3 ವರ್ಷವಾದರೂ ಉದ್ಘಾಟನೆಯಾಗದ ಯಾತ್ರಿ ನಿವಾಸ

ಅರಸೀಕೆರೆ- ದಕ್ಷಿಣ ಕರ್ನಾ ಟಕದಲ್ಲಿ ಚಿಕ್ಕ ತಿರುಪತಿ ಎಂದು ಪ್ರಸಿದ್ಧ ವಾದ ತಾಲೂಕಿನ ಅಮರಗಿರಿ ಮಲೇ ಕಲ್ ತಿರುಪತಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿ ರುವ ನೂತನ ಯಾತ್ರಿ ನಿವಾಸ ಹಾಗೂ ರಾಜಗೋಪುರ ಲೋಕಾರ್ಪಣೆಗೊಳ್ಳದೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಕ್ಷೇತ್ರದ ದೇವಾಲಯದ ರಾಜ ಗೋಪುರ ಉದ್ಯಮಿ ಅರುಣ್‍ಕುಮಾರ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡು 3 ವರ್ಷ ಕಳೆದಿದೆ. ಜೊತೆಗೆ, 2012ರ ಮೇ 12ರಂದು ದೇವಾಲಯದ ಸಮೀಪ ದಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಾ ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾ ಯಿತು. ಪ್ರಸ್ತುತ ಕಾಮಗಾರಿಯು ಬಹು ತೇಕ ಪೂರ್ಣಗೊಂಡಿದೆ. ಆದರೆ, ಇವು ಗಳನ್ನು ಉದ್ಘಾಟನೆ ಮಾಡದೇ ಪಾಳು ಮಾಡಲಾಗುತ್ತಿದ್ದು, ಈ ಸ್ಥಳ ಮದ್ಯವ್ಯಸನಿ ಗಳು ಮತ್ತು ಜೂಜುಕೋರರು ಸೇರಿದಂತೆ ಇನ್ನಿತರೆ ಅನೈತಿಕ ಚಟುವಟಿಕೆಗಳ ತಾಣ ವಾಗಿ ಬದಲಾಗುತ್ತಿದೆ.

75 ಲಕ್ಷ ವೆಚ್ಚದ ಕಟ್ಟಡ: ಭಕ್ತರ ಅನು ಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ದೇವಾಲಯದ ಬಳಿ ಐದು ವರ್ಷಗಳ ಹಿಂದೆ 75 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ ಇನ್ನೂ ಉದ್ಘಾಟನೆಯಾ ಗಿಲ್ಲ. ವಿಶಾಲವಾದ ಕೊಠಡಿ, 8 ಸುಸಜ್ಜಿತ ಕೊಠಡಿಗಳನ್ನು ಒಳಗೊಂಡಂತೆ ಯಾತ್ರಿ ನಿವಾಸ ನಿರ್ಮಿಸಲಾಗಿದ್ದು, ಅದನ್ನು ಭಕ್ತರ ಉಪಯೋಗಕ್ಕೆ ನೀಡಲು ಇನ್ನೂ ಶುಭ ಗಳಿಗೆ ಕೂಡಿಬಂದಿಲ್ಲ. ಯಾತ್ರಿ ನಿವಾಸದ ಆವರಣ ಮತ್ತು ಸುತ್ತಮುತ್ತ ಗಿಡ ಗಂಟಿ ಗಳು ಬೆಳೆದು ನಿಂತಿವೆ. ಕಟ್ಟಡದ ಸುಣ್ಣ-ಬಣ್ಣ ಮಾಸಿ ಹೋಗುತ್ತಿದೆ.

ಕಟ್ಟಡ ನಿರ್ಮಾಣವಾಗಿ 3 ವರ್ಷವಾ ದರೂ ಯಾತ್ರಿಗಳ ಉಪಯೋಗಕ್ಕೆ ನೀಡ ದಿರುವುದು. ಜಿಲ್ಲಾ ಮತ್ತು ತಾಲೂಕು ಆಡ ಳಿತ ಅಧಿಕಾರಿಗಳ ನಿರ್ಲಕ್ಷ್ಯದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ನಿರ್ಲಕ್ಷ್ಯವನ್ನು ಕಂಡೂ ಕಾಣದಂತೆ ಸ್ಥಳೀಯ ಜನಪ್ರತಿನಿಧಿಗಳು ವರ್ತಿಸುತ್ತಿ ದ್ದಾರೆ. ಪ್ರಚಾರಕ್ಕೆ ಮಾತ್ರ ಈ ಕ್ಷೇತದಲ್ಲಿ ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆ, ಭೂಮಿ ಪೂಜೆಗಳು ನಡೆಯುತ್ತಿರಬ ಹುದೇ ಎಂಬ ಅನುಮಾನಗಳು ಸಾರ್ವ ಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯದ ಜನತೆ ಈ ಕ್ಷೇತ್ರಕ್ಕೆ ಬಂದು ತಮ್ಮ ಸಕಲ ಕಷ್ಟಗಳನ್ನು ನಿವಾರಿಸಿ ಕೊಳ್ಳಲು ಪರಿಹಾರ ಕೊರಿ ಪ್ರಾರ್ಥನೆ ಸಲ್ಲಿಸುವುದು ಒಂದೆಡೆಯಾದರೆ, ತಾಲೂ ಕಿನ ವಿವಿಧ ಗ್ರಾಮಗಳು ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ಭಕ್ತ ವೃಂದವು ವರ್ಷ ವಿಡೀ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ಪ್ರಾರಂಭದಲ್ಲಿ ಕಾಳಜಿ ತೋರಿಸಿದ ಪ್ರವಾಸೋದ್ಯಮ ಇಲಾಖೆಯು ಕಟ್ಟಡ ನಿರ್ಮಾಣಗೊಂಡು ಮೂರು ವರ್ಷಗಳೇ ಕಳೆದಿದ್ದರೂ ಇದುವರೆಗೂ ದೇವಸ್ಥಾನ ಆಡಳಿತದ ಮುಜರಾಯಿ ಇಲಾಖೆ ಸ್ವಾಧೀನಕ್ಕೆ ನೀಡದೇ ಕಟ್ಟಡದ ಗುಣಮಟ್ಟ ಹಾಳು ಮಾಡುವ ಜೊತೆಗೆ, ಅನೈತಿಕ ತಾಣವಾಗಲು ನೇರ ಕಾರಣವಾಗಿದೆ.

ಮೂಲ ಸೌಲಭ್ಯಗಳಿಲ್ಲದೆ ಭಕ್ತರು ತೀವ್ರ ಸಮಸ್ಯೆ: ಶ್ರದ್ಧಾಕೇಂದ್ರವಾದ ಈ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ ಹಾಗೂ ಇತರೆಡೆಗಳಿಂದ ಭಕ್ತರು ಬರು ತ್ತಾರೆ. ಆದರೆ, ದೂರದಿಂದ ಬರುವ ಭಕ್ತ ರಿಗೆ ಸೂಕ್ತ ಶೌಚಾಲಯ, ಉಳಿದುಕೊ ಳ್ಳಲು ವಸತಿ ಸೌಲಭ್ಯವಿಲ್ಲ. ಹೀಗಾಗಿ, ಭಕ್ತರು ಪರದಾಡುವುದು ಸಾಮಾನ್ಯವಾಗಿದೆ.

ಪಾಳುಬಿದ್ದಂತೆ ಗೋಚರವಾಗುತ್ತಿರುವ ಯಾತ್ರಿ ನಿವಾಸ ಕಟ್ಟಡ ಇದ್ದರೂ, ಭಕ್ತರ ಉಪಯೋಗಕ್ಕೆ ಬಾರದೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದೇ ಭಕ್ತರು ಪರಿತಪಿಸುತ್ತಿ ದ್ದಾರೆ. ಶ್ರೀಕ್ಷೇತ್ರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ವಸತಿಗೃಹ ಮುಂಬರುವ ಜಾತ್ರ್ರಾ ಮಹೋತ್ಸವದ ಅವಧಿಯೊಳಗೆ ಲೋಕಾರ್ಪಣೆ ಆಗಲಿ ಎಂದು ಆಶಯ ವ್ಯಕ್ತಪಿಸಿದ್ದಾರೆ.

ಕಳಪೆ ಗುಣಮಟ್ಟದ ರಸ್ತೆ: ಶ್ರೀಕ್ಷೇತ್ರಕ್ಕೆ ಹುಳಿಯಾರ್ ರಸ್ತೆಯಿಂದ ಕಾಂಕ್ರೀಟ್ ರಸ್ತೆ ಮಾಡಿ 2 ವರ್ಷಗಳು ಕಳೆದಿದೆ. ಆದರೆ, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಈ ರಸ್ತೆಯು ಕಿತ್ತು ಬರುವುದರ ಮೂಲಕ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಹೆಚ್ಚಾಗಿ ಲಘು ವಾಹನಗಳೇ ಓಡಾಡುತ್ತಿದ್ದು, ಭಾರಿ ವಾಹನಗಳ ಸಂಚಾರ ಅತೀ ವಿರಳ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಾಂ ತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯು 2 ವರ್ಷದಲ್ಲಿ ಸಂಪೂರ್ಣ ಹದ ಗೆಟ್ಟಿದೆ. ಈ ರಸ್ತೆ ನಿರ್ವಹಣೆಗಾಗಿ ಮೀಸ ಲಾಗಿರುವ ಹಣ ವನ್ನು ಸದುಪಯೋಗ ಪಡಿಸಿ ಕೊಂಡು ದುರಸ್ತಿ ಮಾಡಿಸಬೇಕು ಅಥವಾ ಗುತ್ತಿಗೆದಾ ರರ ಕರ್ತವ್ಯ ಲೋಪಕ್ಕೆ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.

ಆನಂದ್ ಕೌಶಿಕ್.ಡಿ