ಮನೆ, ನಿವೇಶನ ಖರೀದಿಸುವವರಲ್ಲಿ ಜಾಗೃತಿ  ಮೂಡಿಸಲು ನಾಳೆ ಮೈಸೂರಲ್ಲಿ ವಿಚಾರ ಸಂಕಿರಣ

ಮೈಸೂರು: ಮನೆ, ನಿವೇಶನ ಖರೀದಿಸಲು ಬಯಸುವವರಿಗೆ ವಂಚನೆ, ಅವ್ಯವಹಾರದ ಜಾಗೃತಿ ಮೂಡಿಸುವುದಕ್ಕಾಗಿ ಜು.13ರಂದು ಸಂಜೆ 4.30ರಿಂದ 7.30ರವರೆಗೆ ಮೈಸೂರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ್ ಕ್ರೀಡಾಂಗಣದ ಮುಂಭಾಗವಿರುವ ಹೊಟೇಲ್ ವಿಲ್ಲಾ ಪಾರ್ಕ್‍ನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇಷನ್ ಕೋರ್ ಕಮಿಟಿ ಅಧ್ಯಕ್ಷ ಟಿ.ಜಿ.ಆದಿಶೇಷನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನ್ಯಾಷನಲ್ ರಿಯಲ್ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇ ಷನ್ (ನರೆಡ್ಕೊ) ವತಿಯಿಂದ ರೆರಾ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ) ಜಾರಿಯಾದ ನಂತರ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಾದ ಬೆಳವಣಿಗೆ ಕುರಿತಾಗಿ ಈ ವಿಚಾರ ಗೋಷ್ಠಿ ನಡೆಸಲಾಗುತ್ತಿದೆ.

ಭಾರತದಲ್ಲೇ ಮೊದಲ ರೆರಾ ಸಲಹೆಗಾರರ, ಉದ್ಯಮ ತಜ್ಞ ವಿನಯನ್ ತ್ಯಾಗರಾಜ್ ರೆರಾ ಕಾಯ್ದೆ ಜಾರಿಯಾದ ನಂತರದ ಬೆಳವಣಿಗೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಡೆಯುತ್ತಿರುವ ಅನಿಯಂತ್ರಿತ ವಂಚನೆ ಹಾಗೂ ಅಮಾಯಕ ಗ್ರಾಹಕರಿಗಾಗುತ್ತಿರುವ ಅನಾಹುತಗಳನ್ನು ತಪ್ಪಿಸಲು ರೆರಾ ಕಾಯ್ದೆ ಸಹಾಯವಾಗುತ್ತಿದೆ. ಗೋಷ್ಠಿಯ ನಂತರ ಸಂವಾದ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9108363211 ಸಂಪರ್ಕಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಟ್ರೆಂಡ್ಸ್‍ಹೌಸಿಂಗ್ ವ್ಯವಸ್ಥಾಪಕ ಸುಬ್ರಮಣ್ಯಂ, ನರೆಡ್ಕೊ ರಾಜಾಧ್ಯಕ್ಷ ಮನೋಜ್‍ಲೋಧ, ಸಂಚಾಲಕ ದಿವ್ಯೇಶ್, ನಾಗೇಶ್ ಇದ್ದರು.