ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸೂಚನೆ
ಹಾಸನ: ಜಿಲ್ಲೆಯ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಧಿಕಾರಿಗಳು ವಿಶೇಷ ನಿಗಾವಹಿಸಬೇಕು ಎಂದು ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಯಾಗಬೇಕು. ಅದಕ್ಕೆ ಅಗತ್ಯವಿರುವ ಅನು ದಾನವನ್ನು ಶೀಘ್ರವಾಗಿ ಒದಗಿಸಲಾಗು ವುದು. ಕೊಳವೆ ಬಾವಿ ಪೈಪ್‍ಲೈನ್ ಅಳ ವಡಿಕೆಗೆ ಅಗತ್ಯವಿರುವ ಅನುದಾನವನ್ನು ತಾಲೂಕುವಾರು ಪಟ್ಟಿ ಮಾಡಿ ಮಂಜೂ ರಾತಿ ಪಡೆಯಬೇಕು ಎಂದು ಸೂಚಿಸಿದರು.
ಕುಡಿಯುವ ನೀರು ಹಾಗೂ ಬರ ಪರಿ ಹಾರ ಯೋಜನೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಹಾಗಾಗಿ, ಯಾರೂ ಕೂಡ ನೀರಿನ ಬವಣೆಯಿಂದ ಪರಿತಪಿಸದಂತೆ ಎಚ್ಚರ ವಹಿಸಬೇಕು. ಅರಸೀಕೆರೆ, ಬೇಲೂರು ಹಾಗೂ ಚನ್ನ ರಾಯಪಟ್ಟಣ ತಾಲೂಕುಗಳು ತೀವ್ರ ಬರ ಎದುರಿಸುತ್ತಿವೆ. ಇತರ ತಾಲೂಕುಗಳು ಸಹಾ ಬರಪೀಡಿತ ಎಂದು ಘೋಷಿಸ ಲ್ಪಟ್ಟಿವೆ. ಹಾಗಾಗಿ ಎಲ್ಲಾ ತಾಲೂಕುಗಳಿಗೂ ಕುಡಿಯುವ ನೀರಿನ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅಗತ್ಯ ಪ್ರಮಾಣದ ಅನು ದಾನ ಒದಗಿಸಲಾಗುವುದು ಎಂದು ಹೇಳಿದರು.
ಪ್ರಕೃತಿ ವಿಕೋಪ ನಿಧಿಯಡಿ ಲಭ್ಯ ವಿರುವ ಅನುದಾನವನ್ನು ಪಂಪ್, ಪೈಪ್ ಲೈನ್ ಅಳವಡಿಕೆಗೆ ಬಳಸಬಹುದು. ಎಲ್ಲಾ ಇಲಾಖೆಗಳು ತಮಗೆ ನೀಡಿರುವ ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಪೂರ್ಣ ಗೊಳಿಸಬೇಕು. ಅನುಸೂಚಿತ ಪಂಗಡಗಳ ಅನುದಾನವೇನಾದರೂ ಸದ್ಬಳಕೆಯಾಗ ದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕ್‍ಗಳು ಸರ್ಕಾರದ ಯೋಜನೆ ಗಳ ಸಾಲ ಸೌಲಭ್ಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದರೆ ಅವರ ಮೇಲೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನು ಕೂಲವಾಗುವಂತೆ ಕೆಎಸ್‍ಆರ್‍ಟಿಸಿ ಬಸ್ ಗಳ ಸಂಚಾರ ಕಲ್ಪಿಸಬೇಕು. ಬೆಂಗಳೂರಿಗೆ ಖಾಲಿ ಓಡಾಡುವ ಬಸ್‍ಗಳನ್ನು ನಿಲ್ಲಿಸಿ ಜಿಲ್ಲೆಯ ಗ್ರಾಮೀಣ ಭಾಗಗಳತ್ತ ಮಾರ್ಗ ಬದಲಾಯಿಸಿ ಎಂದು ಹೇಳಿದರು.
ಈ ವೇಳೆ ಸಚಿವರು ಕೃಷಿ, ತೋಟ ಗಾರಿಕೆ, ಮೀನುಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗಳು ರೈತರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸ ಬೇಕು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ಯಾವುದೇ ಕೊರತೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಂ.ಲಿಂಗೇಶ್ ಹಾಗೂ ಹೆಚ್.ಕೆ ಕುಮಾರಸ್ವಾಮಿ ಅವರು ಅರಸೀ ಕೆರೆ, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬರ ನಿರ್ವಹಣೆಗೆ ಲಭ್ಯವಿರುವ ಅನುದಾನ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ ದರು. ಇದೇ ಸಂದರ್ಭ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಂ.ವಿ.ಗೋಪಾಲಸ್ವಾಮಿ, ಶಾಸಕರಾದ ಪ್ರೀತಂ ಜೆ.ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್ ಗೌಡ, ಸಿಇಓ ಪುಟ್ಟ ಸ್ವಾಮಿ ಹಾಗೂ ಸಾಯಿ ಸಮಿತಿ ಅಧ್ಯ ಕ್ಷರು, ನಾಮ ನಿರ್ದೇಶಿತ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಎಲ್ಲಾ ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಯಾಗಬೇಕು. ಇದಕ್ಕಾಗಿ ಅಗತ್ಯ ವಿರುವ ತಾಲೂಕುವಾರು ಅನುದಾನ ವನ್ನು ಒದಗಿಸಲು ಕ್ರಮ ಕೈಗೊಳ್ಳ ಲಾಗುವುದು. ಅಧಿಕಾರಿಗಳು ಕೂಡಲೇ ಅನುಷ್ಠಾನಗೊಳಿಸಿ ಮುಂಜಾಗ್ರತೆಗೆ ಪ್ರಸ್ತಾವನೆ ಸಲ್ಲಿಸಬೇಕು.
-ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ