ಮಧ್ಯಾಹ್ನ 12 ಗಂಟೆ ನಂತರ ಆಡಳಿತ ಕೇಂದ್ರಗಳು ದಲ್ಲಾಳಿ ಕೇಂದ್ರಗಳಾಗುತ್ತವೆ!

ಬೆಂಗಳೂರು: ಬೆಂಗಳೂರಿನ ಬಹುಮಹಡಿ ಆಡಳಿತ ಕೇಂದ್ರಗಳು ಮಧ್ಯಾಹ್ನ 12 ಗಂಟೆಯ ನಂತರ ದಲ್ಲಾಳಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ಇಂತಹ ಕಚೇರಿಗಳಲ್ಲಿ ವರ್ಗಾವಣೆ, ಅನುದಾನ, ಅನುಮೋದನೆ ಕೆಲಸಗಳಿಗೆ ಲಾಬಿ ನಡೆಯುತ್ತದೆ ಎಂದು ಮಾಜಿ ಸಚಿವರೂ ಆದ ಹಾಲಿ ಜೆಡಿಎಸ್ ಶಾಸಕ ಅಡಗೂರು ಹೆಚ್.ವಿಶ್ವನಾಥ್ ವಿಧಾನಸಭೆ ಯಲ್ಲಿ ಆಡಳಿತಾಂಗದ ಬಣ್ಣ ಬಯಲು ಮಾಡಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಆಡಳಿತ ಕೇಂದ್ರಗಳಲ್ಲಿ ದಲ್ಲಾಳಿಗಳೇ ತುಂಬಿರುತ್ತಾರೆ. ತಾಲೂಕು ಕಚೇರಿ ಯಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಯದರ್ಶಿ ಕಚೇರಿ ಮಟ್ಟದ ಕಾರ್ಯಗಳು ಇಲ್ಲಿ ನಡೆಯಬೇಕು. ಆದರೆ ಗ್ರಾಮ ಲೆಕ್ಕಿಗ, ಪೊಲೀಸ್ ಕಾನ್ಸ್‍ಟೇಬಲ್ ಮಾಡಬೇಕಾದ ಕೆಲಸಗಳೂ ಸಚಿವಾಲ ಯದ ಮಟ್ಟದಲ್ಲಿ ನಡೆಯುತ್ತಿದೆ ಎಂದು ವಿವರಿಸಿ, ವರ್ಗಾವಣೆ ವಿಕೇಂದ್ರೀಕರಣ ಆಗದ ಹೊರತು, ಜನರಿಗೆ ನೀಡುವ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಿಲ್ಲ ಎಂದರು. ಆಡಳಿತ ಶಕ್ತಿ ಕೇಂದ್ರಗಳಾದ ವಿಧಾನ ಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಿಗೆ ಮಧ್ಯಾಹ್ನ 12 ಗಂಟೆಯ ನಂತರ ಬಾಗಿಲು ಹಾಕಿಸಿ, ಮುಖ್ಯಮಂತ್ರಿಗಳು ಜನರ ಸಮಸ್ಯೆ ಆಲಿಸಿದರೆ, ಆಡಳಿತ ಯಂತ್ರದ ವಾಸ್ತವ ಸ್ಥಿತಿ ಅರ್ಥವಾಗುತ್ತದೆ ಎಂದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಭಾರವನ್ನು ಮುಖ್ಯಮಂತ್ರಿ ಗಳು ಹಿಂದಕ್ಕೆ ಪಡೆಯಬೇಕು ಎಂದ ಅವರು, ಹಾಗೆ ಹಿಂದಕ್ಕೆ ಪಡೆದರೆ ಶ್ರೀಸಾಮಾನ್ಯನ ಬದುಕಿಗೆ ಸಹಕಾರಿ ಯಾಗಲಿದೆ. ಬೆಳೆ ಸಾಲ ಮನ್ನಾ ಸೇರಿದಂತೆ ಮುಖ್ಯಮಂತ್ರಿ ಗಳು ಪ್ರಕಟಿಸಿರುವ ಕಲ್ಯಾಣ ಕಾರ್ಯಕ್ರಮಗಳಿಗೆ ಸಾರ್ವ ಜನಿಕರ ಹೆಗಲಿಗೆ

ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಿಸಬೇಕು ಎಂದು ಹೇಳಿದರು. ಮೊದಲ ಹಂತದಲ್ಲೇ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ಉದಾಹರಣೆಗೆ ಸಮಾಜ ಕಲ್ಯಾಣ ಇಲಾಖೆ ಒಂದು ಇದ್ದದ್ದು, ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆ ಎಂದು ನಾಲ್ಕು ಇಲಾಖೆಗಳಾಗಿವೆ. ಇದಕ್ಕೆ ನಾಲ್ವರು ಕಾರ್ಯದರ್ಶಿಗಳು, ನಾಲ್ವರು ಆಯುಕ್ತರು ಹಾಗೂ ಉಪ ಆಯುಕ್ತರು ಇರುತ್ತಾರೆ. ಇವರು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಕೆ, ಹಾಸ್ಟೆಲ್ ನಿರ್ವಹಣೆ ಇತ್ಯಾದಿ ಕೆಲಸಗಳನ್ನು ಮಾಡಿಸುತ್ತಿದ್ದರೆ ತೆರಿಗೆದಾರರಿಗೆ ಮೋಸ ಮಾಡಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾ ಯತ್‍ನಲ್ಲೂ 150ರಿಂದ 200 ಮಂದಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಇರುತ್ತಾರೆ. ಯಾರಿಗೂ ಕೆಲಸವೇ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ಚೊಚ್ಚಲ ಬಜೆಟ್‍ನಲ್ಲಿ ಮೆಟ್ರೋ ರೈಲು ಮುಂದುವರಿಕೆ, ಅರ್ಧ ವರ್ತುಲ ರಸ್ತೆ, 6 ಎಲಿವೇಟೆಡ್ ರಸ್ತೆ ನಿರ್ಮಾಣ, ಕಿದ್ವಾಯಿಯಲ್ಲಿ ಮಕ್ಕಳ ಬೋನ್ ಮ್ಯಾರೋ, ಟ್ರಾನ್ಸ್‍ಪ್ಲಾಂಟೇಷನ್‍ಗೆ ಅನುದಾನ ಒದಗಿಸಿರುವುದು, ಸಿಳ್ಳೇಕ್ಯಾತ, ದೊಂಬೀದಾಸ ಸೇರಿದಂತೆ ಶೋಷಿತ ಸಮುದಾಯಗಳ ಅಭಿವೃದ್ಧಿಗೆ 10 ಕೋಟಿ ನೀಡಿರುವುದು ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಧರ್ಮ ಪೀಠಗಳಿಗೆ 25 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಗರ್ಭಿಣ ಯರಿಗೆ 6 ತಿಂಗಳ ಕಾಲ 6 ಸಾವಿರ ರೂ. ನೀಡಿರುವುದು ಮುಖ್ಯಮಂತ್ರಿಗಳ ಮಾತೃ ಹೃದಯಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.