ಮೈಸೂರು, ಜು.27(ಆರ್‍ಕೆಬಿ)- ಈ ವರ್ಷದ ಆಷಾಢ ಶುಕ್ರವಾರಗಳು ಹಾಗೂ ಚಾಮುಂಡೇಶ್ವರಿ ವರ್ಧಂತಿ ಮಹೋ ತ್ಸವ ಸಂದರ್ಭದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶ ಶುಲ್ಕದಿಂದ ಒಟ್ಟು 1.50 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 4 ಆಷಾಢ ಶುಕ್ರವಾರಗಳು ಹಾಗೂ ವರ್ಧಂತಿ ಮಹೋ ತ್ಸವ ಸೇರಿ ಒಟ್ಟು ರೂ.1,50,15,870-00 ಸಂಗ್ರಹವಾಗಿದೆ. ಇದು ಕಳೆದ ವರ್ಷದ ಆಷಾಢ ಮಾಸದ ಆದಾಯಕ್ಕೆ ಹೋಲಿ ಸಿದರೆ 48,98,670-00 ರೂ.ಗಳಷ್ಟು ಹೆಚ್ಚಳ ವಾಗಿದೆ. ಕಳೆದ ವರ್ಷ 2018ರಲ್ಲಿ ರೂ. 1,02,17,200-00 ಸಂಗ್ರಹವಾಗಿತ್ತು. 2017 ರಲ್ಲಿ 1,03,83,030-00 ಸಂಗ್ರಹವಾಗಿತ್ತು.
ಈ ವರ್ಷ ಟಿಕೆಟ್ ದರ ರೂ.50 ಮತ್ತು 300 ರೂ.ಗಳನ್ನು ನಿಗದಿಪಡಿಸ ಲಾಗಿತ್ತು. ಪ್ರತೀ ವರ್ಷದ ಆಷಾಢ ಮಾಸ ದಲ್ಲಿ ಚಾಮುಂಡಿಬೆಟ್ಟ ದೇವಸ್ಥಾನ ಪ್ರವೇಶ ಶುಲ್ಕದ ಆದಾಯ ಹಂತಹಂತವಾಗಿ ಏರು ತ್ತಿದ್ದು, 2015ರಲ್ಲಿ ತಲಾ ರೂ.50ರಂತೆ ರೂ.29,67,550-00 ಸಂಗ್ರಹವಾಗಿತ್ತು.
2016ರಲ್ಲಿ ತಲಾ ರೂ.50ರಂತೆ ರೂ. 38,73,300-00 ಸಂಗ್ರಹವಾಗಿದ್ದರೆ, 2017ರಲ್ಲಿ ರೂ.50 ಮತ್ತು ರೂ.300ರ ಪ್ರವೇಶ ಶುಲ್ಕದಲ್ಲಿ 1,03,83,030-00, 2018ರಲ್ಲಿ ರೂ.50 ಮತ್ತು ರೂ.300ರ ಶುಲ್ಕದಂತೆ ರೂ.1,02,17,200-00 ರೂ. ಸಂಗ್ರಹವಾಗಿತ್ತು.
ಅಂತೆಯೇ ಈ ವರ್ಷ ರೂ.1,50, 15,870-00 ಸಂಗ್ರಹವಾಗಿದೆ ಎಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ