ಫಿಲೋಮಿನಾ ಕಾಲೇಜು ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಕೆ
ಮೈಸೂರು

ಫಿಲೋಮಿನಾ ಕಾಲೇಜು ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಕೆ

March 22, 2020

ಕಾಲೇಜಿನ ರಸಾಯನ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದಿಂದ ಕಾಲೇಜು ಸಿಬ್ಬಂದಿಗೆ ವಿತರಣೆ
ಮೈಸೂರು,ಮಾ.21(ಎಂಟಿವೈ)- ಕೊರೊನಾ ವೈರಸ್ ವ್ಯಾಪಕವಾಗಿ ಹರಡು ತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ರಸಾಯನ ಶಾಸ್ತ್ರ ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲೇ ಸ್ಯಾನಿಟೈಸರ್ ತಯಾರಿಸಿ ಸಿಬ್ಬಂದಿಗಳಿಗೆ ಉಚಿತವಾಗಿ ವಿತರಿಸಲಾಗಿದೆ.

ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯ ಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ರವಿ ಜೆ.ಡಿ.ಸಲ್ಡಾನ ಮಾತನಾಡಿ, ನಮ್ಮ ವಿಭಾಗದವರೇ ಸರಳವಾಗಿ ಸ್ಯಾನಿ ಟೈಸರ್ ತಯಾರಿಸಿದ್ದಾರೆ. ಮೊದಲು 2 ಲೀ. ಸ್ಯಾನಿಟೈಸರ್ ತಯಾರಿಸಲಾಗಿದೆ. ಅದನ್ನು ಚಿಕ್ಕ ಬಾಟಲ್‍ಗಳಿಗೆ ತುಂಬಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.

ಕಾಲೇಜಿನ ಶೈಕ್ಷಣಿಕ ಯೋಜನಾಧಿಕಾರಿ ಪ್ರೊ.ಆಗ್ನೆಸ್ ಡಿಸೋಜಾ ಮಾತನಾಡಿ, ಒಂದು ತಿಂಗಳಿಂದ ಕೊರೊನಾ ಭೀತಿ ಹೆಚ್ಚುತ್ತಲೇ ಇದೆ. ಆರೋಗ್ಯ ಇಲಾಖೆ ಆಗಾಗ್ಗೆ ಸ್ಯಾನಿಟೈಸರ್ ಬಳಸಿ ಕೈ ತೊಳೆಯು ವಂತೆ ಸೂಚಿಸಿದೆ. ಬಳಕೆ ಪ್ರಮಾಣ ಹೆಚ್ಚಿದ್ದ ರಿಂದ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಕೊರತೆಯಾಗಿದೆ. ಸಂದರ್ಭದ ಲಾಭ ಪಡೆಯಲು ಕೆಲವರು ನಕಲಿ ಸ್ಯಾನಿಟೈಸರ್ ತಯಾರಿಸಿ ಮಾರುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ ರಸಾಯನ ಶಾಸ್ತ್ರ ಮತ್ತು ಜೀವ ರಸಾಯನ ಶಾಸ್ತ್ರ ವಿಭಾಗದ ಸಿಬ್ಬಂದಿ ಅಲ್ಫೋನ್ಸಾ ಡಿಸೋಜಾ, ಪ್ರೊ.ಬ್ರಿಟ್ಟೊ ಡೊಮಿನಿಕ್ ರಾಯನ್, ಸಹಾಯಕ ಪ್ರಾಧ್ಯಾ ಪಕರುಗಳಾದ ಬಿಂದು ನೊರೋನ್ಹಾ, ಅರ್ಚನಾ ಪ್ರಿಯಾಂಕಾ ಮೆಂಡೋನ್ಸಾ, ರೆನಿಟಾ ರೋಸ್, ಬ್ಲೆಸ್ಸಿ ಜಾರ್ಜ್, ದಿವ್ಯಾ ಪಿ.ನಿಶ್ಮಿತಾ, ಆನ್ ರಿಚಲ್ ಆಂತ್ರಪರ್ ಅವರ ತಂಡ ಕಾಲೇಜಿನ ಪ್ರಯೋಗಾಲಯ ದಲ್ಲೇ ಸರಳವಾಗಿ ಸ್ಯಾನಿಟೈಸರ್ ತಯಾರಿ ಸಿದೆ. ಬೇಡಿಕೆ ಬಂದರೆ ಮಾರುಕಟ್ಟೆಗೆ ಸ್ಯಾನಿ ಟೈಸರ್ ಸಿದ್ಧಪಡಿಸಿಕೊಡಲಿದೆ ಎಂದರು.

ಕಾಲೇಜಿನ ಮುಖ್ಯಸ್ಥ ರೆ.ಫಾ.ಬರ್ನಾರ್ಡ್ ಪ್ರಕಾಶ್ ಬಾರ್ನಿಸ್, ಉಪ ಮುಖ್ಯಸ್ಥ ರೆ.ಫಾ.ಮರಿಯ ಕ್ಸೇವಿಯರ್, ಆಡಳಿತಾಧಿ ಕಾರಿ ಫಾ.ಥಾಮಸ್ ರಾಕ್ಸನ್ ಬಾರೋಸ್, ಪ್ರಾಂಶುಪಾಲ ರುತ್ ಶಾಂತಕುಮಾರಿ ಮತ್ತಿತರರು ಹಾಜರಿದ್ದರು.

Translate »