ವಿವಿಧೋದ್ದೇಶ ಸಹಕಾರ ಸಂಘಕ್ಕೆ 9 ಲಕ್ಷ ಲಾಭ

ಸೋಮವಾರಪೇಟೆ: ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ರೂ.9 ಲಕ್ಷ ಲಾಭಗಳಿಸಲು ಸಹಕಾರಿಯಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ.ಶಿವಕುಮಾರ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ದರು. ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗುರುತಿಸಿದ್ದು, 2017-18ನೇ ಸಾಲಿನ ಆಡಿಟ್ ವರದಿಯಲ್ಲಿ ‘ಎ’ ದರ್ಜೆಯನ್ನು ಪಡೆದಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸವಲತ್ತು ನೀಡುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಸಂಘದಲ್ಲಿ ಹೆಚ್ಚಿನ ಮೊತ್ತವನ್ನು ಸಾಲವಾರಿ ಭದ್ರತೆಯಿಲ್ಲದೆ ನೀಡುತ್ತಿರುವುದರಿಂದ ರೂ. ಒಂದು ಲಕ್ಷದ ವರೆಗಿನ ಸಾಲದ ಮೇಲೆ ವಿಮೆ ಮಾಡಿಸಲು ಚಿಂತನೆ ನಡೆಸಲಾಗಿದೆ. ಈಗಾ ಗಲೇ ಅದಕ್ಕಾಗಿ ರೂ. 2ಲಕ್ಷ ಹಣವನ್ನು ಸಂಗ್ರಹಿಸಲಾಗಿದೆ.

ಸಾಲಗಾರರು ಮೃತ ಪಟ್ಟಾಗ ಮತ್ತು ಸಾಲ ಮರುಪಾವತಿಸಲು ಸಾಧ್ಯವಾಗದ ಸಂದರ್ಭ ಈ ನಿಧಿಯನ್ನು ಬಳಸಿಕೊಳ್ಳಬಹುದು. ಸಂಘದ ಕಟ್ಟಡ ಕೃಷಿ ಪತ್ತಿನ ಸಹಾಕಾರ ಸಂಘದೊಂದಿಗೆ ಜಂಟಿ ಯಾಗಿ ನಿರ್ಮಿಸಲಾಗಿದೆ. ಮುೂರನೇ ಅಂತಸ್ಥಿನಲ್ಲಿ ಸುಮರು ರೂ.36 ಲಕ್ಷದ ಸಭಾಂಗಣ ನಿರ್ಮಿಸುವ ಯೋಜನೆಯಿದ್ದು, ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ಮಾತುಕತೆ ನಡೆದಿದೆ.
ಸದಸ್ಯರಿಗೆ ಈಗಾಗಲೇ ಹಿಂದಿನ ಸಾಲಿನಲ್ಲಿ ಮರಣ ನಿಧಿ ಯೋಜನೆ ಜಾರಿಗೆ ತಂದಿದ್ದು, 65 ವರ್ಷ ಮೇಲ್ಪಟ್ಟ ಹಲವು ಸದಸ್ಯರು ಇದರಲ್ಲಿ ನೋಂದಾಯಿಸಿಕೊಂಡಿಲ್ಲ. ಅಂತಹ ಸದಸ್ಯರು ಡಿಸೆಂಬರ್ 30ರೊಳಗೆ ಮರಣ ನಿಧಿಯನ್ನು ಪಾವತಿಸಿ ತಮ್ಮ ಸದಸ್ಯತ್ವವನ್ನು ಮುಂದುವರೆಸುವಂತೆ ಮನವಿ ಮಾಡಿದರು.

ಸಂಘ ಇಲ್ಲಿಯವರೆಗೆಗೆ ಯಾವುದೇ ಲಾಭಾಂಶ ವಿತರಿಸದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ. 10ರಷ್ಟು ಲಾಭಾಂಶ ನೀಡಲು ತೀರ್ಮಾನಿಸಿತ್ತು. ಆದರೆ, ಮುಂಗಾರು ಮಳೆಯಿಂದಾದ ಹಾನಿಗೆ ಲಾಭಾಂಶದಲ್ಲಿ ಶೇ. 5ರಷ್ಟನ್ನು ದೇಣಿಗೆ ನೀಡಲು ಸದಸ್ಯರು ಸೂಚಿಸಿ ದರು. ಸಂಘದ ಸದಸ್ಯರಿಗೆ ನೀಡುತ್ತಿರುವ ಸಾಲಕ್ಕೆ ಹೆಚ್ಚಿನ ಭದ್ರತೆ ನೀಡುವ ನಿಟ್ಟಿನಲ್ಲಿ ಒಂದು ಲಕ್ಷದವರೆಗಿನ ಸಾಲಕ್ಕೆ ಶೇ. 2ರಷ್ಟು ವಿಮೆ ಮಾಡಿಸುವಂತೆ ಸಭೆ ತೀರ್ಮಾನಿಸಿತು.

ವೇದಿಕೆಯಲ್ಲಿ ಸಂಘದ ಸದಸ್ಯರಾದ ಎಚ್.ಕೆ. ಮಾದಪ್ಪ, ವರಲಕ್ಷ್ಮೀ ಸಿದ್ದೇಶ್ವರ್, ಎಂ.ಶೋಭಾ ಶಿವರಾಜ್, ಬಿ.ಶಿವಪ್ಪ, ಶ್ರೀಕಾಂತ್, ಕೆ.ಬಿ.ಸುರೇಶ್, ಎಂ.ಸಿ.ರಾಘವ, ಬಿ.ಡಿ.ಮಂಜು ನಾಥ್, ಬಿ.ಆರ್. ಮೃತ್ಯಂಜಯ, ಎಚ್.ಎಸ್. ವೆಂಕಪ್ಪ, ಎನ್.ಟಿ. ಪರಮೇಶ್, ಕೆ.ಬಿ.ದಿವ್ಯ ಉಪಸ್ಥಿತರಿದ್ದರು.