ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 62 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 31 ಮಂದಿ ಅವಿರೋಧವಾಗಿ ಆಯ್ಕೆ ಯಾಗಿದ್ದು, ಉಳಿದ 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮೈಸೂರಿನ ಧನ್ವಂತರಿ ರಸ್ತೆಯ ಕರ್ನಾ ಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 9, ಮಹಾರಾಣಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ 9, ನಾರಾಯಣ ಶಾಸ್ತ್ರಿ ರಸ್ತೆಯ ಎನ್‍ಟಿಎಂಎಸ್ ಶಾಲೆಯಲ್ಲಿ 1 ಇಲಾಖೆ ಹಾಗೂ ನಜರ್‍ಬಾದಿನ ಡಿಹೆಚ್‍ಓ ಕಚೇರಿಯಲ್ಲಿ ಮೂರು ಇಲಾಖೆಗಳ ನೌಕರರು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಪ್ರಾಥಮಿಕ ಶಾಲೆಯಿಂದ 5 ನಿರ್ದೇಶಕ ಸ್ಥಾನ, ಪ್ರೌಢಶಾಲೆ, ನ್ಯಾಯಾಂಗ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ತಲಾ 2 ಸ್ಥಾನ ಸೇರಿದಂತೆ ಉಳಿದ ಇಲಾಖೆ ಗಳಿಂದ ತಲಾ 1 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಿತು. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ನೌಕರರು ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದರು.
26 ಇಲಾಖೆಗಳಿಂದ ಒಟ್ಟು 31 ನಿರ್ದೇ ಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, ಉಳಿದಂತೆ 22 ಇಲಾಖೆಯ 31 ನಿರ್ದೇ ಶಕ ಸ್ಥಾನಗಳಿಗೆ ಇಂದು ಮತದಾನ ನಡೆ ಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಹರೀಶ್ ಕುಮಾರ್ ಚುನಾವ ಣಾಧಿಕಾರಿ ಆಗಿ ಕಾರ್ಯನಿರ್ವಹಿಸಿದರು.
ಅವಿರೋಧ ಆಯ್ಕೆ: ಕೃಷಿ ಇಲಾಖೆಯ ಎಂ.ಪ್ರವೀಣ್, ಪಿ.ವಸಂತ್, ಕಂದಾಯ (ಅಭಿವೃದ್ಧಿ ಇಲಾಖೆಗಳನ್ನೊಳಗೊಂಡಂತೆ) ಮತ್ತು ಜಿಲ್ಲಾ ತರಬೇತಿ ಕೇಂದ್ರದ ಹೆಚ್.ಕೆ. ಬದ್ರಿ ನಾರಾಯಣ್, ಎಂ.ವಿ.ಭಾಸ್ಕರ್, ಟಿ.ಎನ್.ಲೋಕೇಶ್, ಆಹಾರ ಮತ್ತು ನಾಗ ರಿಕ ಸರಬರಾಜು ಇಲಾಖೆಯ ಹೆಚ್.ಕೆ. ರಾಮು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಕೆ.ಬಿ.ಪ್ರಭುಸ್ವಾಮಿ, ಜಿಪಂ ಇಂಜಿನಿಯರ್ ಡಿ.ಎಸ್.ಭರತ್, ನೀರಾವರಿ ಇಲಾಖೆಯ ಸಿ.ವೆಂಕಟೇಶ್, ಜಿಪಂನ ಎಂ.ಎಲ್.ವಿಶ್ವ ನಾಥ್, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಡಿ.ಹೆಚ್.ಪರಶುರಾಮ್, ಮೀನುಗಾರಿಕೆ ಇಲಾಖೆ ಹೆಚ್.ಎಸ್.ಭಾಸ್ಕರ್, ಅರಣ್ಯ ಇಲಾಖೆ ಎಂ.ಪುಟ್ಟಮಾದೇಗೌಡ, ವೈದ್ಯ ಕೀಯ ಶಿಕ್ಷಣ ಮತ್ತು ಜಿಲ್ಲಾ ಆಸ್ಪತ್ರೆಗಳು ಎನ್.ಉದಯಕುಮಾರ್, ಡಿ.ಆನಂದ್, ಎಂ.ಎಂ.ರತಿ, ಡಿ.ಸಿ.ಲೋಕೇಶ್, ವಾರ್ತಾ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಎಸ್. ಹೆಚ್.ನಿರ್ಮಲ, ಪ್ರವಾಸೋದ್ಯಮ ಮತ್ತು ಕಾವಾದ ಜಿ.ಕೆ.ಚಾಮೇಗೌಡ, ಯುವಜನ ಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬಿ.ಮಂಜುನಾಥ್, ಕರ್ನಾ ಟಕ ಸರ್ಕಾರ ವಿಮಾ ಇಲಾಖೆಯ ಹೆಚ್. ವಿ.ಮಂಗಳದೇವಿ, ಮಾರುಕಟ್ಟೆ ಮತ್ತು ಎಪಿ ಎಂಸಿಯ ಎಸ್.ಜಿ.ರಮೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟಿ.ವಿ.ಪುಷ್ಪ, ರಾಜ್ಯ ಲೆಕ್ಕಪತ್ರ ಇಲಾಖೆಯ ಡಿ.ಪಿ.ಕೃಷ್ಣ ಸ್ವಾಮಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಿ.ಎಸ್.ರಮೇಶ್‍ಕುಮಾರ್, ಎಸ್‍ಸಿಸಿ ಮತ್ತು ಕಾರಾಗೃಹ ಇಲಾಖೆಯ ಎಂ.ಎನ್. ಕುಮಾರ್, ಮುದ್ರಾಂಕ ಮತ್ತು ನೋಂದಣಿ ಹಾಗೂ ಸಣ್ಣ ಉಳಿತಾಯ ಇಲಾಖೆಯ ಪಿ.ಬಿ.ನವೀನ್ ಕುಮಾರ್, ಕಾರ್ಮಿಕ ಕಾರ್ಖಾನೆಗಳ ಮತ್ತು ಬಾಯ್ಲರ್‍ಗಳ ಇಲಾಖೆಯ ಎಸ್.ಶಶಿಧರ್, ನಗರ ಯೋಜನಾ ಮತ್ತು ನಗರಾಭಿವೃದ್ಧಿ ಇಲಾ ಖೆಯ ಜಿ.ಸುನೀತಾ, ಧಾರ್ಮಿಕ ದತ್ತಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಕೆ.ಎಂ.ಮಹದೇವಸ್ವಾಮಿ, ಇಎಸ್‍ಐ ಆಸ್ಪತ್ರೆಯ ಎಸ್.ಸೋಮಣ್ಣ.
ಚುನಾವಣೆ ಮೂಲಕ ಆಯ್ಕೆ: ಪಶು ಸಂಗೋಪನಾ ಇಲಾಖೆಯ ಆರ್.ಬಾಲ ಕೃಷ್ಣ (57 ಮತ), ವಾಣಿಜ್ಯ ತೆರಿಗೆ ಇಲಾಖೆಯ ಬಿ.ಟಿ.ಅಣ್ಣೇಗೌಡ(116), ಕೆ. ಯೋಗಾನಂದ(97), ಸಹಕಾರ ಇಲಾ ಖೆಯ ಹೆಚ್.ವಿ.ಭರತ್‍ಕುಮಾರ್(41), ಲೋಕೋಪಯೋಗಿ ಇಲಾಖೆಯ ರೇವಣ್ಣ(88), ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಕೆ.ಎಂ.ಮಂದಣ್ಣ(60), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂ.ಕೆ.ಶಶಿಶಂಕರ್(184), ಎಸ್.ಶ್ರೀಧರ್(146), ಜಿ.ಭೀಮಣ್ಣ(119), ತೋಟಗಾರಿಕಾ ಇಲಾಖೆಯ ಎಸ್. ಅಶೋಕ್(99), ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಎನ್.ಪಿ.ಅರ್ಕೇಶ್(14), ಪ್ರಾಥ ಮಿಕ ಶಾಲೆಗಳ ಇಲಾಖೆಯ ಎಸ್. ರಘು (747), ಸಿ.ವಿ.ಜಯರಾಂ(717), ರೇವಣ್ಣ (679), ಎನ್.ಸುರೇಶ್(672), ಎಂ.ಎನ್. ಅಕ್ಕಮ್ಮ(595), ಪ್ರೌಢಶಾಲೆಯ ಸಿ.ಬಿ. ಅರುಣ್‍ಕುಮಾರ್(368), ಸರ್ಕಾರಿ ಕಿರಿಯ ಕಾಲೇಜಿನ ಎ.ಎಲ್.ಉಮೇಶ್(127), ಪದವಿ ಕಾಲೇಜುಗಳು ಡಾ.ಎಂ.ಸಿ.ಶಿವ ಕುಮಾರ್(145), ತಾಂತ್ರಿಕ ಶಿಕ್ಷಣ ಇಲಾ ಖೆಯ ಹೆಚ್.ಎಂ.ಗಿರೀಶ್(43), ಮೋಟಾರು ವಾಹನ ಇಲಾಖೆ ಕೆ.ಬಿ.ರಮೇಶ್ (30), ಅಬಕಾರಿ ಇಲಾಖೆ ಪಿ.ರಾಘವೇಂದ್ರ (43), ಪ್ರೌಢಶಾಲೆಗಳ ಎಸ್.ಸೋಮಶೇಖರ್, ಪೊಲೀಸ್ ಆಡಳಿತ ಮತ್ತು ಗೃಹರಕ್ಷಕ ಇಲಾಖೆ ಪಿ.ಮಹೇಶ್‍ಕುಮಾರ್ (32), ರೇಷ್ಮೆ ಇಲಾಖೆ ವೈ.ಎ.ಶಿವಲಿಂಗಯ್ಯ (39), ಖಜಾನೆ ಇಲಾಖೆ ಆರ್.ಹೇಮಂತ್ ಕುಮಾರ್ (30), ಉದ್ಯೋಗ ಮತ್ತು ತರಬೇತಿ ಇಲಾಖೆ ಜೆ.ಗೋವಿಂದರಾಜು(82), ನ್ಯಾಯಾಂಗ ಇಲಾಖೆ ಟಿ.ಜಿ.ಶ್ರೀಪತಿ(196), ಕೆ.ಆರ್. ವರದರಾಜು(178), ಸರ್ಕಾರಿ ಮುದ್ರಣಾ ಲಯ ಮತ್ತು ಬಂದರು ಇಲಾಖೆ ಎನ್. ರಾಜು(107), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಸ್.ಕೆ. ಗಣೇಶ್(38) ಆಯ್ಕೆಯಾಗಿದ್ದಾರೆ.