ಕೊಡಗು ಜಿಲ್ಲೆಯಲ್ಲಿ ಶಂಕಿತ 24 ಎಚ್1 ಎನ್1 ಪ್ರಕರಣ ಪತ್ತೆ, 7 ಪ್ರಕರಣ ದೃಢ ರೋಗ ಹರಡದಂತೆ ಅರಿವು ಮೂಡಿಸಲು ಸೂಚನೆ

ಮಡಿಕೇರಿ: ಎಚ್1 ಎನ್ 1 ರೋಗ ಬಗ್ಗೆ ಹೆಚ್ಚಿನ ಅರಿವು ಮೂಡಿಸು ವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಚ್1 ಎನ್ 1 ರೋಗದ ಬಗ್ಗೆ ಅಲ್ಲಲ್ಲಿ ಮಾಹಿತಿ ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ವಿವಿಧ ಇಲಾಖೆಗಳ ಜೊತೆಗೂಡಿ ಆರೋಗ್ಯ ಶಿಕ್ಷಣ ಅರಿವು ಕಾರ್ಯಕ್ರಮ ಆಯೋಜಿಸು ವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಎಚ್1 ಎನ್1 ಸೇರಿದಂತೆ ಯಾವುದೇ ರೀತಿಯ ಖಾಯಿಲೆಗಳ ಸಂಬಂಧ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಮಾರ್ಗ ದರ್ಶನದಂತೆ ಔಷಧಿ ಪಡೆಯುವಂತಾಗ ಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿರ್ಧಾರ ಗಳನ್ನು ತೆಗೆದುಕೊಳ್ಳದಂತೆ ನಾಗರಿಕರಿಗೆ ಮಾಹಿತಿ ನೀಡುವಂತಾಗಬೇಕು ಎಂದರು.

ಯಾವುದೇ ರೋಗದಿಂದ ದೂರವಿರು ವಂತಾಗಲು ವೈಯಕ್ತಿಕ ಸ್ವಚ್ಛತೆ, ಸಮು ದಾಯ ಶುಚಿತ್ವ ಹಾಗೂ ಉತ್ತಮ ಪರಿಸರ ಅಗತ್ಯ. ಆ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಬಳಸುವುದು, ನೀರನ್ನು ಕುದಿಸಿ ಬಳಸು ವಂತಾಗಬೇಕು. ಹೀಗೆ ನಾನಾ ಮುನ್ನೆಚ್ಚರಿಕೆ ಗಳನ್ನು ವಹಿಸಬೇಕಿದೆ. ಆ ನಿಟ್ಟಿನಲ್ಲಿ ಮಾಹಿತಿ, ಮಾರ್ಗದರ್ಶನ ಮತ್ತು ಶಿಕ್ಷಣ ನೀಡ ಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕುಡಿಯುವ ನೀರಿನ ಟ್ಯಾಂಕ್, ಕುಡಿ ಯುವ ನೀರು ಪೂರೈಕೆ ಮಾಡುವ ಘಟಕ ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗ್ರಾ.ಪಂ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ನೀರಿನ ಟ್ಯಾಂಕನ್ನು ಎರಡು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿ.ಪಂ ಸಿಇಓ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ ಎಚ್1ಎನ್1 ರೋಗ ಹರಡ ದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದರು. ಎಚ್1ಎನ್1 ರೋಗ ಸೇರಿದಂತೆ ಯಾವುದೇ ರೀತಿಯ ಕಾಯಿಲೆಗಳ ಲಕ್ಷಣ ಕಂಡು ಬಂದಲ್ಲಿ ವಿಳಂಬ ಮಾಡದೆ ಪರಿ ಶೀಲಿಸಿ ಅಗತ್ಯ ಔಷಧಿ ಮತ್ತು ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ, ತಾಲೂಕು ಸಮುದಾಯ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳು ವಂತೆ ಸಿಇಒ ಕೆ.ಲಕ್ಷ್ಮಿಪ್ರಿಯ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಮಾಹಿತಿ ನೀಡಿ ಎಚ್1 ಎನ್1 ವೈರಸ್‍ನಿಂದ ಹರಡುವ ರೋಗವಾಗಿದೆ ಎಂದರು.

ಜಿಲ್ಲೆಯಲ್ಲಿ 24 ಶಂಕಿತ ಎಚ್1 ಎನ್ 1 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 7 ಪ್ರಕರಣಗಳು ದೃಢಪಟ್ಟಿವೆ. ಎಚ್1 ಎನ್1 ಸಂಬಂಧ ಆಸ್ಪತ್ರೆಗಳಲ್ಲಿ ಔಷಧಿ, ಮಾಸ್ಕ್, ಶಿರಾಫ್ ಮತ್ತಿತರ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಅವರು ತಿಳಿಸಿದರು. ಇನ್ನಷ್ಟು ಹೆಚ್ಚಿನ ಔಷಧಿ ತರಿಸಿಕೊಳ್ಳಲಾ ಗುವುದು ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 25 ಡೆಂಗ್ಯೂ, 6 ಚಿಕುನ್ ಗುನ್ಯಾ, 476 ಕರುಳು ಬೇನೆ, 27 ಕಾಮಾಲೆ, 734 ವಿಷಮ ಶೀತ ಜ್ವರ ಪ್ರಕರಣಗಳು ಕಂಡುಬಂದಿವೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಮೂಲಗಳ ಜೈವಿಕ ವಿಶ್ಲೇಷಣೆ ಸಂಬಂಧಿಸಿದಂತೆ 11,328 ಕಡೆ ಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, 10,118 ಕಡೆಗಳಲ್ಲಿ ಕುಡಿಯುವ ನೀರು ಯೋಗ್ಯ ವಾಗಿದೆ. 993 ಕಡೆಗಳಲ್ಲಿ ಕ್ಲೋರೀನೇಷನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ಜನ್ ಡಾ.ಜಗದೀಶ್ ಮಾತ ನಾಡಿ, ಎಚ್1 ಎನ್1 ಸೇರಿದಂತೆ ಹಲವು ರೋಗಗಳ ಔಷಧಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು. ಪೌರಾಯುಕ್ತ ಎಂ.ಎಲ್.ರಮೇಶ್ ಅವರು, ಸೊಳ್ಳೆ ರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್‍ಗಳನ್ನು ನಿರ್ಮಿ ಸಲು ಕ್ರಮ ವಹಿಸಲಾಗುವುದು. ವಾರ ಕ್ಕೊಮ್ಮೆ ಸೊಳ್ಳೆ ನಾಶಕ ದ್ರಾವಣವನ್ನು ಸಿಂಪಡಿಸಲಾಗುವುದು. ನೀರು ಸರಬರಾಜು ಮಾಡುವ ಮೊದಲು ಕ್ಲೋರಿನ್ ಹಾಕು ವುದು ಮತ್ತಿತರ ಕಾರ್ಯ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.
ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‍ಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‍ನ್ನು ಶುಚಿ ಗೊಳಿಸುವುದು, ಕೈಗಾರಿಕೆ ಘಟಕಗಳಲ್ಲಿ ಆರೋಗ್ಯ ಸಂಬಂಧ ಕಾರ್ಮಿಕರಲ್ಲಿ ಅರಿವು ಮೂಡಿಸುವುದು. ಪರಿಸರ ನೈರ್ಮಲ್ಯ ಮತ್ತಿತರ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ, ಸಿಡಿಪಿಒ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ಇತರರು ಇದ್ದರು.