ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ
ಮೈಸೂರು

ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ

October 4, 2019

ಮೈಸೂರು: ವಿದ್ಯುತ್ ಲೈನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಇಂದು ಬೆಳಿಗ್ಗೆ ಮೈಸೂರು-ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ಒಂದು ಗಂಟೆ ಕಾಲ ಸ್ಥಗಿತ ಗೊಂಡು ಪ್ರಯಾಣಿಕರು ಪರಿತಪಿಸಬೇಕಾಗಿ ಬಂತು.

ಪರಿಣಾಮ ಮೈಲಾಡುತುರೈ, ಟುಟಿಕೊರಿನ್, ಹಂಪಿ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಡವಾಗಿ ಸಂಚರಿಸಿದವು. ಮೈಸೂರು ರೈಲು ನಿಲ್ದಾ ಣದ ಎಲೆಕ್ಟ್ರಿಕಲ್ ಇಂಜಿನಿಯರ್‍ಗಳು, ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ತಾಂತ್ರಿಕ ದೋಷ ಸರಿಪಡಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿದ ಬಳಿಕ ರೈಲುಗಳು ಚಲಿಸತೊಡಗಿದವು.

ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ಪಾಂಡವ ಪುರ ಮತ್ತು ಮೈಸೂರು ನಡುವೆ ರೈಲು ಹಳಿಯ ಓವರ್‍ಹೆಡ್ ಟ್ರಾಕ್ಷನ್ ಕೇಬಲ್(ಯಲಿಯೂರು ಪವರ್ ಸ್ಟೆಷನ್‍ನ)ನಲ್ಲಿರುವ ಓವರ್‍ಹೆಡ್ ಇಕ್ವಿಪ್ ಮೆಂಟ್(ಔಊಇ)ನಲ್ಲಿ ಟ್ರಿಪ್ ಆದ ಕಾರಣ ಈ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಹಾಗಾಗಿ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ಬೆಳಗಿನ ಎಲೆಕ್ಟ್ರಿಕ್ ಟ್ರೇನುಗಳ ಸಂಚಾರ ಸ್ಥಗಿತವಾಯಿತು. ಬೆಂಗಳೂರಿನಿಂದ ಬರಬೇಕಿದ್ದ ಮೈಲಾಡುತುರೈ, ಟುಟಿಕೊರಿನ್, ಹಂಪಿ ಎಕ್ಸ್‍ಪ್ರೆಸ್ ರೈಲುಗಳು ನಿಗದಿತ ವೇಳೆಗಿಂತ ಸುಮಾರು ಒಂದು ತಾಸು ತಡವಾಗಿ ಮೈಸೂರು ತಲುಪಿದವು.

ಅದೇ ರೀತಿ ಮೈಸೂರಿನಿಂದ ಬೆಂಗಳೂರಿಗೆ ತೆರಳ ಬೇಕಿದ್ದ ಮಾಲ್ಗುಡಿ ಎಕ್ಸ್‍ಪ್ರೆಸ್ ಸಹ ತಡವಾಗಿ ಹೊರಟಿತು. ಮೈಸೂರು ರೈಲು ನಿಲ್ದಾಣ, ನಾಗನ ಹಳ್ಳಿ ರೈಲು ನಿಲ್ದಾಣ, ಮಂಡ್ಯ, ದೊಡ್ಡ ಬ್ಯಾಡರ ಹಳ್ಳಿ ಬಳಿ ಮಾರ್ಗಮಧ್ಯೆ ನಿಂತ ವಿವಿಧ ರೈಲು ಗಳಲ್ಲಿದ್ದ ಪ್ರಯಾಣಿಕರು ಪರದಾಡಬೇಕಾಯಿತು.

ಕಚೇರಿ, ಶಾಲಾ-ಕಾಲೇಜು, ಫ್ಯಾಕ್ಟರಿ, ಉದ್ದಿಮೆ, ನ್ಯಾಯಾಲಯಗಳಿಗೆ ಹೋಗುವವರಿಗೆ ರೈಲು ಸಂಚಾರ ವ್ಯತ್ಯಯದಿಂದ ತೀವ್ರ ತೊಂದರೆಯಾ ಯಿತಲ್ಲದೆ, ಸಮಯ ನಿಗದಿಪಡಿಸಿಕೊಂಡು ದಸರಾ ಕಾರ್ಯಕ್ರಮಗಳನ್ನು ನೋಡಲೆಂದು ಪ್ಲಾನ್ ಮಾಡಿಕೊಂಡು ಮೈಸೂರಿಗೆ ಬರುತ್ತಿದ್ದ ಪ್ರವಾಸಿಗರಿಗೂ ಅದರ ಬಿಸಿ ತಟ್ಟಿತು.

ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು 8.30 ಗಂಟೆಗೆ ಮೈಸೂರು ತಲುಪಬೇಕಿದ್ದ ಮೈಸೂರು-ಮೈಲಾಡುತುರೈ, ಬೆಂಗಳೂರಿನಿಂದ ಬೆಳಿಗ್ಗೆ 7 ಗಂಟೆಗೆ ಹೊರಟು 10-10ಕ್ಕೆ ಮೈಸೂರು ತಲುಪಬೇಕಿದ್ದ ಟುಟಿಕೊರಿನ್ ಎಕ್ಸ್‍ಪ್ರೆಸ್, ಬೆಳಿಗ್ಗೆ 6-20ಕ್ಕೆ ಹೊರಟು 9-10ಕ್ಕೆ ಮೈಸೂರು ತಲುಪ ಬೇಕಿದ್ದ ಮೈಸೂರು-ಹುಬ್ಬಳ್ಳಿ-ಹಂಪಿ ಎಕ್ಸ್‍ಪ್ರೆಸ್ ಒಂದು ಗಂಟೆ ತಡವಾಗಿ ತಲುಪಿದವು. ಎಲಿಯೂರು ಪವರ್ ಸ್ಟೇಷನ್‍ನಲ್ಲಿ ವಿದ್ಯುತ್ ದೋಷ ಸರಿಪಡಿಸಿದ ರೈಲ್ವೆ ಇಂಜಿನಿಯರ್‍ಗಳು, ಅಗತ್ಯ ಎಲ್ಲಾ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡು ಸುರಕ್ಷತೆ ಬಗ್ಗೆ ಖಾತರಿಪಡಿಸಿದ ನಂತರ ಬೆಳಿಗ್ಗೆ 10 ಗಂಟೆಗೆ ರೈಲು ಗಳ ಸಂಚಾರ ಪುನಾರಂಭವಾಯಿತು.

Translate »