ಹಿರಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ 13 ಮಂದಿ ನಿರ್ದೇಶಕರ ಆಯ್ಕೆ

ತಿ.ನರಸೀಪುರ, ಡಿ.30-ತಾಲೂಕಿನ ಹಿರಿಯೂರು ಹಾಲು ಉತ್ಪಾದಕರ ಸಹ ಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಗ್ರಾಪಂ ಹಾಲಿ ಅಧ್ಯಕ್ಷ ಚಂಡಿ ಪ್ರಕಾಶ್ ಬಣದ 13 ಮಂದಿ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಭಾನುವಾರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ರ್ನಿದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ 19ಮಂದಿ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ನಂಜುಂಡಶೆಟ್ಟಿ, ಸಿದ್ದಶೆಟ್ಟಿ, ಪುಟ್ಟ ನಂಜಮ್ಮ, ಸಿದ್ದಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಆನಂತರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಚಂಡಿ ಪ್ರಕಾಶ್ ಬಣದ ಮಹದೇವಸ್ವಾಮಿ, ಗುರುಸ್ವಾಮಿ, ವಿರೂಪಾಕ್ಷ, ಶಿವಕುಮಾರ್, ಹೆಚ್.ವಿ. ಮಹದೇವಸ್ವಾಮಿ, ಗೋವಿಂದಪ್ಪ, ಹೆಚ್.ವಿ.ಕುಮಾರಸ್ವಾಮಿ ನಾಗರಾಜು ಹಾಗೂ ಮರಿಮಾದನಾಯಕ ಹೆಚ್ಚಿನ ಮತಗಳಿಸಿ ಗೆಲುವಿನ ನಗೆ ಬೀರಿದರು. ಉಮೇಶ್, ಜಯಮ್ಮ, ನಾಗಪ್ಪ, ಬಸವ ರಾಜಪ್ಪ, ಮಹೇಶ್ ಹಾಗೂ ಬಸವರಾಜು ಅತೀ ಕಡಿಮೆ ಮತ ಪಡೆದು ಪರಾಭವ ಗೊಂಡರು. ಚುನಾವಣಾಧಿಕಾರಿ ಮಹೇಶ್ ಚುನಾವಣಾ ಪ್ರಕ್ರಿಯೆ ಕೈಗೊಂಡರು. ನಿರ್ದೇಶಕರುಗಳ ಆಯ್ಕೆ ಪ್ರಕಟಗೊಳ್ಳುತ್ತಿ ದ್ದಂತೆ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.

ಹಿರಿಯೂರು ಗ್ರಾಪಂ ಅಧ್ಯಕ್ಷ ಚಂಡಿ ಪ್ರಕಾಶ್, ಹಾಲು ಉತ್ಪಾದಕರ ಸಂಘದ ಹಾಲಿ ಅಧ್ಯಕ್ಷ ಹೆಚ್.ಎಸ್.ನಾಗಪ್ಪ, ಸದಸ್ಯ ಪುಟ್ಟಬುದ್ಧಿ, ಮುಖಂಡರಾದ ಹೆಚ್.ವಿ. ಗುರುಸ್ವಾಮಿ, ಸಿದ್ದಯ್ಯ, ಎ.ಎಂ.ಪ್ರಭು ಸ್ವಾಮಿ, ಜಯಶೇಖರಪ್ಪ, ಬಸವರಾಜು, ಸಂಘದ ಕಾರ್ಯದರ್ಶಿ ಚಂಡಿ ಶಿವ ಕುಮಾರ್ ಮತ್ತಿತರರಿದ್ದರು.