ಸಂಶೋಧನೆಯಲ್ಲಿ ಸತ್ಯ ಸಂಗತಿ ಕ್ರೂಢೀಕರಿಸಲು ಸಲಹೆ

ಹಾಸನ: ಸಂಶೋ ಧನೆಯಲ್ಲಿ ಸತ್ಯ ಸಂಗತಿಯನ್ನು ಮರೆಮಾ ಚದೆ ಅವುಗಳನ್ನು ಕ್ರೋಢೀಕರಿಸಬೇಕು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಜೆ.ಡಿ. ಜಯದೇವೇಗೌಡ ಸಲಹೆ ನೀಡಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ಗುರುವಾರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ‘ಸಾಮಾಜಿಕ ಸಂಶೋಧನಾ ವಿಧಾನಗಳು’ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಸಂಶೋಧನೆಯಲ್ಲಿ ವಿಷಯದ ಆಯ್ಕೆ ಮುಖ್ಯವಾಗಿದ್ದು, ಮಾರ್ಗದರ್ಶಕರ ಸಲಹೆ ಮೇರೆಗೆ ಸಂಶೋಧನೆ ನಡೆಸಬೇಕಾ ಗುತ್ತದೆ. ಸಂಶೋಧಕರು ಯಾವುದೇ ಕಾರಣಕ್ಕೆ ಪೂರ್ವಾಗ್ರಹ ಪೀಡಿತರಾಗದೆ, ವೈಜ್ಞಾನಿಕ ಮನೋಭಾವ ಉಳ್ಳವರಾಗಿರ ಬೇಕು ಹಾಗೂ ವಸ್ತು ನಿಷ್ಠತೆ ಸ್ವೀಕರಿಸುವ ಮನೋಧೋರಣೆ ಸಂಶೋಧಕನಿಗೆ ಇರಬೇಕು ಎಂದು ಹೇಳಿದರು.

ಸಾಮಾಜಿಕ ಸಮೀಕ್ಷೆ, ಪಕ್ಷ ಅಧ್ಯಯನ, ಅವಲೋಕನ ಹಾಗೂ ಇನ್ನಿತರೆ ಸಂಶೋ ಧನೆಯ ಹಂತಗಳನ್ನು ವಿವರಿಸುವ ಜೊತೆಗೆ ವಿಷಯದ ಆಯ್ಕೆ, ಸಾಹಿತ್ಯದ ಅಧ್ಯಯನ, ಪರಿಕಲ್ಪನೆ, ಸಂಶೋಧನಾ ವಿನ್ಯಾಸ, ಮಾಹಿತಿಯ ಅವಕಾಶ, ಮಾದರಿ ಆಯ್ಕೆ, ಮಾಹಿತಿ ಸಂಗ್ರಹಣೆ, ಮಾಹಿತಿ ವಿಶ್ಲೇಷಣೆ, ವರದಿಯ ತಯಾರಿಕೆ ಹೀಗೆ ಹಲವು ವಿಷಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು. ಪ್ರಾಂಶುಪಾಲ ಪ್ರೊ.ಸಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿನ ಶೈಕ್ಷಣಿಕ ಡೀನ್ ಪ್ರೊ.ವೈ.ಪಿ.ಮಲ್ಲೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥ ಪ್ರೊ.ಶಿವಣ್ಣ, ಸಹಾಯಕ ಪ್ರಾಧ್ಯಾ ಪಕಿ ಪ್ರೊ.ಮಂಜಮ್ಮ, ಕಚೇರಿ ವ್ಯವಸ್ಥಾ ಪಕ ಬಿ.ಎಸ್.ಧರ್ಮಪ್ಪ, ಉಪನ್ಯಾಸಕ ರಾದ ವೀಣಾ, ಎ.ವಿ.ರಶ್ಮಿ, ಬನುಮಾ ಗುರುದತ್, ಲೋಕೇಶ್ ಹಾಗೂ ಅಂತಿಮ ವರ್ಷದ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.