ಮೈಸೂರು: ದಸರಾ ಗೋಲ್ಡ್‍ಕಾರ್ಡ್, ಟಿಕೆಟ್ ಖರೀದಿಸಲು ಮೈಸೂರಿನ ಡಿಸಿ ಕಚೇರಿ ಬಳಿ ಸಾರ್ವ ಜನಿಕರು ಮುಗಿಬಿದ್ದ ಕಾರಣ ಗುರುವಾರ ಭಾರೀ ನೂಕು-ನುಗ್ಗಲು ಉಂಟಾಯಿತು.
ಈ ವೇಳೆ ಕೊಠಡಿಗೆ ನುಗ್ಗಲು ಯತ್ನಿ ಸಿದ ಜನರನ್ನು ನಿಯಂತ್ರಿಸಿ, ಸಾಲುಗಟ್ಟಿ ನಿಲ್ಲಿಸಲು ಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಹರಸಾಹಸಪಡಬೇಕಾ ಯಿತು. ಆದರೂ ಕಡೆಗೆ ಟಿಕೆಟ್ ಸಿಕ್ಕಿದ್ದು ಕೇವಲ 125 ಮಂದಿಗೆ ಮಾತ್ರ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30ರವರೆಗೆ ಕಾದು ನಿಂತಿದ್ದ ಜನರು ಇತ್ತ ಟಿಕೆಟ್ ಸಿಗದಿ ದ್ದಕ್ಕೆ ಆಕ್ರೋಶಗೊಂಡು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ಹಿಂದಿರುಗಿದರು.
ಅಧಿಕಾರಿಗಳಿಂದ ಗೊಂದಲ: ಬೆಳಿಗ್ಗೆ 11 ಗಂಟೆಗೆ ಡಿಸಿ ಕಚೇರಿಯ ನೆಲಮಹ ಡಿಯ ಕೊಠಡಿ ಸಂಖ್ಯೆ 21ರಲ್ಲಿ ದಸರಾ ಗೋಲ್ಡ್ ಕಾರ್ಡ್ ಮಾರಾಟ ಮಾಡಲಾ ಗುವುದು ಎಂದು ಮಾಹಿತಿ ನೀಡಿದ್ದ ಅಧಿ ಕಾರಿಗಳು ಸ್ಥಳದಲ್ಲಿ ಯಾವ ಮಾಹಿತಿಯೂ ಇಲ್ಲದೆ, ಕೊಠಡಿ ಬಾಗಿಲನ್ನು ತೆರೆಯದೆ ಗೊಂದಲ ಸೃಷ್ಟಿ ಮಾಡಿದರು. ನೂರಾರು ಮಂದಿ ಜಮಾಯಿಸಿದರೂ, ಮಧ್ಯಾಹ್ನ 12 ಗಂಟೆಯಾದರೂ ಯಾರೂ ಬರಲೇ ಇಲ್ಲ. ಜನರು ಗಲಾಟೆ ಮಾಡಲಾರಂಭಿಸಿದಾಗ ಗೊಂದಲ ಉಂಟಾ ಯಿತು. ಪರಿಸ್ಥಿತಿ ನಿಬಾಯಿಸಿದ ಪೊಲೀಸರು, ಜಿಲ್ಲಾಡಳಿತದೊಂದಿಗೆ ಮಾತನಾಡಿದಾಗ ಮಧ್ಯಾಹ್ನ 2 ಗಂಟೆಗೆ ಕೊಡಲಾಗುವುದು ಎಂಬ ಮಾಹಿತಿಯನ್ನು ನೆರೆದಿದ್ದವರಿಗೆ ತಿಳಿಸಲಾಯಿತು. ಆಕ್ರೋಶ ವ್ಯಕ್ತಪಡಿಸುತ್ತಲ್ಲೇ ಸ್ಥಳದಿಂದ ಕದಲದೆ ಅಲ್ಲಿಯೇ ಕಾದು ಕುಳಿತರು. ಕಡೆಗೆ ಮಧ್ಯಾಹ್ನ 1.40 ಗಂಟೆಗೆ ಸಿಬ್ಬಂದಿಯೊಬ್ಬರು ಬಂದು ಅ.3ರಂದು ಮಧ್ಯಾಹ್ನ 2 ಗಂಟೆಗೆ ಟಿಕೆಟ್‍ಗಳನ್ನು ಮಾರಾಟ ಮಾಡಲಾಗುವುದು. ಈಗಾಗಲೇ ಆನ್‍ಲೈನ್‍ನಲ್ಲಿ ಬುಕ್ ಮಾಡಿರುವವರು ಅ.4ರಂದು ಬೆಳಿಗ್ಗೆ 10.30ಕ್ಕೆ ಬಂದು ಗೋಲ್ಡ್ ಕಾರ್ಡ್ ಪಡೆದುಕೊಳ್ಳುವುದು ಎಂಬ ಪ್ರಕಟಣೆ ಫಲಕ ಹಾಕಿದರು.
ಆಕ್ರೋಶ: ಇದರಿಂದ ಸ್ಥಳದಲ್ಲಿದ್ದವರು ಆಕ್ರೋಶಗೊಂಡು ಬೆಳಿಗ್ಗೆಯಿಂದ ಕಾದಿದ್ದೇವೆ. ಡಿಸಿಯವರೇ ಸ್ಥಳಕ್ಕೆ ಬಂದು ಇದರ ಬಗ್ಗೆ ಸಮಜಾಯಿಷಿ ನೀಡಬೇಕೆಂದು ಪಟ್ಟುಹಿಡಿದು ಕೂಗಾಡಲಾರಂಭಿಸಿದರಲ್ಲದೆ. ಕೊಠಡಿಗೆ ನುಗ್ಗಲೆತ್ನಿಸಿದಾಗ, ಸ್ಥಳದಲ್ಲಿದ್ದ ಪೊಲೀಸರು ತಡೆದರೂ ಗಲಾಟೆ ಹೆಚ್ಚಾಯಿತು. ಆಗ ಪರಿಸ್ಥಿತಿ ಕೈ ಮೀರುವ ಸ್ಥಿತಿ ಅರಿತ ಡಿಸಿ ಕಚೇರಿ ಸಿಬ್ಬಂದಿ ಬಂದು ಮಧ್ಯಾಹ್ನ 2.45 ಗಂಟೆಗೆ ಟಿಕೆಟ್ ಕೊಡಲು ಆರಂಭಿಸಿದರು.
ಅರ್ಧ ಗಂಟೆಗೇ ಖಾಲಿ: ಅರಮನೆಗೆ 1,000, 500 ಹಾಗೂ 250 ರೂ. ಹಾಗೂ ಪಂಜಿನ ಕವಾಯತು ಪ್ರದರ್ಶನದ 250 ರೂ. ಬೆಲೆಯ ಒಟ್ಟು ಕೇವಲ 250 ಟಿಕೆಟ್‍ಗಳನ್ನು ಒಬ್ಬರಿಗೆ 2ರಂತೆ ಕೇವಲ 125 ಮಂದಿಗೆ ನೀಡಿ, ಕೇವಲ ಅರ್ಧ ಗಂಟೆಯಲ್ಲೇ ಟಿಕೆಟ್‍ಗಳು ಮುಗಿದವು ಎಂದು ಕೊಠಡಿ ಬಾಗಿಲು ಬಂದ್ ಮಾಡಿದರು.
ಹಿಡಿಶಾಪ: ಬೆಳಿಗ್ಗೆಯಿಂದ ಕಾದಿದ್ದರೂ ಟಿಕೆಟ್ ಸಿಗದಿದ್ದರಿಂದ ನಿರಾಶರಾದ ನೂರಾರು ಮಂದಿ ಸಿಟ್ಟಿಗೆದ್ದು, ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ಹಿಂದಿರುಗಿದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದರಾದರೂ, ಪೊಲೀಸರು ಜನರನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದರು.
ಮಾಹಿತಿ ಇಲ್ಲ: ಗೋಲ್ಡ್ ಕಾರ್ಡ್‍ಗಳು ಮತ್ತು ಟಿಕೆಟ್‍ಗಳನ್ನು ಎಲ್ಲಿ, ಯಾವಾಗ ಮಾರಾಟ ಮಾಡಲಾಗುತ್ತದೆ ಎಷ್ಟು ಮುದ್ರಣವಾಗಿವೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೆಬ್‍ಸೈಟ್‍ನಲ್ಲೂ ಮಾಹಿತಿ ಅಲಭ್ಯ: ಆನ್‍ಲೈನ್‍ನಲ್ಲಿ ಗೋಲ್ಡ್‍ಕಾರ್ಡ್ ಟಿಕೆಟ್ ಬುಕ್ ಮಾಡಲು www.mysoredasara.gov.in ಮತ್ತು www.bookmyshow.com ಅನ್ನು ಸಂಪರ್ಕಿಸಿ ಎಂದು ಈ ಮೊದಲು ಜಿಲ್ಲಾಡಳಿತ ಪ್ರಕಟಿಸಿತ್ತಾದರೂ, ಆ ವೆಬ್‍ಸೈಟ್‍ಗಳನ್ನು ಕ್ಲಿಕ್ಕಿಸಿದಾಗ Sorry, you are trying to book tickets for a show which is past the booking time. Try another show ಎಂಬ ಮಾಹಿತಿ ಸಿಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದರು.