ಜ್ಞಾನದ ಮೂಲವಾದ ಸಂಸ್ಕೃತ ವೈಜ್ಞಾನಿಕ ಭಾಷೆಯಾಗಿದೆ
ಮೈಸೂರು

ಜ್ಞಾನದ ಮೂಲವಾದ ಸಂಸ್ಕೃತ ವೈಜ್ಞಾನಿಕ ಭಾಷೆಯಾಗಿದೆ

January 13, 2020

ಮೈಸೂರು,ಜ.12(ವೈಡಿಎಸ್)-ಜ್ಞಾನದ ಮೂಲವಾದ ಸಂಸ್ಕೃತ ವೈಜ್ಞಾನಿಕ ಭಾಷೆ ಯಾಗಿದೆ. ನಾವು ಶಿಕ್ಷಣದೊಂದಿಗೆ ಸಂಸ್ಕೃತಿಗೂ ಒತ್ತು ನೀಡಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅಭಿಪ್ರಾಯಪಟ್ಟರು.

ಹೆಬ್ಬಾಳು ರಿಂಗ್‍ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ ವಿಜ್ಞಾನ ಮಂಥನ ಪ್ರತಿಭಾನ್ವೇಷಣಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, 3-8 ವರ್ಷದೊಳಗಿನ ಅವಧಿ ಯಲ್ಲಿ ಮಕ್ಕಳಲ್ಲಿ ಮೆದುಳು ಬೆಳವಣಿಗೆ ಯಾಗಲಿದ್ದು, ಹೆಚ್ಚು ಗ್ರಹಿಸುವ ಶಕ್ತಿ ಇರುತ್ತದೆ. ಈ ವೇಳೆ ಮಾತೃ ಭಾಷೆಯ ಜತೆಗೆ ಇತರೇ ಭಾಷೆಗಳನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದರು.

ದೇಶದಲ್ಲಿ ಪ್ರತಿ ವರ್ಷ 1 ಕೋಟಿ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ವ್ಯಾಸಂಗ ವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದು ಕಡಿಮೆ ಯಾಗಬೇಕಾದರೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕುತೂಹಲವೇ ಸಂಶೋಧನಾ ವಿದ್ಯಾರ್ಥಿಯ ನಿಜವಾದ ಸಾಮಥ್ರ್ಯ. ಹಾಗಾಗಿ ಸಂಶೋ ಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಕುತೂಹಲ ಇರಬೇಕು ಎಂದು ಹೇಳಿದರು.

ತೃಪ್ತಿ ತಂದಿದೆ: ನಾಸಾ ಬಿಟ್ಟು ಇಸ್ರೋದಲ್ಲಿ ಏಕೆ ಇದ್ದಿರಿ? ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಡಾ.ಕೆ. ಕಸ್ತೂರಿ ರಂಗನ್ ಪ್ರತಿಕ್ರಿಯಿಸಿ, ನನಗೆ ಅಮೆರಿಕದ ಬಾಹ್ಯಾಕಾಶ ಸಂಶೋ ಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶವಿತ್ತು. ಆದರೆ, ಇದೇ ಸಂದರ್ಭ ದಲ್ಲಿ ಇಸ್ರೋ ಕಟ್ಟುವ ಜವಾಬ್ದಾರಿ ಕೂಡ ನನಗೆ ದೊರೆಯಿತು. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇಸ್ರೋದಲ್ಲಿ ಸಲ್ಲಿಸಿದ ಸೇವೆ ತೃಪ್ತಿ ನೀಡಿದೆ ಎಂದು ಹೇಳಿದರು.

ಸುನಿತಾ ವಿಲಿಯಮ್ಸ್ ಸೇರಿದಂತೆ ಸಾಕಷ್ಟು ಪ್ರತಿಭಾವಂತ ಭಾರತೀಯರು ನಾಸಾದಲ್ಲಿ ದುಡಿಯುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ದೇಶಕ್ಕೆ ಕೊಡುಗೆ ನೀಡು ತ್ತಿಲ್ಲವೆಂಬ ಭಾವನೆ ಸರಿಯಲ್ಲ. ವಿದೇಶ ದಲ್ಲಿ ದುಡಿಯುವುದು ಅವರ ಇಚ್ಛೆ ಎಂದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲ ಸುಬ್ರಮಣ್ಯಂ, ಉಪ ಕಾರ್ಯನಿರ್ವಹ ಣಾಧಿಕಾರಿ ಎಸ್.ಪ್ರವೀಣ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಭಾಸ್ಕರನ್, ವಿದ್ಯಾರ್ಥಿ ವಿಜ್ಞಾನ ಮಂಥನ ಕಾರ್ಯಕ್ರಮದ ಸಂಚಾಲಕ ಡಾ.ಅರವಿಂದ್ ಸಿ.ರಾನಡೆ ಮತ್ತಿತರರು ಉಪಸ್ಥಿತರಿದ್ದರು.

Translate »