ನೂರಾರು ಯೋಗಪಟುಗಳಿಂದ ರಥಸಪ್ತಮಿಗಾಗಿ 108 ಸೂರ್ಯ ನಮಸ್ಕಾರ

ಮೈಸೂರು,ಫೆ.1(ಎಂಟಿವೈ)-ರಥಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವ ರಣದಲ್ಲಿ ಶನಿವಾರ ಬೆಳಿಗ್ಗೆ ಮೈಸೂರು ಯೋಗ ಒಕ್ಕೂಟ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದರು.

ಮೈಸೂರು ಯೋಗ ಒಕ್ಕೂಟದ 19ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಅಂಗ ವಾಗಿ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ನಗರದ ವಿವಿಧ ಯೋಗ ಶಾಲೆಗಳ ಯೋಗ ಪಟುಗಳು ಭಾಗಿಯಾದರು. ಶನಿವಾರ ಮುಂಜಾನೆ 5.15ಕ್ಕೆ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗಕ್ಕೆ ಆಗ ಮಿಸಿದ ಯೋಗಪಟುಗಳು ಮ್ಯಾಟ್ ಹಾಸಿ ಕೊಂಡು ಸೂರ್ಯ ನಮಸ್ಕಾರ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡರು. ಬೆಳಿಗ್ಗೆ 5.30ರಿಂದ ಸೂರ್ಯ ನಮಸ್ಕಾರ ಆರಂಭವಾಯಿತು.

ಪ್ರಾರ್ಥನೆ ಬಳಿಕ ಮಂತ್ರ ಪಠನೆಯೊಂ ದಿಗೆ 4 ಹಂತಗಳಲ್ಲಿ ಸೂರ್ಯ ನಮಸ್ಕಾರ ಪ್ರಕ್ರಿಯೆ ನಡೆಯಿತು. ಮೊದಲ ಹಂತದಲ್ಲಿ 30, 2ನೇ ಹಂತದಲ್ಲಿ 24, 3ನೇ ಹಂತ ದಲ್ಲಿ 30 ಹಾಗೂ 4ನೇ ಹಂತದಲ್ಲಿ 24 ಬಾರಿ ಸೂರ್ಯ ನಮಸ್ಕಾರ ಮಾಡಲಾಯಿತು. ಒಟ್ಟು 108 ಸೂರ್ಯ ನಮಸ್ಕಾರಗಳ ಪ್ರಕ್ರಿಯೆ ಬೆಳಿಗ್ಗೆ 7.30ರ ವೇಳೆಗೆ ಪೂರ್ಣ ಗೊಂಡಿತು. ಒಂದೊಂದು ಸೂರ್ಯ ನಮ ಸ್ಕಾರದಲ್ಲೂ 10 ಕೌಂಟ್ ಇದ್ದುದರಿಂದ ಒಟ್ಟು 1080 ಪ್ರದರ್ಶನ ಮಾಡಿದರು. ಒಕ್ಕೂಟದ ವತಿಯಿಂದ ನೀಡಿದ್ದ ಬಿಳಿ ಟಿ-ಶರ್ಟ್ ಧರಿಸಿದ್ದ ಮಕ್ಕಳು, ಯುವಕ -ಯುವತಿ, ಪುರುಷರು, ಮಹಿಳೆ ಯರು, ಹಿರಿಯ ನಾಗರಿಕರು ಸೇರಿ ದಂತೆ ಎಲ್ಲಾ ವಯೋಮಾನದವರೂ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು. ಪ್ರದರ್ಶನ ಮುಗಿದ ನಂತರ ಯೋಗಪಟುಗಳಿಗೆ ಪ್ರಸಾದ ರೂಪ ದಲ್ಲಿ ಸಿಹಿ-ಖಾರ ಪೊಂಗಲ್ ವಿತ ರಿಸಲಾಯಿತು.

ಯೋಗ ಫೆಡರೇಷನ್ ಆಫ್ ಮೈಸೂರು ಹಾಗೂ ಜಿಎಸ್‍ಎಸ್ ಫೌಂಡೇ ಷನ್ ಮುಖ್ಯಸ್ಥ ಶ್ರೀಹರಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜಯನಗರದ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಡಾ.ಭಾಷ್ಯಂ ಸ್ವಾಮೀಜಿ, ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಯೋಗಾಚಾರ್ಯ ಡಾ.ಬಿ.ಪಿ.ಮೂರ್ತಿ, ಗೌರವಾಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ. ಎಸ್.ಸೀತಾಲಕ್ಷ್ಮಿ, ಎಸ್‍ವಿಇಐ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪೋತರಾಜ್ ಸೇರಿದಂತೆ ಹಲವÀರು ಉಪಸ್ಥಿತರಿದ್ದರು.

ಸೂರ್ಯಯಜ್ಞ: ಸಾಮೂಹಿಕ ಸೂರ್ಯ ನಮಸ್ಕಾರ ಪೂರ್ಣಗೊಂಡ ನಂತರ ಎಲ್ಲಾ ಯೋಗಪಟುಗಳು ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಮುಂಭಾಗ ಅಲಂಕರಿಸಿಡಲಾಗಿದ್ದ ಆಂಜನೇಯಸ್ವಾಮಿ ಹಾಗೂ ಸೂರ್ಯದೇವನ ಉತ್ಸವ ಮೂರ್ತಿಯ ದರ್ಶನ ಪಡೆದರು. ಸಮೀಪದಲ್ಲೇ ನಡೆಸುತ್ತಿದ್ದ ಸೂರ್ಯ ಯಜ್ಞದಲ್ಲೂ ಪಾಲ್ಗೊಂಡು ನಮಿಸಿದರು.