ಮೈಸೂರಲ್ಲಿ ರಾಗಾರೋಗ್ಯ ಸಂಗೀತ ಸಂಜೆ

ಮೈಸೂರು,ಜು.28(ವೈಡಿಎಸ್)- ಜಯಚಾಮರಾಜ ಒಡೆಯರ್ ಅವರು ಮಹಾರಾಜರಾಗದಿದ್ದರೆ ಕಾನ್ಸೆಟ್ ಪಿಯಾ ನಿಸ್ಟ್ ಆಗುತ್ತಿದ್ದರು ಎಂದು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಕಲಾಮಂದಿರದಲ್ಲಿ ಉನ್ನತಿ ಸಂಸ್ಥೆ ಭಾನುವಾರ ಆಯೋಜಿಸಿದ್ದ `ರಾಗಾರೋಗ್ಯ’ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಜ ಜಯಚಾಮರಾಜೇಂದ್ರ ಅವರು ಸಂಗೀತಗಾರರಾಗಿದ್ದು, ಕರ್ನಾ ಟಕ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಿ ಮಾತ್ಯ ಶಾಸ್ತ್ರೀಯ ಸಂಗೀತ ಬೆಳೆಯಲು ಅಪಾರ ಕೊಡುಗೆ`  ನೀಡಿದ್ದಾರೆ. ಈ ವೇಳೆ ಅವರನ್ನು ಸ್ಮರಿಸಬೇಕು ಎಂದರು.

ಅಂದು ಅರಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಸಂಗೀತ ಇಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆಯು ತ್ತಿರಲಿಲ್ಲ. ಸಂಗೀತದ ವಾತಾವರಣದಲ್ಲೇ ಒಡೆಯರ್ ಬೆಳೆದರು. ಅವರು ಪಿಯಾ ನೋದಲ್ಲಿ ಮೊದಲು ಸಂಗೀತ ಅಭ್ಯಾಸ ಮಾಡಿದರು. ಅವರ ಜನ್ಮ ದಿನೋತ್ಸವ ಪ್ರಯುಕ್ತ ನಡೆಸಿದ ಸಂಶೋಧನೆ ವೇಳೆ `ಅವರು ಪಿಯಾನೋ ಕಲಿಯಲು ಬಹಳ ಆಸಕ್ತಿ ಹೊಂದಿದ್ದರು ಎಂಬುದು ತಿಳಿ ಯಿತು. ಅವರು ಹಲವು ರಾಗಗಳ ಸಂಯೋಜನೆ ಮಾಡಿದ್ದಾರೆ ಎಂದರು.

ಸಂಗೀತ ಶಿಕ್ಷಕರು ಜಯಚಾಮರಾಜ ಒಡೆಯರ್‍ರವರ ಅರಮನೆಗೆ ಬಂದು ಪಿಯಾನೋ ಹೇಳಿಕೊಡುತ್ತಿದ್ದರು. ಅವರು ಮಹಾರಾಜರ ಪದವಿ ಸ್ವೀಕರಿಸದಿದ್ದರೆ ಕಾನ್ಸೆಟ್ ಪಿಯಾನಿಸ್ಟ್ ಆಗುತ್ತಿದ್ದರು. ಆ ಆಸೆ ಅವರಲ್ಲಿತ್ತು ಎಂದು ಹೇಳಿದರು. ಉದ್ಘಾಟನೆ ಕಾರ್ಯಕ್ರಮದ ನಂತರ ಡಾ.ಖಾದರ್ ವಲ್ಲಿ ಹಾಗೂ ಗಾಯಕ ಹರ್ಷ ರಾಗಾರೋಗ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಈ ವೇಳೆ ಮಾತನಾಡಿದ ಡಾ.ಖಾದರ್, ಸಂಗೀತದಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ, ಆಧುನಿಕ ಜೀವನ ಶೈಲಿಯಿಂದ ಒತ್ತಡ, ಖಿನ್ನತೆ, ಅನುಮಾನ ಪಡುವುದು, ನಮ್ಮ ಬಗ್ಗೆ ಬೇರೆಯವರು ಏನು ಊಹಿಸಿಕೊಳ್ಳುತ್ತಾರೆ ಎಂಬಿತ್ಯಾದಿ ಮನೋಭಾವ ಹೆಚ್ಚಾಗುತ್ತಿದ್ದು, ಆಧುನಿಕ ಜೀವನ ಮೆಂಟಲಿ ಡಿಪ್ರೆಸ್ ಎನ್ನು ವಂತಾಗಿದೆ. ಇದಕ್ಕೆಲ್ಲ ನಾವು ಸೇವಿಸುತ್ತಿ ರುವ ಆಹಾರ ಪದಾರ್ಥಗಳು ಕಾರಣ. ಥಾಮಸ್ ಮತ್ತು ರಾಜಸ್ ಗುಣವುಳ್ಳ ಕಾಫಿ, ಸಕ್ಕರೆ, ಮಾಂಸ, ಮೊಟ್ಟ ಮತ್ತಿತರೆ ಪದಾರ್ಥಗಳು ನಮ್ಮ ದೇಹಕ್ಕೆ ಥಾಮಸ್ ಮತ್ತು ರಜಸ್ ಗುಣಗಳನ್ನು ಅಂಟಿಸು ತ್ತಿವೆ. ಹಾಗಾಗಿ ಮಾನಸಿಕ ನೆಮ್ಮದಿ ಇಲ್ಲವಾಗಿದೆ ಎಂದರು.

ಹಾಗಾಗಿ ಸಾತ್ವಿಕ ಆಹಾರ ಪದಾರ್ಥ ಗಳನ್ನು ಸೇವಿಸುವ ಮೂಲಕ ಮಾನಸಿಕ ನೆಮ್ಮದಿ ಮರುಕಳಿಸಿಕೊಳ್ಳಬಹುದು. ಆರಿಶಿಣ, ಬಾಳೇಕಾಯಿ ಕಷಾಯವನ್ನು ಖಾಲಿ ಹೊಟ್ಟಿಗೆ ಸೇವಿಸು ವುದರಿಂದ ಥಾಮಸ್ ಮತ್ತು ರಜಸ್ ಗುಣಗಳಿಂದ ಹೊರ ಬರಬಹುದು ಎಂದು ಸಲಹೆ ನೀಡಿದರು.

ಉತ್ತೇಜನ ಪಡೆಯಲು ಕೆಫಿನ್ ಅಂಶ ವಿರುವ ಕಾಫಿ, ಟೀ ಸೇವಿಸುತ್ತಿದ್ದು, ಅದು ದೇಹದೊಳಗೆ ಹೋದ ತಕ್ಷಣವೇ ರಿಯಾಕ್ಷನ್ ನೀಡುತ್ತವೆ. ನಂತರದಲ್ಲಿ ನಿಮ್ಮ ನರಗಳ ಶಕ್ತಿ ಕಡಿಮೆಯಾಗಿ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೀರಿ. ಆಧುನಿಕ ಕೃಷಿ ಪದ್ದತಿಯಿಂದ ತಯಾರಾದ ಪದಾರ್ಥ ಗಳ ಬಳಕೆ ಹೆಚ್ಚಾಗುತ್ತಿದ್ದು, ಸಹಜ ಪದಾರ್ಥಗಳು ಕಣ್ಮರೆಯಾಗುತ್ತಿವೆ. ಸಹಜ ಪದಾರ್ಥಗಳಾದ ಎಳ್ಳು, ಪಪ್ಪಾಯಿ ಹಣ್ಣು, ಸಪೋಟ, ಸೀಬೆ, ಸೀತಾಪಲ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿ ಸಿಗಲಿದೆ ಎಂದು ತಿಳಿಸಿದರು. ಇದರ ನಂತರ ಗಾಯಕ ಶ್ರೀಹರ್ಷ ಅವರು `ಬಾಗಿಲನು ತೆರದು ಸೇವೆಯನ್ನು ಕೊಡು ಹರಿಯೆ’ ಎಂಬ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಇಂಧೋಳ ರಾಗದಲ್ಲಿ ತ್ಯಾಗರಾಜರ ಕೃತಿಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.