತೆ ಅಗತ್ಯ ಕ್ರಮಕೈಗೊಳ್ಳಲು ಮನವಿ.

Translate »