ರಾಜ್ಯ ಸರ್ಕಾರದಿಂದ 2020ರ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ಸರ್ಕಾರ 2020 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಶುಕ್ರವಾರ ಪ್ರಕಟಗೊಂಡಿರುವ ಈ ಪಟ್ಟಿ 1881ರ ನೆಗೋಶಿ ಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಂತೆ ರಜಾ ದಿನಗಳ ನಿಗದಿ ಮಾಡಲಾಗಿದೆ.

ಪಟ್ಟಿಯಲ್ಲಿ ಇರುವ ರಜಾದಿನಗಳು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 18 ಸಾರ್ವಜನಿಕ ರಜಾ ದಿನಗಳಿವೆ. ಸೋಮವಾರ ಅಥವಾ ಶುಕ್ರವಾರದಂದು ಬರುವ 10 ರಜಾ ದಿನಗಳನ್ನು ಇದು ಹೊಂದಿರುವ ಕಾರಣ 2020ರಲ್ಲಿ ದೀರ್ಘ ವಾರಾಂತ್ಯವನ್ನು ನಿರೀಕ್ಷಿಸಲಾಗಿದೆ.
ಕರ್ನಾಟಕದ ರಜಾ ದಿನಗಳ ಪಟ್ಟಿ
ಜನವರಿ 15 (ಬುಧವಾರ) – ಮಕರ ಸಂಕ್ರಾಂತಿ
ಫೆಬ್ರವರಿ 21 (ಶುಕ್ರವಾರ) – ಶಿವರಾತ್ರಿ
ಮಾರ್ಚ್ 21 (ಬುಧವಾರ) – ಯುಗಾದಿ
ಏಪ್ರಿಲ್ 6 (ಸೋಮವಾರ) – ಮಹಾವೀರ ಜಯಂತಿ
ಏಪ್ರಿಲ್ 10 (ಶುಕ್ರವಾರ) – ಶುಭ ಶುಕ್ರವಾರ (ಗುಡ್ ಫ್ರೈಡೆ)
ಏಪ್ರಿಲ್ 14 (ಮಂಗಳವಾರ) – ಅಂಬೇಡ್ಕರ್ ಜಯಂತಿ
ಮೇ 1 (ಶುಕ್ರವಾರ) – ಮೇ ದಿನ
ಮೇ 25 (ಸೋಮವಾರ) – ಖುತ್ಬಾ-ಎ-ರಂಜಾನ್
ಆಗಸ್ಟ್ 1 (ಶನಿವಾರ) – ಬಕ್ರೀದ್
ಆಗಸ್ಟ್ 15 (ಶನಿವಾರ) – ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 15 (ಗುರುವಾರ) – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 (ಶುಕ್ರವಾರ) – ಗಾಂಧಿ ಜಯಂತಿ
ಅಕ್ಟೋಬರ್ 26 (ಸೋಮವಾರ) – ವಿಜಯದಶಮಿ
ಅಕ್ಟೋಬರ್ 30 (ಶುಕ್ರವಾರ) – ಈದ್ ಮಿಲಾದ್
ಅಕ್ಟೋಬರ್ 31 (ಶನಿವಾರ) – ವಾಲ್ಮೀಕಿ ಜಯಂತಿ
ನವೆಂಬರ್ 16 (ಸೋಮವಾರ) – ದೀಪಾವಳಿ
ಡಿಸೆಂಬರ್ 3 (ಗುರುವಾರ) – ಕನಕದಾಸ ಜಯಂತಿ
ಡಿಸೆಂಬರ್ 25 (ಶುಕ್ರವಾರ) – ಕ್ರಿಸ್‍ಮಸ್
ಇನ್ನು ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ (ಏಪ್ರಿಲ್ 26), ಮೊಹರಂ (ಆಗಸ್ಟ್ 8), ಮಹಾನವಮಿ, ಆಯುಧಪೂಜೆ (ಅಕ್ಟೋಬರ್ 26) ಮತ್ತು ಕನ್ನಡ ರಾಜ್ಯೋತ್ಸವ (ನವೆಂಬರ್ 1)ಗಳು ಭಾನುವಾರದಂದು ಇರಲಿದೆ. ನರಕ ಚತುರ್ದಶಿ (ನವೆಂಬರ್ 14) 2ನೇ ಶನಿವಾರ ಬಂದರೆ ಗಣೇಶ್ ಚತುರ್ಥಿ (ಆಗಸ್ಟ್ 22). 4ನೇ ಶನಿವಾರದಂದು ಬರಲಿದೆ. ಕೈಲ್ ಮುಹೂರ್ತ (ಸೆಪ್ಟೆಂಬರ್ 3), ತುಲಾ ಸಂಕ್ರಮಣ (ಅಕ್ಟೋಬರ್ 17) ಮತ್ತು ಹುತ್ತರಿ (ಡಿಸೆಂಬರ್ 1) ಗೆ ಕೊಡಗು ಜಿಲ್ಲೆಗೆ ಕರ್ನಾಟಕ ಸರ್ಕಾರ ಸ್ಥಳೀಯ ರಜಾದಿನವನ್ನು ಘೋಷಿಸಿದೆ. ಶಾಲೆಗಳು ಮತ್ತು ಕಾಲೇಜುಗಳಿಗೆ ಸರ್ಕಾರಿ ರಜಾದಿನಗಳ ಪ್ರತ್ಯೇಕ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಆಯುಕ್ತರು ಬಿಡುಗಡೆ ಮಾಡುತ್ತಾರೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.