ಗ್ರಾಪಂ ಸದಸ್ಯರಿಗೆ ನಿಂದನೆ: ಎಸ್‍ಐ ವಿರುದ್ಧ ಪ್ರತಿಭಟನೆ

ಮೈಸೂರು:  ಇಲವಾಲ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಗ್ರಾಪಂ ಸದಸ್ಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ನೇತೃತ್ವ ದಲ್ಲಿ ಗುಂಗ್ರಾಲ್ ಛತ್ರದ ಗ್ರಾಮಸ್ಥರು ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜನಾಯಕ ಅವರು ರಾಮನಹಳ್ಳಿ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪಿಸಿದರು. ಇಲವಾಲ ಠಾಣೆ ಎಎಸ್‍ಐ ಮುದ್ದು ಮಾದಪ್ಪ ಗಣಪತಿಯನ್ನು ವಿಸರ್ಜಿಸುವಂತೆ ಸಿದ್ದರಾಜ ನಾಯಕ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಕೂಡಲೇ ಅವರನ್ನು ಅಮಾ ನತು ಮಾಡಬೇಕು ಎಂದು ಆಗ್ರಹಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಕರೀಂ ರಾವತ್ ಅವರಿಗೆ ಮುದ್ದು ಮಾದಪ್ಪ ಅವರನ್ನು ಅಮಾನತು ಮಾಡು ವಂತೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಬಳಿಕ ಪ್ರತಿಭಟನೆ ಕೈಬಿಟ್ಟರು. ಗುಂಗ್ರಾಲ್ ಛತ್ರದ ಗ್ರಾಪಂ ಸದಸ್ಯ ಸಿದ್ದರಾಜನಾಯಕ, ವಕೀಲ ಪಡುವಾರಹಳ್ಳಿ ರಾಮಕೃಷ್ಣ, ಹಿನಕಲ್ ಕೆಂಪನಾಯಕ, ದೇವರಾಜು ಟಿ.ಕಾಟೂರು, ವಿನೋದ್ ನಾಗವಾಲ, ವಿನೋದ್ ನಾಯಕ, ಎಸ್.ಲೋಕೇಶ್, ವೆಂಕಟೇಶ್ ನಾಯಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.