20 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿ: ಸಿಂಹ
ಮೈಸೂರು

20 ಕೋಟಿ ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ ಅಭಿವೃದ್ಧಿ: ಸಿಂಹ

January 17, 2019

ಮೈಸೂರು: 20 ಕೋಟಿ ರೂ. ಅನುದಾನದಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಲ್ಲಿ ವಿಶ್ವ ಮಾನವ ರೈಲು ಗಾಡಿಯ ಸೇವೆಯ ಅಂತರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾ ಗಲೇ ಮೈಸೂರು ರೈಲು ನಿಲ್ದಾಣದ ಅಭಿ ವೃದ್ಧಿ, ಹೊಸ ರೈಲು ಗಾಡಿಗಳ ವಿಸ್ತರಣೆ ಹಾಗೂ ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲು ಟರ್ಮಿನಲ್‍ಗಳಂತಹ ಮಹತ್ವದ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಮೈಸೂರು ಕೇಂದ್ರ ರೈಲು ನಿಲ್ದಾಣವನ್ನು ಅಭಿವೃದ್ಧಿಯೊಂದಿಗೆ ನವೀಕರಿಸಲಾಗುತ್ತಿದೆ. ಇನ್ನೆರಡು-ಮೂರು ದಿನಗಳಲ್ಲಿ 20 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು. ಅಶೋಕಪುರಂವರೆಗೆ ಇನ್ನೂ ಹಲವು ರೈಲು ಗಾಡಿಗಳ ಸೇವೆಯನ್ನು ವಿಸ್ತರಿಸುವ ಜತೆಗೆ ಮೈಸೂರು-ತಿರುಪತಿ ನಡುವೆ ಭಾರೀ ಬೇಡಿಕೆ ಇರುವುದರಿಂದ ಮತ್ತೊಂದು ರೈಲನ್ನು ಒದಗಿಸುವ ಮೂಲಕ ಭಕ್ತಾಧಿಗಳು ಹಾಗೂ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಲಾಗುವುದು ಎಂದು ಇದೇ ವೇಳೆ ನುಡಿದರು.

Translate »