ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಭೀತಿ ಮೈಸೂರಿನ ರೈಲ್ವೆ ಮತ್ತು ಸಾರಿಗೆ ಸೇವೆಗಳ ಮೇಲೆ ಭಾರಿ ಪರಿ ಣಾಮ ಬೀರಿದೆ. ಕೆಲ ದಿನಗಳಿಂದ ಪ್ರಯಾ ಣಿಕರ ಸಂಖ್ಯೆ ದಿನೇ ದಿನೇ ಇಳಿಮುಖ ವಾಗುತ್ತಾ ಬಂದಿದೆ. ಶುಕ್ರವಾರದವರೆಗೆ ಮೈಸೂರಿನಲ್ಲಿ ರೈಲ್ವೆ ಮತ್ತು ಕೆಎಸ್‍ಆರ್ ಟಿಸಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.50-60ರಷ್ಟು ಇಳಿಮುಖವಾಗಿದೆ.
ನಗರ ರೈಲ್ವೆ ಕಚೇರಿಯಲ್ಲಿ ವಾರದಿಂದೀ ಚೆಗೆ ಭಾರಿ ಸಂಖ್ಯೆಯ ಬುಕಿಂಗ್‍ಗಳು ರದ್ದಾ ಗಿವೆ. ಪ್ರಯಾಣಿಕರ ಸಂಖ್ಯೆ ಕುಸಿದಿದ್ದ ರಿಂದ ನೈರುತ್ಯ ರೈಲ್ವೆ 12 ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ. ಮಾ.22 ರಂದು `ಜನತಾ ಕಪ್ರ್ಯೂ’ ಹಿನ್ನೆಲೆಯಲ್ಲಿ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗು ತ್ತದೆಯೇ ಎಂಬ ಬಗ್ಗೆ ಇನ್ನೂ ತೀರ್ಮಾನ ವಾಗಿಲ್ಲ. ನೈರುತ್ಯ ರೈಲ್ವೆ ಕೇಂದ್ರ ಕಚೇರಿ ಯಿಂದ ಮಾಹಿತಿ ಬರಬೇಕಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಟಿಕೆಟ್ ಕೌಂಟರ್‍ನಲ್ಲಿ ಅಂತರ: ಮೈಸೂರು ರೈಲು ನಿಲ್ದಾಣದ ಟಿಕೆಟ್ ಕೌಂಟರ್‍ನಲ್ಲಿ ಟಿಕೆಟ್‍ಗಾಗಿ ಪ್ರಯಾಣಿಕರು ಒತ್ತೊತ್ತಾಗಿ ನಿಲ್ಲುವ ಬದಲು ಅಂತರ ಕಾಯ್ದುಕೊಳ್ಳಲಿ ಎಂದು ಪ್ರತಿ 1 ಮೀ. ಅಂತರದಲ್ಲಿ ಕೆಂಪು ಪಟ್ಟಿ ರಚಿಸಲಾಗಿದೆ. 1ನೇ ಪ್ಲಾಟ್‍ಫಾರ್ಮ್ ನಲ್ಲಿ ರೈಲ್ವೆ ವೈದ್ಯಕೀಯ ವಿಭಾಗದಿಂದ ಗುರುವಾರ `ಕೋವಿಡ್-19 ಸಹಾಯ ವಾಣಿ’ ತೆರೆಯಲಾಗಿದೆ. ರೈಲ್ವೆ ಕಾರ್ಯಾ ಗಾರದ ಸಿಬ್ಬಂದಿ ಬಿ.ಪಾರ್ಥಸಾರಥಿ, ಮೋಹನ್‍ಕುಮಾರ್ ಸಿಂಗ್, ಹನು ಮಂತರಾವ್, ಬಾಲಸುಬ್ರಹ್ಮಣ್ಯ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿಲ್ದಾಣಕ್ಕೆ ಬರುವ ಪ್ರತಿ ಯೊಬ್ಬ ಪ್ರಯಾಣಿಕರನ್ನು ಥರ್ಮಾ ಮೀಟರ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗು ತ್ತಿದೆ. ಗುರುವಾರ 355 ಹಾಗೂ ಶುಕ್ರವಾರ ಮಧ್ಯಾಹ್ನದವರೆಗೆ 146 ಮಂದಿ ಸ್ಕ್ರೀನಿಂಗ್‍ಗೆ ಒಳಪಟ್ಟರು. ಯಾರ ದೇಹದ ಉಷ್ಣತೆ 100 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿದೆಯೊ ಅವ ರನ್ನು ಕೆ.ಆರ್.ಆಸ್ಪತ್ರೆಯ `ಕೋವಿಡ್-19’ ಪ್ರತ್ಯೇಕ ವಾರ್ಡ್‍ಗೆ ಕಳುಹಿಸಿಕೊಡಲಾಗು ತ್ತಿದೆ. ಅಲ್ಲಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ.
ರೈಲು ನಿಲ್ದಾಣದ ಪಾರ್ಕಿಂಗ್‍ನಲ್ಲಿಯೂ ವಾಹನಗಳ ನಿಲುಗಡೆ ಪ್ರಮಾಣ ಶೇ.80 ರಷ್ಟು ತಗ್ಗಿದೆ. ಸಾಮಾನ್ಯ ದಿನಗಳಲ್ಲಿ ಸರಾ ಸರಿ 180 ಕಾರುಗಳು ನಿಲುಗಡೆಯಾಗು ತ್ತಿದ್ದವು. ಇಂದು 20 ಕಾರುಗಳಷ್ಟೇ ಇವೆ ಎಂದು ಪಾರ್ಕಿಂಗ್ ಉಸ್ತುವಾರಿ ಹೇಮಂತ್ `ಮಿತ್ರ’ನಿಗೆ ತಿಳಿಸಿದರು.
ಮೈಸೂರಿನ ಕೆಎಸ್‍ಆರ್‍ಟಿಸಿ ಗ್ರಾಮಾಂ ತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಶೇ.50ಕ್ಕೆ ಕುಸಿದಿದೆ. ಟಿಕೆಟ್ ಕಾಯ್ದಿರಿಸುವಿಕೆಯೂ ತಗ್ಗಿದೆ. ಹೈದರಾ ಬಾದ್, ಚೆನ್ನೈಗೆ ನಿತ್ಯ 5-6 ಬಸ್ ಸಂಚ ರಿಸುತ್ತಿದ್ದವು. ಈಗದು 1-2ಕ್ಕೆ ಇಳಿದಿದೆ. ಬುಕಿಂಗ್ ಇಲ್ಲದಿದ್ದರೆ ಈ ಮಾರ್ಗದಲ್ಲಿ 1 ಬಸ್ ಕೂಡ ಸಂಚರಿಸುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.