ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ
ಮೈಸೂರು

ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ

January 13, 2020

ಸ್ವಾಮಿ ವಿವೇಕಾನಂದರ ಸಂದೇಶ ಪಾಲನೆಯಲ್ಲಿ ಬಹುತೇಕ ವಿಫಲವಾಗಿದ್ದೇವೆ
ಮೈಸೂರು,ಜ.12(ಪಿಎಂ)-ಸ್ವಾಮಿ ವಿವೇಕಾನಂದರು ಅಹಂ ಹಾಗೂ ಪರ ಧರ್ಮ ದ್ವೇಷ ಭಾವನೆ ತೊರೆದರೆ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಸಂದೇಶ ನೀಡಿದ್ದಾರೆ. ಆದರೆ ಇಂತಹ ಮಹತ್ವದ ಸಂದೇಶವನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳುವಲ್ಲಿ ಬಹುತೇಕ ವಿಫಲ ವಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ವಿಷಾದಿಸಿದರು.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಮೈಸೂರು ಜಿಲ್ಲಾಡಳಿತ ಹಾಗೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ (ರಾಷ್ಟ್ರೀಯ ಯುವ ದಿನ) ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ವ್ಯಕ್ತಿ ಇಲ್ಲವೇ ಸಮಾಜವಾಗಲೀ ಅಹಂ ಹಾಗೂ ಪರಧರ್ಮ ದ್ವೇಷ ಭಾವನೆ ಬಿಟ್ಟರೆ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಪಾಶ್ಚಿಮಾತ್ಯರು ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಆದರೆ ಅವರ ತತ್ವಾದರ್ಶಗಳ ಬಗ್ಗೆ ನಾವು ಮಾತನಾಡುತ್ತೇವೆ ಹೊರತು ಆಚರಣೆಗೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿವೇಕಾನಂದರು ಇಡೀ ವಿಶ್ವಕ್ಕೆ ಶಕ್ತಿ ಯುತ ಸಂದೇಶಗಳನ್ನು ನೀಡಿದ ಮೊಟ್ಟ ಮೊದಲ ಸಂತರು. ಅಮೇರಿಕದ ಚಿಕಾ ಗೋದಲ್ಲಿ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತ ಪ್ರತಿನಿಧಿಸಿ ಅವರು ಕೊಟ್ಟ ಸಂದೇಶ ಅತ್ಯಂತ ಮಹತ್ವದ್ದು. ಧರ್ಮ ಎಂದರೆ ಕೇವಲ ದೇವರು, ನಂಬಿಕೆ, ಪೂಜಾ ಕೈಂಕರ್ಯ ಎಂದೆಷ್ಟೇ ಹೇಳುತ್ತಿದ್ದ ಸಂತ ಪರಂಪರೆಯನ್ನು ಮೀರಿ ವಿವೇಕಾ ನಂದರು `ಧರ್ಮ ಎಂದರೆ ಸೇವೆ’ ಎಂದು ವ್ಯಾಖ್ಯಾನಿಸುತ್ತಾರೆ. ವಿಶ್ವಸಂಸ್ಥೆ ಯಲ್ಲೂ ಅವರ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದರೆ ಅವರ ಸಂದೇಶ ಎಷ್ಟು ಅರ್ಥಪೂರ್ಣ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರಧಾನ ಭಾಷಣ ಮಾಡಿದ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೇ ಶಾನಂದ, ಶಿಕ್ಷಣದ ಬಗ್ಗೆ ಮಹತ್ವದ ಚಿಂತನೆಗಳನ್ನು ನೀಡಿರುವ ವಿವೇಕಾ ನಂದರು, ಮೂರ್ಖತನಕ್ಕೆ ನಮ್ಮ ಬುದ್ಧಿ ಬಿಟ್ಟು ಕೊಡಬಾರದು ಎಂದು ಕರೆ ನೀಡಿ ದ್ದಾರೆ. ಶಿಕ್ಷಣ ಎಂದರೆ ಮಂತ್ರವಿದ್ದಂತೆ ಎಂದು ವ್ಯಾಖ್ಯಾನಿಸಿದ್ದು, ಶಿಕ್ಷಣ ಎಂದ ರೇನು ಎಂದು ನಿತ್ಯ ಆಲೋಚನೆ ಮಾಡು ವಂತೆ ಸಲಹೆ ನೀಡಿದ್ದಾರೆ. ವಿದ್ಯಾರ್ಥಿ ಗಳು ಶಿಕ್ಷಣದ ಗುರಿಯೇನು? ನಾನು ಯಾರು? ನನ್ನ ಗುರಿಯೇನು? ನನ್ನಲ್ಲಿ ರುವ ಸಾಮಥ್ರ್ಯವೇನೆಂದು ಆಲೋಚನೆ ಮಾಡಬೇಕೆಂದು ವಿವೇಕಾನಂದರು ತಿಳಿಸಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ರಾಜ್ಯ ಸರ್ಕಾರದಿಂದ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡುವ ಯೋಜನೆಯಡಿ ಸಾಂಕೇತಿಕವಾಗಿ 12 ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು. ಅಲ್ಲದೆ, ಕಾಲೇಜಿನ ಆವರಣದಲ್ಲಿ ಆರಂಭಿಸಲಿರುವ `ಯುವ ಸಬಲೀಕರಣ ಕೇಂದ್ರ’ದ ಉದ್ಘಾಟನೆ ಯನ್ನು ಗಣ್ಯರು ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇ ಶಕ ಪ್ರೊ.ಮೂಗೇಶಪ್ಪ, ಮೈಸೂರು ಹೆಚ್ಚುವರಿ ತಹಸಿಲ್ದಾರ್ ರತ್ನಾನಾಯಕ್, ಜಿಪಂ ಉಪಕಾರ್ಯದರ್ಶಿ ಕೆಂಪರಾಜು, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಟಿ. ವಿಜಯ್ ಮತ್ತಿತರರು ಹಾಜರಿದ್ದರು.

Translate »