ಅಪರಿಚಿತರ ಗುಂಡಿಗೆ ಸಮಾಜವಾದಿ ಪಕ್ಷದ ಮುಖಂಡ ಬಲಿ
ಮೈಸೂರು

ಅಪರಿಚಿತರ ಗುಂಡಿಗೆ ಸಮಾಜವಾದಿ ಪಕ್ಷದ ಮುಖಂಡ ಬಲಿ

January 13, 2020

ಮಾವ್,ಜ.12-ಉತ್ತರಪ್ರದೇಶದ ಮುಹಮ್ಮದಾಬಾದ್ ಗ್ರಾಮದಲ್ಲಿ ಭಾನುವಾರ ಅಪರಿಚಿತರು ಸಮಾಜ ವಾದಿ ಪಕ್ಷದ ಮುಖಂಡ ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತರನ್ನು ಬಿಜ್ಲಿ ಯಾದವ್ ಎಂದು ಗುರುತಿಸಲಾ ಗಿದೆ. ಬೆಳಿಗ್ಗೆ ವಾಯುವಿಹಾರ ನಡೆಸುತ್ತಿ ದ್ದಾಗ ಬೈಕ್‍ನಲ್ಲಿ ಬಂದ ಅಪರಿಚಿತರು ಈ ಕೃತ್ಯವೆಸಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನೂರಾರು ಸಂಖ್ಯೆಯ ಅವರ ಅಭಿಮಾನಿಗಳು, ಸ್ಥಳೀಯ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಿಜ್ಲಿ ಯಾದವ್ ಹತ್ಯೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಖಂಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರು ವುದಕ್ಕೆ ಇದು ಮತ್ತೊಂದು ಸಾಕ್ಷ್ಯವಾಗಿದೆ ಎಂದು ಆರೋಪಿಸಿದ್ದಾರೆ.

Translate »