ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ

March 17, 2020

ಬೆಂಗಳೂರು, ಮಾ. 16- ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಸಾಮಾನ್ಯ. ಇಲ್ಲಿ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ವೈದ್ಯಕೀಯ ಹೆಲ್ಪ್ ಡೆಸ್ಕ್‍ಗಳನ್ನು ತೆರೆದಿದೆ.

ನೈರುತ್ಯ ರೈಲ್ವೆ ಕರ್ನಾಟಕ, ತಮಿಳು ನಾಡು ಮತ್ತು ಗೋವಾ ರಾಜ್ಯಗಳ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ವಾಸ್ಕೊಡಗಾಮಾ, ವಿಜಯಪುರ, ಬೆಳಗಾವಿ, ಗದಗ, ಬಳ್ಳಾರಿ, ಹೊಸಪೇಟೆ, ಅಲ್ನವರ್ ಮತ್ತು ಬಾಗಲಕೋಟೆ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ಸ್ಥಾಪಿಸಿದೆ.

ರೈಲ್ವೆ ಇಲಾಖೆ ಸಿಬ್ಬಂದಿಗೆ ಪ್ರಮುಖ ನಿಲ್ದಾಣಗಳಲ್ಲಿ ಬೆಂಗಳೂರು ವಿಭಾಗದ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ವಾರದಲ್ಲಿ ಎರಡು-ಮೂರು ದಿನ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತದೆ. ಕೊರೊನಾ ವೈರಸ್ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಮುಖ ನಿಲ್ದಾಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ 600ಕ್ಕೂ ಹೆಚ್ಚು ಪೆÇೀಸ್ಟರ್‍ಗಳನ್ನು ಹಾಕ ಲಾಗಿದೆ. ಕರಪತ್ರಗಳು, ಆಡಿಯೊ, ವಿಡಿಯೊ ಗಳನ್ನು, ಸಾರ್ವಜನಿಕ ಪ್ರಕಟಣೆಗಳನ್ನು, ಎಲ್‍ಇಡಿ/ಎಲ್‍ಸಿಡಿ ವಿಡಿಯೊ ಪರದೆ ಮೂಲಕ ಎಚ್ಚರಿಕೆ, ಸ್ವಚ್ಛತೆ ಕ್ರಮಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ. ಕೊರೊನಾ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹುಬ್ಬಳ್ಳಿ/ಕೇಂದ್ರ ಆಸ್ಪತ್ರೆಯಲ್ಲಿ 16 ಬೆಡ್‍ಗಳ ಸುಸಜ್ಜಿತ ರೈಲ್ವೆ ಆಸ್ಪತ್ರೆಯನ್ನು ಮೈಸೂರಿನಲ್ಲಿ 10 ಬೆಡ್ ಗಳಿರುವ ಆಸ್ಪತ್ರೆಯನ್ನು ತೆರೆಯಲಾಗಿದೆ.

Translate »