ಎ.ಡಿವಿಜನ್ ಹಾಕಿ ಲೀಗ್: ಬೊಟ್ಯತ್ನಾಡ್ ಚಾಂಪಿಯನ್

ಗೋಣಿಕೊಪ್ಪ, ಡಿ.10- ಹಾಕಿಕೂರ್ಗ್ ಸಹಯೋಗದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋ ಜಿಸಿದ್ದ ಪುರುಷರ ಎ.ಡಿವಿಜನ್ ಹಾಕಿ ಲೀಗ್‍ನ ಚಾಂಪಿಯನ್ ಆಗಿ ಬೊಟ್ಯ ತ್ನಾಡ್ ತಂಡ ಹೊರಹೊಮ್ಮಿದೆ.

ಮಂಗಳವಾರ ನಡೆದ ಫೈನಲ್‍ನಲ್ಲಿ ಸೋಲನುಭವಿಸಿದ ನಾಪೋಕ್ಲು ಶಿವಾಜಿ ತಂಡವು ರನ್ನರ್ ಅಪ್ ಸ್ಥಾನದ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿತು.

ಪಂದ್ಯದ ಅವಧಿಯಲ್ಲಿ 3-3 ಗೋಲು ಗಳ ಮೂಲಕ ಟೈ ಫಲಿತಾಂಶ ನೀಡಿತು. ಬೊಟ್ಯತ್ನಾಡ್ ಪರ 5ನೇ ನಿಮಿಷ, ಹಾಗೂ 38ನೇ ನಿಮಿಷದಲ್ಲಿ(ಪಿ.ಸಿ) ಅವಕಾಶವನ್ನು ಬೋಪಣ್ಣ ಗೋಲಾಗಿ ಪರಿವರ್ತಿಸಿದರು. 44ನೇ ನಿಮಿಷದಲ್ಲಿ ಪ್ರಸಾದ್, ಶಿವಾಜಿ ಪರ 19ನೇ ನಿಮಿಷದಲ್ಲಿ (ಪಿ.ಸಿ) ಹಾಗೂ 36ನೇ ನಿಮಿಷದಲ್ಲಿ ಶುಭಂ, 55ನೇ ನಿಮಿಷ ದಲ್ಲಿ ಪುನೀತ್ ಗೋಲು ಹೊಡೆದರು.

ರೋಚಕ ಹಣಾಹಣಿಯಲ್ಲಿ ಉಭಯ ತಂಡಗಳು ತೀವ್ರ ಹೋರಾಟದ ನಡು ವೆಯೂ ಶೂಟೌಟ್ ಮೂಲಕ 6-3 ಗೋಲುಗಳ ಅಂತರದಿಂದ ಬೊಟ್ಯತ್ನಾಡ್ ತಂಡವು ಜಯ ಗಳಿಸಿ ಸಾಧನೆ ಮಾಡಿತು.

ಬೊಟ್ಯತ್ನಾಡ್ ಪರ ಉತ್ತಮ ಆಟ ಪ್ರದ ರ್ಶಿಸಿದ ಮೂಕಚಂಡ ಬೋಪಣ್ಣ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಉತ್ತಮ ಆಟಗಾರರಾಗಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಆಟಗಾರರಾದ ಗೌರವ್, ದೃವಿನ್, ಚಾರ್ಮರ್ಸ್ ತಂಡದ ಆಲನ್, ನಾಪೋಕ್ಲು ಶಿವಾಜಿ ತಂಡದ ವಿನಾಯಕ ಪ್ರಶಸ್ತಿ ಪಡೆದರು.

ಟೂರ್ನಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ತೀರ್ಪುಗಾರರಾಗಿ ಬೊಳ್ಳಚಂಡ ನಾಣಯ್ಯ, ಕೋಡಿಮಣಿಯಂಡ ಗಣಪತಿ, ತಾಂತ್ರಿಕ ನಿರ್ವಾಹಕರಾಗಿ ಸುಳ್ಳಿಮಾಡ ಸುಬ್ಬಯ್ಯ, ವೀಕ್ಷಕ ವಿವರಣೆ ಗಾರರಾಗಿ ಚೆಪ್ಪುಡೀರ ಕಾರ್ಯಪ್ಪ ಕಾರ್ಯನಿರ್ವಹಿಸಿದರು.

ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಉಪಾಧ್ಯಕ್ಷ ಪಳಂಗಂಡ ಲವಕುಮಾರ್, ಜಂಟಿ ಕಾರ್ಯದರ್ಶಿ ಕಂಬೀರಂಡ ದಿವ್ಯಾ ಮುತ್ತಪ್ಪ, ಸಂಘಟನಾ ಕಾರ್ಯದರ್ಶಿ ಕುಪ್ಪಂಡ ದಿಲನ್, ದಾನಿಯಾದ ಗುಮ್ಮ ಟ್ಟೀರ ಕಿಲನ್ ಗಣಪತಿ, ಕಾಟಿಮಾಡ ರಾಜಪ್ಪ, ವೀಣಾ ಉಪಸ್ಥಿತರಿದ್ದರು.