ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಸಲಹೆ

ಮೈಸೂರು ಅ.28- ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಭಾರತ ಸರ್ಕಾರವು ಪರಿಸರ ಸಂರಕ್ಷಣೆ ಕಾಯ್ದೆಯಡಿಯಲ್ಲಿ 1986 ತಿದ್ದುಪಡಿ, 1999 ಮತ್ತು 2000 ರನ್ವಯ ದೀಪಾವಳಿ ಹಬ್ಬದ ಸಂದರ್ಭ ದಲ್ಲಿ ಪಟಾಕಿ ಸಿಡಿತದಿಂದ ಉಂಟಾ ಗುವ ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣ ದಲ್ಲಿಡಲು ಕ್ರಮಗಳನ್ನು ಅನುಸರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಡಿಬಿ (ಎ) ಅಥವಾ 145 ಡಿಬಿ (ಸಿ) ಪಿಕೆಗಿಂತ ಅಧಿಕ ಶಬ್ದವನ್ನುಂಟು ಮಾಡುವ ಪಟಾಕಿಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಿದೆ. ಸರ ಪಟಾಕಿಗಳಿಗೆ ಶಬ್ದದ ಮಿತಿ 5 ಲಾಗ್(ಎನ್) ಡಿಬಿ (ಎ) ಗಿಂತ ಕಡಿಮೆ ಇರಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಟಾಕಿ ಮಾರಾಟ ಮಾಡುವುದು, ಸಿಡಿಸುವುದನ್ನು ಕಡ್ಡಾಯ ವಾಗಿ ನಿಷೇಧಿಸಲಾಗಿದೆ. ಮಾರಾಟಗಾರರು ಲೈಸನ್ಸ್ ಪ್ರಾಧಿಕಾರವು ನಿಗದಿಪಡಿಸಿರುವ ಸ್ಥಳದಲ್ಲಿಯೇ ಪಟಾಕಿಗಳನ್ನು ಮಾರಾಟ ಮಾಡುವುದು. ಪಟಾಕಿ ಸಿಡಿಸಿದ ನಂತರ ಘನ ತ್ಯಾಜ್ಯ ವಸ್ತುಗಳಿಂದ ವಾಯು, ಶಬ್ದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ತಯಾರಿಸು ವುದು, ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಲಾಗಿದೆ. ನಗರ ಹಾಗೂ ಪಟ್ಟಣಗಳಲ್ಲಿ ನಿರ್ಜನ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವಂತೆ ಅವರು ಕೋರಿದ್ದಾರೆ.