ಮೈಸೂರಲ್ಲಿ ರೈಲ್ವೆ ಬೋಗಿಯಲ್ಲಿ ಶಾಲಾ ಕೊಠಡಿ
ಮೈಸೂರು

ಮೈಸೂರಲ್ಲಿ ರೈಲ್ವೆ ಬೋಗಿಯಲ್ಲಿ ಶಾಲಾ ಕೊಠಡಿ

January 13, 2020

ಮೈಸೂರು, ಜ.12(ಎಸ್‍ಬಿಡಿ)- ಮೈಸೂರು ರೈಲು ನಿಲ್ದಾಣದಲ್ಲಿ ವಿವಿಧ ಕಾಮಗಾರಿ, ಕೆಆರ್‍ಎಸ್ ರಸ್ತೆಯಲ್ಲಿರುವ ಇಲಾಖೆ ಜಾಗದಲ್ಲಿ ಸುಂದರ ಉದ್ಯಾನ ನಿರ್ಮಾಣ, ರೈಲ್ವೆ ಮ್ಯೂಸಿಯಂ ನವೀ ಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಪಟ್ಟಿಗೆ ರೈಲು ಬೋಗಿ ಶಾಲೆ ಹಾಗೂ ಕ್ರೀಡಾಂಗಣ ನವೀಕರಣ ಕಾರ್ಯ ಸೇರ್ಪಡೆಯಾಗಿದೆ.

ರೈಲು ಬೋಗಿ ಶಾಲೆ: ಮೈಸೂರಿನ ಅಶೋಕಪುರಂನಲ್ಲಿರುವ ಕೇಂದ್ರೀಯ ರೈಲ್ವೆ ಕಾರ್ಯಾಗಾರದ ಬಳಿಯಿರುವ ಶತ ಮಾನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ಹಳೇ ರೈಲ್ವೆ ಕೋಚ್‍ಗಳನ್ನೇ ಹೊಸ ಕೊಠಡಿಗಳನ್ನಾಗಿ ರೂಪಿಸಿ, ಕೊಡುಗೆ ನೀಡಲಾಗಿದೆ. ಬಳಕೆ ಮಾಡದ 2 ಹಳೆಯ ಬೋಗಿಗಳನ್ನು ಕ್ರೇನ್ ಮೂಲಕ ಶಾಲೆ ಬಳಿಗೆ ಸ್ಥಳಾಂತರಿಸಿದ ರೈಲ್ವೆ ಕಾರ್ಯಾಗಾರ ತಂಡ, ಬೋಗಿ ತುಕ್ಕು ಹಿಡಿಯದಂತೆ ಗುಣಮಟ್ಟದ ಬಣ್ಣ ಬಳಿದು, ಸಂರಕ್ಷಿಸಿದೆ. ನಂತರ ಮಕ್ಕಳ ಕಲಿಕೆಯ ಉದ್ದೇಶಕ್ಕಾಗಿ ಕೋಚ್‍ಗಳ ಮೇಲೆ ಅ, ಆ, ಇ, ಈ ಕನ್ನಡ ವರ್ಣಮಾಲೆ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ಗಳನ್ನು ಬರೆಯಲಾಗಿದೆ. ಒಂದು ಕೋಚ್ ಆವರಣದಲ್ಲಿ 2 ಕೊಠಡಿಗಳ ನಿರ್ಮಿಸಿ, ಕಲಿಕಾ ಸಾಮಗ್ರಿಗಳ ಸಹಿತ 4 ಹಾಗೂ 5ನೇ ತರಗತಿ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡ ಲಾಗಿದೆ. ಸಭೆ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗೆ ಅನುವಾಗುವಂತೆ ಮತ್ತೊಂದು ಕೋಚ್ ಅನ್ನು ಸಜ್ಜುಗೊಳಿಸಲಾಗಿದೆ. ಫ್ಯಾನ್, ವಿದ್ಯುತ್ ದೀಪದ ವ್ಯವಸ್ಥೆ ಮಾತ್ರ ವಲ್ಲದೆ ಮಕ್ಕಳ ಬಳಕೆಗಾಗಿ ಎರಡು ಜೈವಿಕ ಶೌಚಾಲಯ ನಿರ್ಮಿಸಿರುವುದು ವಿಶೇಷ ವಾಗಿದೆ. ಹಳೆಯ ವಸ್ತುಗಳನ್ನು ಬಳಸಿಕೊಂಡು, ಶಾಲೆಗೆ ಅತ್ಯಾಕರ್ಷಕ ಕೊಠಡಿ ನಿರ್ಮಿಸಿ ಕೊಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ರೈಲ್ವೆ ಕಾಲೋನಿಯಲ್ಲಿರುವ ಪ್ರಾಥಮಿಕ ಶಾಲೆ ಬಳಿ ಮಕ್ಕಳ `ನಲಿಕಲಿ’ ಉದ್ದೇಶ ಕ್ಕಾಗಿ ಕಲ್ಪಿಸಿರುವ ಈ ವಿನೂತನ ವ್ಯವಸ್ಥೆ ಯನ್ನು ನೈರುತ್ಯ ರೈಲ್ವೆ ಮಹಿಳಾ ಸಂಘ ಟನೆ ಅಧ್ಯಕ್ಷೆ ಸುಜಾತ ಸಿಂಗ್ ಶನಿವಾರ ಉದ್ಘಾಟಿಸಿದರು. ನೈರುತ್ಯ ರೈಲ್ವೆ ವಲ ಯದ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್‍ಸಿಂಗ್, ರೈಲ್ವೆ ಕಾರ್ಯಾಗಾರ ದಲ್ಲಿ ನಡೆದಿರುವ ವಿವಿಧ ಕಾಮಗಾರಿ ಗಳನ್ನು ಪರಿಶೀಲಿಸಿ, ಎಲೆಕ್ಟ್ರಿಕಲ್ ಸಬ್‍ಸ್ಟೇ ಷನ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿದರು. ಚೀಫ್ ವರ್ಕ್‍ಶಾಪ್ ಮ್ಯಾನೇಜರ್ ಪಿ.ಶ್ರೀನಿವಾಸು, ಶಾಲೆಯ ಮುಖ್ಯಶಿಕ್ಷಕಿ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ನವೀಕೃತ ಕ್ರೀಡಾಂಗಣ: ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ ರೈಲ್ವೆ ಕ್ರೀಡಾಂ ಗಣವನ್ನು ನವೀಕೃತಗೊಳಿಸಿದ್ದು, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್‍ಸಿಂಗ್ ಉದ್ಘಾಟಿಸಿ, ಮೈಸೂರು ವಿಭಾಗದ ಕಾರ್ಯವನ್ನು ಶ್ಲಾಘಿಸಿದರು. ಉದ್ಯಾನವನ, ಕಾರಂಜಿಗಳ ಅಭಿವೃದ್ಧಿ ಇನ್ನಿತರ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಮುಂದುವರೆಸ ಬೇಕೆಂದು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಮೈದಾನದ ಪಕ್ಕದಲ್ಲಿ ಹೊಸದಾಗಿ ನಿಯೋಜಿಸಲಾದ `ಡಿವಿಷನ್ ಸ್ಟೋರ್ಸ್ ಡಿಪೆÇೀ’ವನ್ನು ಅವರು ಉದ್ಘಾಟಿಸಿದರು.

ಉದ್ಘಾಟನೆ ಅಂಗವಾಗಿ ಜಿಎಂ ಇಲೆ ವೆನ್ ಹಾಗೂ ಡಿಆರ್‍ಎಂ ಇಲೆವೆನ್ ತಂಡಗಳ ನಡುವೆ ಸ್ನೇಹಪರ ಟಿ-10 ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೆಯ ಮಹಿಳಾ ಕಲ್ಯಾಣ ಸಂಸ್ಥೆಯ ಸದಸ್ಯರು, ನೈರುತ್ಯ ರೈಲ್ವೆ ಮಹಿಳಾ ಸಂಘ ಟನೆ ಅಧ್ಯಕ್ಷೆ ಸುಜಾತ ಸಿಂಗ್, ವಿಭಾ ಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಗರ್ಗ್, ಹಿರಿಯ ಅಧಿಕಾರಿಗಳು, ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಗರ್ಗ್ ನೇತೃತ್ವದಲ್ಲಿ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ, ಕೆಆರ್‍ಎಸ್ ರಸ್ತೆಯಲ್ಲಿರುವ ರೈಲ್ವೆ ಸ್ವತ್ತು ಗಳನ್ನು ಸುಂದರಗೊಳಿಸುವ ಕಾರ್ಯದಲ್ಲಿ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಹೊಸಸ್ಪರ್ಶ ನೀಡಲಾಗಿದೆ. ಪ್ರಾಯೋಜಕರ ಸಹಕಾರದೊಂದಿಗೆ ಮೈಸೂರು ವಿಭಾಗದ ಕ್ರೀಡಾ ಸಮಿತಿ ಪರಿಕಲ್ಪನೆಯಲ್ಲಿ ಫ್ಲಡ್ ಲೈಟ್, ಕಾರ್ಯಾ ಗಾರ ನೌಕರರಿಗಾಗಿ ಹೊಸ ಬ್ಯಾಡ್ಮಿಂಟನ್ ಕೋರ್ಟ್, `ಖೇಲೋ ಮೈಸೂರು’ ವಾಲ್, ವಿಐಪಿ ಪೆವಿಲಿಯನ್ ಸೇರಿದಂತೆ ಅನೇಕ ಬದಲಾವಣೆಗಳಿಂದ ಕ್ರೀಡಾಂಗಣ ಕಂಗೊಳಿಸುತ್ತಿದೆ.

Translate »