Tag: Mysuru Railway Station

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ
ಮೈಸೂರು

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭ

March 17, 2020

ಬೆಂಗಳೂರು, ಮಾ. 16- ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಸಾಮಾನ್ಯ. ಇಲ್ಲಿ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ವೈದ್ಯಕೀಯ ಹೆಲ್ಪ್ ಡೆಸ್ಕ್‍ಗಳನ್ನು ತೆರೆದಿದೆ. ನೈರುತ್ಯ ರೈಲ್ವೆ ಕರ್ನಾಟಕ, ತಮಿಳು ನಾಡು ಮತ್ತು ಗೋವಾ ರಾಜ್ಯಗಳ ಹಲವು ಭಾಗಗಳಲ್ಲಿ ಸಂಚರಿಸುತ್ತಿದ್ದು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ವಾಸ್ಕೊಡಗಾಮಾ, ವಿಜಯಪುರ, ಬೆಳಗಾವಿ, ಗದಗ, ಬಳ್ಳಾರಿ, ಹೊಸಪೇಟೆ, ಅಲ್ನವರ್ ಮತ್ತು ಬಾಗಲಕೋಟೆ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ಸ್ಥಾಪಿಸಿದೆ. ರೈಲ್ವೆ ಇಲಾಖೆ ಸಿಬ್ಬಂದಿಗೆ ಪ್ರಮುಖ ನಿಲ್ದಾಣಗಳಲ್ಲಿ ಬೆಂಗಳೂರು ವಿಭಾಗದ…

ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ
ಮೈಸೂರು

ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ

October 4, 2019

ಮೈಸೂರು: ವಿದ್ಯುತ್ ಲೈನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಇಂದು ಬೆಳಿಗ್ಗೆ ಮೈಸೂರು-ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ಒಂದು ಗಂಟೆ ಕಾಲ ಸ್ಥಗಿತ ಗೊಂಡು ಪ್ರಯಾಣಿಕರು ಪರಿತಪಿಸಬೇಕಾಗಿ ಬಂತು. ಪರಿಣಾಮ ಮೈಲಾಡುತುರೈ, ಟುಟಿಕೊರಿನ್, ಹಂಪಿ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಡವಾಗಿ ಸಂಚರಿಸಿದವು. ಮೈಸೂರು ರೈಲು ನಿಲ್ದಾ ಣದ ಎಲೆಕ್ಟ್ರಿಕಲ್ ಇಂಜಿನಿಯರ್‍ಗಳು, ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ತಾಂತ್ರಿಕ ದೋಷ ಸರಿಪಡಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿದ ಬಳಿಕ ರೈಲುಗಳು ಚಲಿಸತೊಡಗಿದವು….

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ
ಮೈಸೂರು

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ

June 1, 2019

ಬೆಂಗಳೂರು: ಕರ್ನಾಟಕ ಸುರಕ್ಷಿತ ವಲಯದಲ್ಲಿದ್ದು, ರಾಜ್ಯದ ಜನತೆ ಆತಂಕಪಡುವ ಅಗತ್ಯ ವಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಗ್ರೆನೇಡ್ ಇದ್ದರೂ, ಅದರಲ್ಲಿ ಸ್ಫೋಟಕ ವಸ್ತುಗಳು ಇರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದರು. ಹಳಿಗಳ ಮೇಲೆ ಗ್ರೆನೇಡ್ ಇರು ವುದನ್ನು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಬಾಂಬ್…

20 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿ: ಸಿಂಹ
ಮೈಸೂರು

20 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿ: ಸಿಂಹ

January 17, 2019

ಮೈಸೂರು: 20 ಕೋಟಿ ರೂ. ಅನುದಾನದಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ವಿಶ್ವ ಮಾನವ ರೈಲು ಗಾಡಿಯ ಸೇವೆಯ ಅಂತರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾ ಗಲೇ ಮೈಸೂರು ರೈಲು ನಿಲ್ದಾಣದ ಅಭಿ ವೃದ್ಧಿ, ಹೊಸ ರೈಲು ಗಾಡಿಗಳ ವಿಸ್ತರಣೆ ಹಾಗೂ ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲು ಟರ್ಮಿನಲ್‍ಗಳಂತಹ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಮೈಸೂರು ಕೇಂದ್ರ…

ಜನಾಂಗೀಯ ಭೇದದಲ್ಲಿ ಮಹಾತ್ಮರಿಗೆ ಅವಮಾನ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿ ಕಿಟಕಿ, ಬಾಗಿಲಿಗೆ ಖಾದಿ ವಸ್ತ್ರ ಕಟ್ಟಿ ಸ್ಮರಣೆ
ಮೈಸೂರು

ಜನಾಂಗೀಯ ಭೇದದಲ್ಲಿ ಮಹಾತ್ಮರಿಗೆ ಅವಮಾನ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿ ಕಿಟಕಿ, ಬಾಗಿಲಿಗೆ ಖಾದಿ ವಸ್ತ್ರ ಕಟ್ಟಿ ಸ್ಮರಣೆ

June 8, 2018

ಮೈಸೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಪೀಟರ್ ಮಾರ್ಟ್‍ಬರ್ಗ್ ರೈಲ್ವೆ ನಿಲ್ದಾಣದಲ್ಲಿ ಅಪಮಾನಕ್ಕೊಳಗಾಗಿ ಇಂದಿಗೆ 125 ವರ್ಷಗಳು. ಈ ಜನಾಂಗೀಯ ಭೇದದ ಘಟನೆ ಬಳಿಕ ಮಹಾತ್ಮರಾದ ಸನ್ನಿವೇಶ ಸ್ಮರಿಸಿ, ಭಾರತೀಯರ ಸ್ವಾಭಿಮಾನ ಎತ್ತಿಹಿಡಿಯಲು ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿ ಕಿಟಕಿ-ಬಾಗಿಲಿಗೆ ಖಾದಿ ವಸ್ತ್ರಗಳನ್ನು ಕಟ್ಟಲಾಯಿತು. ಶ್ರೀರಂಗಪಟ್ಟಣ ತಾಲೂಕಿನ ಕಡತನಾಳುವಿನ ಸಮರ್ಪಣಾ ಟ್ರಸ್ಟ್, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಶ್ರೀ ವೆಂಕಟೇಗೌಡ ಸೇವಾ ಸಮಿತಿ, ದಕ್ಷಿಣ ನೈರುತ್ಯ ರೈಲ್ವೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ…

ಮೈಸೂರಿನಿಂದ ತಿರುಪತಿಗೆ ಮತ್ತೊಂದು ಎಕ್ಸ್‍ಪ್ರೆಸ್ ರೈಲು
ಮೈಸೂರು

ಮೈಸೂರಿನಿಂದ ತಿರುಪತಿಗೆ ಮತ್ತೊಂದು ಎಕ್ಸ್‍ಪ್ರೆಸ್ ರೈಲು

May 26, 2018

ಮೈಸೂರು: ಮೈಸೂರಿನಿಂದ ತೆರಳುವ ತಿರುಪತಿ ಯಾತ್ರಾರ್ಥಿಗಳಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಮೈಸೂರು-ತಿರುಪತಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ಹೊಸ ಎಕ್ಸ್‍ಪ್ರೆಸ್ ರೈಲು ತಿರುಪತಿಗೆ ಕೇವಲ 10 ಕಿ.ಮೀ. ದೂರದಲ್ಲಿರುವ ರೇಣ ಗುಂಟ ನಿಲ್ದಾಣ ಮತ್ತು ಮೈಸೂರು ನಡುವೆ ಸಂಚರಿಸಲಿದೆ. ಈ ರೈಲು (ರೈಲು ಸಂಖ್ಯೆ: 11065) ಸಂಚಾರ ಜೂ.1ರಂದು ಮೈಸೂರಿನಿಂದ ರೇಣ ಗುಂಟಕ್ಕೆ ಹಾಗೂ (ರೈಲು ಸಂಖ್ಯೆ: 11066) ಜೂ.2ರಂದು ರೇಣ ಗುಂಟದಿಂದ ಮೈಸೂರು ಕಡೆಗೆ ಸಂಚರಿಸುವುದರೊಂದಿಗೆ ಪ್ರಾರಂಭವಾಗಲಿದೆ. ಪ್ರತಿ ಶುಕ್ರವಾರ ರಾತ್ರಿ 10.55ಕ್ಕೆ ಮೈಸೂರಿನಿಂದ…

Translate »