ವಿವೇಕಾನಂದರ ಆದರ್ಶ ಅನುಸರಿಸಲು ವಿದ್ಯಾರ್ಥಿಗಳಿಗೆ ಪ್ರೊ.ನಿರಂಜನ ವಾನಳ್ಳಿ ಸಲಹೆ
ಮೈಸೂರು

ವಿವೇಕಾನಂದರ ಆದರ್ಶ ಅನುಸರಿಸಲು ವಿದ್ಯಾರ್ಥಿಗಳಿಗೆ ಪ್ರೊ.ನಿರಂಜನ ವಾನಳ್ಳಿ ಸಲಹೆ

January 13, 2020

ಮೈಸೂರು,ಜ.12(ಆರ್‍ಕೆಬಿ)-ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣಬ ಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು, ಅವರ ಆದರ್ಶವನ್ನು ಮಕ್ಕಳು ಅನುಸರಿಸಬೇಕು ಎಂದು ಮಾನಸಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂವಾಗಿ ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಕಾಲೇಜಿನ ಸಭಾಂಗಣ ದಲ್ಲಿ ಕಾಲೇಜು, ಮೈಸೂರು ವಿವಿ ಎನ್‍ಎಸ್‍ಎಸ್, ನೆಹರು ಯುವ ಕೇಂದ್ರ ಜಂಟಿ ಯಾಗಿ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮೂರು ಕೋಟಿ ದೇವರನ್ನು ನೀವು ನಂಬ ಬಹುದು, ಆದರೆ ನಿನ್ನನ್ನು ನೀನು ನಂಬದಿದ್ದರೆ ನೀನು ನಾಸ್ತಿಕನೇ ಎಂದಿದ್ದರು ಸ್ವಾಮಿ ವಿವೇಕಾನಂದರು.

ಮಕ್ಕಳು ವಿವೇಕಾನಂದರನ್ನು ಓದಿ, ಅರ್ಥ ಮಾಡಿಕೊಂಡರೆ ಭಾರತವನ್ನು ಅರ್ಥ ಮಾಡಿ ಕೊಂಡಂತೆ ಎಂದು ರವೀಂದ್ರನಾಥ ಠಾಗೂರರು ಹೇಳಿದ್ದನ್ನು ಪ್ರಸ್ತಾಪಿಸಿದ ಅವರು, ವಿವೇಕಾ ನಂದರು ತುಂಬಾ ಪ್ರಾಕ್ಟಿಕಲ್ ವ್ಯಕ್ತಿ. ಅವರು ಅಳಿದ ಮೇಲೂ ಸಹಸ್ರಾರು ವರ್ಷ ನಮ್ಮ ಮನದಲ್ಲಿ ಉಳಿಯುತ್ತಾರೆ ಎಂದರು.

ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕ್ರೆಡಿಟ್-ಐ ನಿರ್ದೇಶಕ ಡಾ.ಎಂ.ಪಿ.ವರ್ಷ, ಬೆಂಗಳೂರಿನ ಯೋಜನಾ ನಿರ್ದೇಶಕಿ ಬಿ.ಎಸ್.ಮೀನಾ ಮೈಸೂರು, ಮೈಸೂರು ವಿವಿ ಎನ್‍ಎಸ್‍ಎಸ್ ಸಂಯೋಜ ನಾಧಿಕಾರಿ ಡಾ.ಬಿ.ಚಂದ್ರಶೇಖರ್, ನೆಹರು ಯುವ ಕೇಂದ್ರ ಜಿಲ್ಲಾ ಯುವಜನ ಸಮನ್ವ ಯಾಧಿ ಕಾರಿ ಎಸ್.ಸಿದ್ದರಾಮಪ್ಪ, ಎನ್‍ಎಸ್‍ಎಸ್ ಬಿ.ಎನ್. ಮಾರುತಿ ಪ್ರಸನ್ನ ಇನ್ನಿತರರು ಉಪಸ್ಥಿತರಿದ್ದರು.

Translate »