Tag: Real Estate

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ
ಮೈಸೂರು

ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರ ಇಂದಿನಿಂದ ಜಾರಿ

January 1, 2019

ಮೈಸೂರು: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗ ಸೂಚಿದರ (ಗೈಡ್‍ಲೈನ್ಸ್ ರೇಟ್) ನಾಳೆ(ಜ.1)ಯಿಂದಲೇ ಅನ್ವಯ ವಾಗಲಿದ್ದು, ಮೈಸೂರಿನಲ್ಲಿ ಶೇ.5ರಿಂದ 25ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಆಸ್ತಿ ನೋಂದಣಿ ಶುಲ್ಕವೂ ಹೆಚ್ಚಾಗಿದೆ. ಮೈಸೂರು ನಗರದ 4 ಉಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಜಮೀನು, ಮನೆ, ನಿವೇಶನ, ಫ್ಲ್ಯಾಟ್ ನೋಂದಣಿ ವೆಚ್ಚದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಕೃಷಿ ಜಮೀನು, ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿ, ವಾಣಿಜ್ಯ ಹಾಗೂ ವಸತಿಯೇತರ ಉದ್ದೇಶಿತ ಸ್ಥಿರಾಸ್ತಿ, ಮೂಲೆ ನಿವೇಶನ, ಎರಡೂ…

ನಿವೇಶನ ಕೊಡುವುದಾಗಿ ಹಣ ಪಡೆದು ವಂಚನೆ: 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮೈಸೂರು

ನಿವೇಶನ ಕೊಡುವುದಾಗಿ ಹಣ ಪಡೆದು ವಂಚನೆ: 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

August 27, 2018

ಮೈಸೂರು: ರಿಯಾಯಿತಿ ಮತ್ತು ಸುಲಭ ಕಂತಿನಲ್ಲಿ ವಿವಿಧ ಬಡಾವಣೆಗಳಲ್ಲಿ ನಿವೇಶನ ಕೊಡುವುದಾಗಿ ಕೋಟ್ಯಾಂತರ ರೂ. ವಂಚಿಸಿ 14 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ರಾಜೀವ ನಗರದಲ್ಲಿ ಮೈಸೂರು ಹೋಂ ಡೆವಲಪರ್ಸ್ ಎಂಬ ಕಂಪನಿ ನಡೆಸುತ್ತಿದ್ದ ಸಯ್ಯದ್ ನಿಜಾಂ ಅಲಿ ಎಂಬಾತನೇ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಇದೀಗ ಸೆರೆ ಸಿಕ್ಕವ ನಾಗಿದ್ದಾನೆ. ಆರೋಪಿ ಸಯ್ಯದ್ ನಿಜಾಂ ಅಲಿ ಮೈಸೂರು ತಾಲೂಕು, ಕಸಬಾ ಹೋಬಳಿ ಹಾಗೂ ಲಿಂಗಾಂಬುಧಿ ಗ್ರಾಮ, ರಾಜಾಜಿನಗರ ಬಡಾವಣೆ, ಆರ್.ಆರ್. ನಗರದಲ್ಲಿ ರಿಯಾಯಿತಿ…

ಮನೆ, ನಿವೇಶನ ಖರೀದಿಸುವವರಲ್ಲಿ ಜಾಗೃತಿ  ಮೂಡಿಸಲು ನಾಳೆ ಮೈಸೂರಲ್ಲಿ ವಿಚಾರ ಸಂಕಿರಣ
ಮೈಸೂರು

ಮನೆ, ನಿವೇಶನ ಖರೀದಿಸುವವರಲ್ಲಿ ಜಾಗೃತಿ  ಮೂಡಿಸಲು ನಾಳೆ ಮೈಸೂರಲ್ಲಿ ವಿಚಾರ ಸಂಕಿರಣ

July 13, 2018

ಮೈಸೂರು: ಮನೆ, ನಿವೇಶನ ಖರೀದಿಸಲು ಬಯಸುವವರಿಗೆ ವಂಚನೆ, ಅವ್ಯವಹಾರದ ಜಾಗೃತಿ ಮೂಡಿಸುವುದಕ್ಕಾಗಿ ಜು.13ರಂದು ಸಂಜೆ 4.30ರಿಂದ 7.30ರವರೆಗೆ ಮೈಸೂರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ್ ಕ್ರೀಡಾಂಗಣದ ಮುಂಭಾಗವಿರುವ ಹೊಟೇಲ್ ವಿಲ್ಲಾ ಪಾರ್ಕ್‍ನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇಷನ್ ಕೋರ್ ಕಮಿಟಿ ಅಧ್ಯಕ್ಷ ಟಿ.ಜಿ.ಆದಿಶೇಷನ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನ್ಯಾಷನಲ್ ರಿಯಲ್ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇ ಷನ್ (ನರೆಡ್ಕೊ) ವತಿಯಿಂದ ರೆರಾ (ರಿಯಲ್ ಎಸ್ಟೇಟ್…

Translate »