ಉದಯಗಿರಿ ಸರಹದ್ದಿನಲ್ಲಿ ದಾಖಲೆ ಇಲ್ಲದ 66 ವಾಹನ ಜಪ್ತಿ

ಮೈಸೂರು: ಮೈಸೂರಿನ ಉದಯಗಿರಿ ಸರಹದ್ದಿನಲ್ಲಿ ಗುರುವಾರ ಸಂಚಾರಿ ಪೊಲೀಸರು ನಡೆ ಸಿದ ವಾಹನ ತಪಾಸಣಾ ವಿಶೇಷ ಕಾರ್ಯಾ ಚರಣೆಯಲ್ಲಿ 66 ದಾಖಲೆಯಿಲ್ಲದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಐದು ಸಂಚಾರಿ ಪೊಲೀಸ್ ಠಾಣೆಗಳ ಇನ್ಸ್‍ಪೆಕ್ಟರ್, 10 ಸಬ್ ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಎಎಸ್‍ಐ ಹಾಗೂ ಮುಖ್ಯಪೇದೆಗಳು ಏಕಕಾಲಕ್ಕೆ ಉದಯ ಗಿರಿಯ 13 ಪಾಯಿಂಟ್‍ಗಳಲ್ಲಿ ಗುರು ವಾರ ಬೆಳಿಗ್ಗೆ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಿದರು.

ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಮಾರ್ಗದರ್ಶನ ದಲ್ಲಿ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೂರಾರು ವಾಹನ ತಪಾಸಣೆ ಮಾಡಲಾಯಿತು.
ಈ ವೇಳೆ ದಾಖಲೆಗಳು ಹಾಗೂ ವಿಮೆ ಇಲ್ಲದ 42 ಆಟೋರಿಕ್ಷಾ, 22 ಮೋಟಾರ್ ಸೈಕಲ್, 1 ಒಮಿನಿ ಮತ್ತು 1 ಕಾರನ್ನು ಪೊಲೀ ಸರು ವಶಕ್ಕೆ ಪಡೆದಿದ್ದು, ಮೂಲ ದಾಖಲೆ ಹಾಜರುಪಡಿಸಿ ವಾಹನಗಳನ್ನು ಬಿಡಿಸಿ ಕೊಂಡು ಹೋಗುವಂತೆ ಸೂಚಿಸ ಲಾಯಿತು. ಗುರುವಾರ ನಡೆದ ತಪಾಸಣೆ ಯಲ್ಲಿ ನಾಲ್ಕು ಚಕ್ರದ ವಾಹನಗಳ ದಾಖಲೆಯನ್ನೂ ಪರಿಶೀಲಿಸಲಾಯಿತು. ಮುಂದಿನ ದಿನಗಳಲ್ಲಿ ವಾಹನಗಳ ದಾಖ ಲಾತಿ ಪರಿಶೀಲಿಸುವ ವಿಶೇಷ ಅಭಿ ಯಾನವನ್ನು ಮತ್ತಷ್ಟು ಚುರುಕುಗೊಳಿ ಸಲು ಪೊಲೀಸರು ನಿರ್ಧರಿಸಿದ್ದು, ಬಡಾ ವಣೆವಾರು ತಪಾಸಣೆ ಕೈಗೊಂಡು ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿ ಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದಾರೆ.