ಮಾತೃಪೂರ್ಣ ಯೋಜನೆ ಸದ್ಬಳಕೆಗೆ ಸಲಹೆ

ಚಾಮರಾಜನಗರ:  ಗರ್ಭಿಣಿ ಯರು, ಬಾಣಂತಿಯರು ಸರ್ಕಾರದ ಮಾತೃ ಪೂರ್ಣ ಯೋಜನೆಯನ್ನು ಸದ್ಬ ಳಕೆ ಮಾಡಿ ಕೊಂಡು ಪೌಷ್ಠಿಕ ಆಹಾರ ವನ್ನು ಸೇವಿಸಿ ಸದೃಢರಾಗಿ ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜೆ. ವಿಶಾಲಾಕ್ಷಿ ಸಲಹೆ ನೀಡಿದರು.

ನಗರದ ಚೆನ್ನಿಪುರದಮೋಳೆ 1 ಮತ್ತು 2ನೇ ಅಂಗನವಾಡಿ ಕೇಂದ್ರದ ಆವರಣ ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯ ದಲ್ಲಿ ಪೌಷ್ಠಿಕ ಕರ್ನಾಟಕ ಹಾಗೂ ಮಾತೃ ವಂದನಾ ಮಾಸಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಬಡತನದಿಂದ ಸರಿಯಾದ ಊಟ, ತಿಂಡಿ ಇಲ್ಲದೆ. ಕಾಲಕಾಲಕ್ಕೆ ತಕ್ಕಂತೆ ಪೌಷ್ಠಿಕ ಆಹಾರ ಕೊರತೆಯಿಂದಾಗಿ ಬಹಳ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಬಾಲ್ಯವಿವಾಹ ಮಾಡುವುದರಿಂದ ಮಾನ ಸಿಕ, ದೈಹಿಕವಾಗಿ ಸದೃಢವಿಲ್ಲದೆ ರಕ್ತಹೀನತೆ ಯಿಂದ ಸಾವು, ತಾಯಿ-ಮಗು ತೊಂದರೆ ಯಾಗಿರುವ ಅನೇಕ ನಿದರ್ಶನಗಳಿವೆ. ಇದನ್ನು ಮನಗಂಡ ಸರ್ಕಾರ ಎಲ್ಲರಿಗೂ ಪೌಷ್ಠಿಕ ಆಹಾರ ಸೇವನೆಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಮಧ್ಯಾಹ್ನ ಬಿಸಿಯೂಟ, ಆರೋಗ್ಯ ಕಾರ್ಯಕ್ರಮ ಜಾರಿಗೆ ತಂದಿದೆ. ಇದರ ಜತೆಗೆ ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಬಿಸಿಯೂಟ ನೀಡುವ ಸಲುವಾಗಿ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸದುಪಯೋಗಪಡಿಸಿ ಕೊಂಡು ಆರೋಗ್ಯಕರ ಮಗುವನ್ನು ಪಡೆ ಯಬೇಕು ಎಂದು ಹೇಳಿದರು.
ಬಾಲವಿವಾಹ ತ್ಯಜಿಸಿ: ಬಾಲವಿವಾಹ ಒಂದು ಅಕ್ಷಮ್ಯ ಅಪರಾಧವಾಗಿದೆ. ಬಾಲ್ಯ ವಿವಾಹ ಮಾಡುವುದರಿಂದ ಚಿಕ್ಕವಯ ಸ್ಸಿನ ಗಂಡು-ಹೆಣ್ಣಿನ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳಲಿದೆ. ಆದರಿಂದ ಕಾನೂನಿನ ಪ್ರಕಾರ ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಬಹುದು ಎಂದರು.

ಮಕ್ಕಳಿಗೆ ಶಿಕ್ಷಣ ಕೊಡಿಸಿ: ಅಧ್ಯಕ್ಷತೆ ವಹಿ ಸಿದ್ದ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಉಮ್ಮತ್ತೂರುಇಂದುಶೇಖರ್ ಮಾತನಾಡಿ, ಪ್ರತಿಯೊಬ್ಬರು ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರ ಕಾರ್ಯಕ್ರಮಗಳನ್ನು ಕೇಳಲು, ಪ್ರಶ್ನಿಸಲು ಕಾನೂನು ಅರಿವು ತಿಳಿದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ ನಡೆ ಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಆರ್.ಅರುಣ್ ಕುಮಾರ್, ವಕೀಲ ಎ.ರಮೇಶ್, ನಗರಸಭಾ ಸದಸ್ಯರಾದ ಸುರೇಶ್, ಪ್ರಕಾಶ್, ಪಿ.ಸುಧಾ, ಮಹದೇವಯ್ಯ, ಲೋಕೇಶ್ವರಿ, ಭಾಗ್ಯಮ್ಮ, ವೈದ್ಯಾಧಿಕಾರಿ ಡಾ.ಮಮತಾ, ಬಾಲ ನ್ಯಾಯ ಮಂಡಳಿ ಸದಸ್ಯ ಸುರೇಶ್, ಮಕ್ಕಳ ಸಹಾಯ ವಾಣಿ ಸದಸ್ಯ ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿ ಚಾರಕಿ ಕಸ್ತೂರಿ, ಶಿವಲೀಲ ರಾಮಸಮುದ್ರ ವೃತ್ತದ ಅಂಗನವಾಡಿ ಕಾರ್ಯಕರ್ತೆ ರೇವಮ್ಮ, ರತ್ನಮ್ಮ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರು, ಸಹಾಯಕಿಯರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.