ಕೆರೆ ಒತ್ತುವರಿಗೆ 2 ವರ್ಷ ಜೈಲು, 20,000 ರೂ. ದಂಡ

ಮೈಸೂರು: ಕೆರೆ ಒತ್ತುವರಿ ಮಾಡುವವರಿಗೆ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 20,000 ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾಟೆ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ `ನ್ಯಾಯ ಸಂಯೋಗ’ ಕಾನೂನು ಸಹಾಯ ಘಟಕ ದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಕೆ-ಸ್ಟಾನ್ ಕೊಠಡಿಯಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅಂತರ್ಜಲ ವೃದ್ಧಿ, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು, ಪರಿಸರ ಸಂರಕ್ಷಣೆ ಸಲುವಾಗಿ ಕೆರೆ, ಸರೋವರಗಳನ್ನು ಸಂರಕ್ಷಿ ಸಬೇಕಾಗಿದೆ. ಅದರಲ್ಲಿ ಸರ್ಕಾರಿ ಅಧಿಕಾರಿ ಗಳು, ಸಂಘ-ಸಂಸ್ಥೆ, ಸಾರ್ವಜನಿಕರು ಪ್ರಮುಖ ಪಾತ್ರ ವಹಿಸಬೇಕಾಗಿದೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿದರೆ ಕನಿಷ್ಠ 6 ತಿಂಗಳು, ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರದಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿ ಕಾರ ಅಧಿನಿಯಮ 2014ರ ಪ್ರಕಾರ ಪ್ರತಿ ಜಿಲ್ಲೆಗಳಲ್ಲಿ ಕೆರೆ-ಸರೋವರಗಳ ಸಂರಕ್ಷಣೆ ಗಾಗಿ ಜಿಲ್ಲಾ ಕಾರ್ಯನಿರ್ವಹಣಾ ಪ್ರಾಧಿ ಕಾರ ರಚಿಸಬೇಕು, ಅದರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಾಧ್ಯಕ್ಷ ರಾಗಿದ್ದು, ವಿವಿಧ ಇಲಾಖೆ ಹಿರಿಯ ಅಧಿ ಕಾರಿಗಳು ಸದಸ್ಯರಾಗಿರುತ್ತಾರೆ ಎಂದೂ ಸಂಜೀವಕುಮಾರ್ ತಿಳಿಸಿದರು.

ಪ್ರಾಧಿಕಾರವು ಆಗಿಂದಾಗ್ಗೆ ಸಭೆ ನಡೆಸಿ ಕೆರೆ ಒತ್ತುವರಿ ದೂರುಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘಿಸಿದವರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕು. ತಕ್ಷಣವೇ ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಜವಾಬ್ದಾರರಾಗಿರುತ್ತಾರೆ ಎಂಬುದನ್ನೂ ಅವರು ತಿಳಿಸಿದರು.

ಕೆರೆ ಒತ್ತುವರಿಗೆ ಬಳಸಿದ ಸಾಧನ, ಸಲ ಕರಣೆ, ಯಂತ್ರೋಪಕರಣ, ದೋಣಿ ಅಥವಾ ಯಾವುದೇ ವಸ್ತುಗಳನ್ನು ವಶ ಪಡಿಸಿಕೊಳ್ಳಬಹುದಾಗಿದೆ. ಕೆರೆ, ಕಟ್ಟೆಗಳಿಗೆ ನೀರು ಹರಿದು ಬರುವ ಹಳ್ಳ, ತೊರೆ, ರಾಜಕಾಲುವೆಗಳನ್ನು ಮುಚ್ಚಿ ಬಂದ್ ಮಾಡುವುದು ಸಹ ಅಪರಾಧ. ಕೆರೆ ಒತ್ತುವರಿ ಬಗ್ಗೆ ದೂರು, ಮಾಹಿತಿ ನೀಡುವವರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಸಹಕರಿಸಬೇಕು.

ಜೀವಭಯವಿದೆ ಎನ್ನುವುದಾದರೆ ಮಾಹಿತಿದಾರನ ಹೆಸರನ್ನು ಗುಪ್ತವಾಗಿರಿಸಿ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೆರೆ ಒತ್ತುವರಿ ತೆರವುಗೊಳಿಸಿ, ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮವಹಿಸಬೇಕು ಎಂದೂ ಅವರು ನುಡಿದರು.

ಒತ್ತುವರಿ ಮಾಹಿತಿ ತಿಳಿದೂ ಕ್ರಮವಹಿ ಸದೇ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮವಹಿಸಲು ಪ್ರಾಧಿ ಕಾರಕ್ಕೆ ಸಂಪೂರ್ಣ ಅಧಿಕಾರವಿದೆ ಎಂದ ಹಂಚಾಟೆ ಅವರು, ಪ್ರತಿಯೊಬ್ಬರೂ ಕೆರೆ ಸಂರಕ್ಷಿಸುವಲ್ಲಿ ಮುಂದಾಗಬೇಕು ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಬೇಕೆಂದೂ ಕರೆ ನೀಡಿದರು. ಬೆಂಗಳೂರಲ್ಲಿ ಕಾನೂನು ಸೇವಾ ಪ್ರಾಧಿಕಾರದ ಉಪಾಧ್ಯಕ್ಷ ಜಯ ಪ್ರಕಾಶ, ಸಹಾಯಕ ಕಾರ್ಯದರ್ಶಿ ಅಮರ್ ಅವರು ಉಪಸ್ಥಿತರಿದ್ದರೆ, ಮೈಸೂ ರಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಬಿ.ಡಿ. ದೇವಮಾನೆ ಉಪಸ್ಥಿತರಿದ್ದರು.