ಮೈಸೂರು: ಮಗಳೊಂದಿಗೆ ತವರಿಗೆ ತೆರಳಿದ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ವ್ಯಕ್ತಿಯೋರ್ವರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನನ್ನ ಪತ್ನಿ ಭುವನೇಶ್ವರಿ(43) ಅವರು ಮಗಳು ಸಿ. ಲಕ್ಷಿತಾ(13) ಜೊತೆ ಬೇಸಿಗೆ ರಜೆಗಾಗಿ ಅವರ ತವರೂರಾದ ಮಂಡ್ಯಗೆ ಏ. 7 ರಂದು ತೆರಳಿದ್ದರು. ಏ. 28 ರಂದು ತಾನು ಬೇಗ ಮನೆಗೆ ಬಾ ಎಂದು ಪತ್ನಿಗೆ ಮೊಬೈಲ್ ಸಂದೇಶ ರವಾನಿಸಿದಾಗ ಆಕೆ ಪ್ರವಾಸದಲ್ಲಿರುವುದಾಗಿ ಪ್ರತಿಕ್ರಿಯಿಸಿ ದರು. ನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾನು ಪತ್ನಿಯ ತವರು ಮನೆಗೆ ತೆರಳಿ ವಿಚಾರಿಸಿದಾಗ ಆಕೆ ಮಗಳೊಂ ದಿಗೆ ಏ.25 ರಂದೇ ಮೈಸೂರಿಗೆ ಹೋಗುವುದಾಗಿ ತಿಳಿಸಿ ತೆರಳಿ ದ್ದಾಳೆ ಎಂಬುದು ತಿಳಿಯಿತು. ಆದರೆ ಈವರೆವಿಗೂ ತನ್ನ ಪತ್ನಿ ಮತ್ತು ಮಗಳು ಮನೆಗೆ ವಾಪಸ್ಸಾಗಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ತಾಯಿ ಮತ್ತು ಮಗಳ ಬಗ್ಗೆ ಮಾಹಿತಿ ಇರುವವರು ಕುವೆಂಪುನಗರ ಪೊಲೀಸ್ ಠಾಣೆ ದೂ.ಸಂ. 0821-2418324 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.