ಪಾಂಡವಪುರದಲ್ಲೂ ಸಂಪೂರ್ಣ ಬಂದ್

ಪಾಂಡವಪುರ, ಏ.28- ಜನತಾ ಕಫ್ರ್ಯೂ ಹಿನ್ನೆಲೆ ಪಾಂಡವಪುರ ಪಟ್ಟಣದಲ್ಲಿ ಸಂಪೂರ್ಣ ಬಂದ್ ಆಗಿದ್ದು, ರಸ್ತೆಯಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.

ಪಾಂಡವಪುರ ಪಟ್ಟಣದಲ್ಲಿ ಸಬ್‍ಇನ್ಸ್ ಪೆಕ್ಟರ್ ಪೂಜಾಕುಂಟೋಜಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಒಗ್ಗೂಡಿ ಕಾರ್ಯಾ ಚರಣೆ ನಡೆಸಿ, ತೆರೆದಿದ್ದ ಕೆಲ ಅಂಗಡಿಗಳನ್ನು ಮುಚ್ಚಿಸಿದರು.

ಪಾಂಡವಪುರ ಪಟ್ಟಣದ ಎನ್.ಎಂ. ರಸ್ತೆ, ಪುರಸಭೆ ರಸ್ತೆ, ಪೊಲೀಸ್ ಠಾಣೆ ರಸ್ತೆ, ಐದು ದೀಪ ವೃತ್ತ ಸೇರಿದಂತೆ ಪಟ್ಟಣ ದಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಪಟ್ಟಣದ ಸಂತೆ ಮೈದಾನದಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಅಂಗಡಿಗಳನ್ನು ತೆರೆದು ಮಾರಾಟ ಮಾಡಲಾಗುತ್ತಿತ್ತು. ಕೊರೊನಾ ನಿಯಮ ಪಾಲಿಸದಿರುವ ಅಂಗಡಿ ಮಾಲೀಕರಿಗೆ ಪೊಲೀಸರು ಕೊರೊನಾ ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿದರು.

ತಾಲೂಕಿನ ಜಕ್ಕನಹಳ್ಳಿ ಹಾಗೂ ಚಿನಕುರಳಿ ಗ್ರಾಮದಲ್ಲಿರುವ ಎಲ್ಲ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಜಕ್ಕನಹಳ್ಳಿ ವೃತ್ತ ಬಿಕೋ ಎನ್ನುತ್ತಿತ್ತು. ಪಾಂಡವ ಪುರ ಬಸ್ ನಿಲ್ದಾಣದಲ್ಲಿ ಜನವಿಲ್ಲದ ಖಾಲಿ ಖಾಲಿಯಾಗಿತ್ತು. ಪಾಂಡವಪುರ ತಾಲೂಕಿ ನಲ್ಲಿ ಬುಧವಾರ 67 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ತಾಲೂಕಿನಾ ದ್ಯಂತ ಇಲ್ಲಿಯತನಕ 522 ಕೊರೊನಾ ಸೋಂಕಿತರ ಸಂಖ್ಯೆ ದಾಖಲಾಗಿದೆ. ದಿನ ದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಭಯದ ವಾತಾವರಣ ಸೃಷ್ಟಿಯಾಗಿದೆ.

ಪಾಂಡವಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕೆಲ ಕೊರೊನಾ ಸೋಂಕಿತರ ಆರೋಗ್ಯದಲ್ಲಿ ಏರುಪೇರು ಹಾಗೂ ಉಸಿರಾಟ ತೊಂದರೆ ಉಂಟಾದ ಕಾರಣ ಮಂಡ್ಯ ಮಿಮ್ಸ್ ಹಾಗೂ ಮೈಸೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಪಟ್ಟಣದ ಮಿನಿ ವಿಧಾನಸೌಧ, ಸೆಸ್ಕ್ ಕಚೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಎಸ್‍ಬಿಐ ಬ್ಯಾಂಕ್ ಸೇರಿದಂತೆ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿತ್ತು.