ಸಂಕ್ರಾಂತಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಅನಾಹುತ
ಮೈಸೂರು

ಸಂಕ್ರಾಂತಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಅನಾಹುತ

January 17, 2019

ಮೈಸೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಿಚ್ಚು ಹಾಯಿ ಸುವ ವೇಳೆ 25ಕ್ಕೂ ಹೆಚ್ಚು ಮಂದಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಯಾಯ ಜಿಲ್ಲೆಯ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ 5 ಮಂದಿ: ತಾಲೂ ಕಿನ ಸಿದ್ದಲಿಂಗಪುರದ ಪುರುಷೋತ್ತಮ್, ಜೀವನ್, ರವಿ, ತಿ.ನರಸೀಪುರದ ಶಿವಕುಮಾರ್, ಶ್ರೀರಂಗಪಟ್ಟಣದ ಮಂಜುನಾಥ್ ಅವರಿಗೆ ಸುಟ್ಟ ಗಾಯಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಪೈಕಿ ಶಿವಕುಮಾರ್ ಮತ್ತು ಮಂಜುನಾಥ್ ಅವರು ನಗರದ ಕೆ.ಆರ್.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷೋತ್ತಮ್ ಅವರಿಗೆ ಹೆಚ್ಚಿನ ಗಾಯಗಳಾಗಿವೆ. ಅಲ್ಲದೆ, ಕಿಚ್ಚು ಹಾಯಿಸುವ ವೇಳೆ ಇದೇ ಗ್ರಾಮದ 10 ವರ್ಷದ ಬಾಲಕನಿಗೂ ಹೋರಿಯೊಂದು ತುಳಿದಿದೆ. ಆದರೆ, ಯಾವುದೇ ಪ್ರಾಣಾಪಾಯ ವಾಗಿಲ್ಲ ಎಂದು ಗ್ರಾಮಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಿದ್ದಲಿಂಗಪುರ: ಮೈಸೂರು-ಬೆಂಗಳೂರು ರಸ್ತೆಯ ಸಿದ್ದಲಿಂಗಪುರದಲ್ಲಿ ಪ್ರತಿ ಸಂಕ್ರಾಂತಿ ವೇಳೆ ಅದ್ಧೂರಿಯಾಗಿ ರಾಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಈ ವೇಳೆ ಮೈಸೂರು-ಬೆಂಗಳೂರು ರಸ್ತೆಯ ಸಂಚಾರ ಮಾರ್ಗ ಬದಲಾವಣೆ ಸಹ ಮಾಡಲಾಗುತ್ತದೆ. ಅದರಂತೆ ಮಂಗಳವಾರ ಗ್ರಾಮಸ್ಥರೆಲ್ಲಾ ಒಟ್ಟಾಗಿ ತಮ್ಮ ರಾಸುಗಳಿಗೆ ಅದ್ಧೂರಿಯಾಗಿ ಅಲಂಕಾರ ಮಾಡಿ, ಕಿಚ್ಚು ಹಾಯಿಸು ವಾಗ ರವಿ, ಪುರುಷೋತ್ತಮ್ ಹಾಗೂ ಜೀವನ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದ್ದಾರೆ. ರವಿ ಹಾಗೂ ಪುರುಷೋತ್ತಮ್‍ಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದರೆ, ಜೀವನ್ ಸ್ಥಿತಿ ಗಂಭೀರವಾಗಿದೆ ಎಂದು ಕೆ.ಆರ್.ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ತಿ.ನರಸೀಪುರ: ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣದಲ್ಲಿ ಮಂಗಳವಾರ ಹಲವಾರು ರೈತರು ತಮ್ಮ ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಿ ದ್ದರು. ಈ ವೇಳೆ ಶಿವಕುಮಾರ್ ಎಂಬು ವರು ತಮ್ಮ ಸರದಿಯಲ್ಲಿ ಕಿಚ್ಚು ಹಾಯಿಸು ವಾಗ ಆಯತಪ್ಪಿ ಬೆಂಕಿಯಲ್ಲಿ ಬಿದ್ದು, ಸುಟ್ಟ ಗಾಯಗಳಾಗಿವೆ. ತಕ್ಷಣವೇ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಾಯ: ಇತ್ತ ಮಂಡ್ಯ ಜಿಲ್ಲೆಯಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವಾಗ ಜಿಲ್ಲಾದ್ಯಂತ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದ್ದೂರು ತಾಲೂಕಿನ ಚನ್ನೇಗೌಡನ ದೊಡ್ಡಿಯ ನಿವಾಸಿಗಳಾದ ಯುವರಾಜ್ (22), ಸಿದ್ದೇಶ್(23), ಪ್ರತಾಪ್ (21), ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಮಂಜು, ಪ್ರಸನ್ನ, ಪ್ರಸಾದ್, ರಾಜಾಹುಲಿ ಹಾಗೂ ಮಾಲಗಾರನಹಳ್ಳಿ ಗ್ರಾಮದ ಸಂಪತ್ ಕುಮಾರ್(34), ಸಿದ್ದೇಶ್(39), ಬನ್ನಳ್ಳಿಯ ಸಾಗರ್(29), ಶಿವಪುರದ ಸುನಿ(23), ಉಪ್ಪಿನಕೆರೆಯ ನಿಖಿಲ್‍ಗೌಡ(25) ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ, ಮದ್ದೂರು ತಾಲೂಕಿನ ಚನ್ನೇಗೌಡನ ದೊಡ್ಡಿಯ ಒಂದೇ ಕುಟುಂಬದ ಮೂವರು ಸೇರಿದಂತೆ ಜಿಲ್ಲಾದ್ಯಂತ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಸುಗಳನ್ನು ಕಿಚ್ಚು ಹಾಯಿಸುವ ವೇಳೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

Translate »