ಜೀವನವಿಡೀ ಕನ್ನಡದ ಧ್ವನಿಯಾಗಿದ್ದ ಪಾಪು
ಮೈಸೂರು

ಜೀವನವಿಡೀ ಕನ್ನಡದ ಧ್ವನಿಯಾಗಿದ್ದ ಪಾಪು

March 22, 2020

ಕಸಾಪ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಸಿಪಿಕೆ ನುಡಿನಮನ
ಮೈಸೂರು,ಮಾ.21(ಎಸ್‍ಪಿಎನ್)- ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ(ಪಾಪು) ಅವರಿಗೆ ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಜಿಲ್ಲಾ ಕಸಾಪ ಭವನದಲ್ಲಿ ಶನಿವಾರ ನುಡಿನಮನ ಸಲ್ಲಿಸಲಾಯಿತು.

ಪಾಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾ ಡಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ದಕ್ಷಿಣ ಕರ್ನಾಟಕ ದಲ್ಲಿ ಕುವೆಂಪು, ಉತ್ತರ ಕರ್ನಾಟಕದಲ್ಲಿ ಪಾಟೀಲ್ ಪುಟ್ಟಪ್ಪ ನವರು ತಮ್ಮ ಜೀವಿತಾವಧಿಯವರೆಗೂ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅವರ ಆದರ್ಶ ಜೀವನ, ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದರು.

ಕರ್ನಾಟಕ ಏಕೀಕರಣದಲ್ಲಿ ದುಡಿದ ಪ್ರಮುಖರಲ್ಲಿ `ಪಾಪು’ ಹೆಸರು ಮುಂಚೂಣಿಯಲ್ಲಿದೆ. ಪತ್ರಕರ್ತರಾಗಿ, ಬರಹಗಾರರಾಗಿ, ಹೋರಾಟಗಾರಗಾಗಿ ಹಲವು ವರ್ಷಗಳ ಕಾಲ ಕನ್ನಡಕ್ಕಾಗಿ ದುಡಿದಿದ್ದಾರೆ. ಅಲ್ಲದೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಗಿ 50 ವರ್ಷಗಳ ಕಾಲ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿ ದ್ದಾರೆ ಎಂದು ಬಣ್ಣಿಸಿದರು. ಉತ್ತರ ಕರ್ನಾಟಕದ ಜನರಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಾಗ ಅದನ್ನು ಬಲವಾಗಿ ವಿರೋಧಿಸು ತ್ತಿದ್ದವರಲ್ಲಿ ಪಾಪು ಧ್ವನಿ ಮೊದಲನೆಯದಾಗಿರುತ್ತಿತ್ತು. ಗೋಕಾಕ್ ಚಳವಳಿ ಸೇರಿದಂತೆ ಅನೇಕ ಚಳವಳಿಗಳಲ್ಲಿ ಪಾಪು ಅವರ ಹೆಸರು ಮುಂಚೂಣಿಯಲ್ಲಿರುತ್ತಿತ್ತು. ಅವರು ಹೋರಾಟಕ್ಕೆ ಧುಮುಕಿದರೆ ಅದು ಕೊನೆಯ ಹಂತ ತಲುಪುವವರೆಗೂ ಭಾಗಿಯಾಗುತ್ತಿದ್ದರು. ಪತ್ರಿಕೆ ಸಂಪಾದಕರಾಗಿ, ಬರಹಗಾರನಾಗಿ, ಸಾಹಿತಿಯಾಗಿ, ವೈಚಾರಿಕ ಬರಹಗಳ ಮೂಲಕ ಅರಿವು ಮೂಡಿಸುವಲ್ಲಿ ಪಾಪು ಅವರ ಪಾತ್ರ ಪ್ರಮುಖವಾಗಿದೆ ಎಂದು ಸ್ಮರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಪಾಟೀಲ ಪುಟ್ಟಪ್ಪ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, 2003ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯದ ಸಮ್ಮೇಳನದ ಅಧ್ಯಕ್ಷರಾಗಿ, ಒಟ್ಟು 70 ವರ್ಷಗಳ ಕಾಲ ಕನ್ನಡ ಧ್ವನಿಯಾಗಿ ಕೆಲಸ ಮಾಡಿದ್ದಾರೆ. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಯಾರೂ ಮರೆಯಲಾರದು. ಅವರ ಸೇವೆಗೆ ಕನ್ನಡ ವಿವಿಯಿಂದ ನಾಡೋಜ, ಕರ್ನಾಟಕ ಸಾಹಿತ್ಯ ಪರಿಷತ್‍ನಿಂದ ನೃಪತುಂಗ ಮತ್ತಿತರೆ ಪ್ರಶಸ್ತಿಗಳು ಲಭಿಸಿವೆ ಎಂದರು.

ನುಡಿನಮನದಲ್ಲಿ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಾರ್ಯದರ್ಶಿ ಕೆ.ಎಸ್.ನಾಗರಾಜು, ರಂಗಕರ್ಮಿ ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಹಲವÀರಿದ್ದರು.

Translate »